ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ: ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್..!

ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆಲ್ಲಾ ಅಪರಾಧ ಚಟುವಟಿಕೆಗಳು ಸಹ ಬೆಳೆಯುತ್ತಲೇ ಇವೆ. ಅದರಲ್ಲೂ ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ದಾಂಧಲೆಗಳು ಹೆಚ್ಚಾಗುತ್ತಿವೆ.ಇದಕ್ಕೆ ಪೂರಕವೆಂಬಂತೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ರೌಡಿಗಳ ಆಟಾಟೋಪಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ. ಇದರ ಮಧ್ಯೆ ರೌಡಿಗಳ ಕಿರುಕುಳಕ್ಕೆ ವಾಪ್ಯಾರಿಗಳು ಬೇಸತ್ತಿದ್ದು, ಈ ಸಂಬಂಧ ಬೇಕರಿ ಕಾಂಡಿಮೆಂಟ್ಸ್ ಅಸೋಸಿಯೇಷನ್ ಒಂದು ದಿನ ಬಂದ್​​ಗೆ ಕರೆ ಕೊಟ್ಟಿದೆ.

ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ: ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್..!
ಪ್ರಾತಿನಿಧಿಕ ಚಿತ್ರ
Edited By:

Updated on: Jun 14, 2026 | 8:56 PM

ಬೆಂಗಳೂರು, (ಜೂನ್ 14): ಪೋಲಿಸರು (Police), ಜಿಬಿಎ ಅಧಿಕಾರಿಗಳು, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖವಾಗಿ ಪುಡಿ ರೌಡಿಗಳ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಆಗ್ರಹಿಸಿ, ಸಿಲಿಕಾನ್ ಸಿಟಿ ಬೆಂಗಳೂರಿನ ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಸಣ್ಣಪುಟ್ಟ ವ್ಯಾಪಾರಿಗಳು ಗುರುವಾದಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೌದು….ಪುಡಿರೌಡಿಗಳ ಕಿರುಕುಳಕ್ಕೆ ಬೇಸತ್ತು ಬೇಕರಿ ಕಾಂಡಿಮೆಂಟ್ಸ್ ಅಸೋಸಿಯೇಷನ್ (Bengaluru condiments association), ಜೂನ್ 18ರಂದು ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳು ಬಂದ್ಗೆ ಕರೆ ನೀಡಿದೆ. ಈ ಮೂಲಕ ರೌಡಿಗಳ ದಾಂಧಲೆಗಳಿಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದೆ.

ಮುಖ್ಯಾಂಶಗಳು

  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾದ ಪುಡಿರೌಡಿಗಳ ಕಿರಿಕಿರಿ
  • ಅಧಿಕಾರಿಗಳು, ಪುಡಿರೌಡಿಗಳ ಕಿರುಕುಳ ತಪ್ಪಿಸಲು ಕಾಂಡಿಮೆಂಟ್ಸ್ ವ್ಯಾಪಾರಿಗಳು ಆಗ್ರಹ
  • ಗುರುವಾರ ಬೆಂಗಳೂರಿನಲ್ಲಿ ಬೇಕರಿ-ಕಾಂಡಿಮೆಂಟ್ಸ್ ಬಂದ್

ಹೆಚ್ಚಾದ ಪುಡಿರೌಡಿಗಳ ಹಾವಳಿ

ಇತ್ತೀಚೆಗೆ ರಾಜಧಾನಿ ಬೆಂಗಳೂರಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಹಫ್ತಾ ವಸೂಲಿ ಮಾಡುವುದು ಹಣ ಕೊಡದೆ ಇದ್ರೆ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಜೊತೆಯಲ್ಲಿ ಪೋಲಿಸರು, ಜಿಬಿಎ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳ ಹಿಂಸೆ ಬೇರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ಬೆಂಗಳೂರಿನ ಬೇಕರಿ- ಕಾಂಡಿಮೆಂಟ್ಸ್,ಬೀಡಾ ಅಂಗಡಿ, ಸಣ್ಣಪುಟ್ಟ ವ್ಯಾಪಾರಿಗಳು, ಗುರುವಾದಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಗುರುವಾರದಂದು ನಗರದಲ್ಲಿ ಹಾಲು,ಟೀ,ಕಾಫಿ, ಬ್ರೇಡ್, ಬನ್, ಹಣ್ಣು, ತರಕಾರಿ, ಊಟ-ತಿಂಡಿ ಸಿಗೋದು ಬಹುತೇಕ ಡೌಟ್ ಎನ್ನಲಾಗ್ತಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಬೆಂಗಳೂರಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿದ್ಯಂತೆ.ಬದುಕಲು ಅವಕಾಶ ಕೊಡಿ ಇಲ್ಲ ಒಂದು ತೊಟ್ಟು ವಿಷ ಕೊಡಿ ಎಂದು ಪ್ರತಿಭಟನೆಗೆ ಮುಂದಾಗಿರುವ ಬೇಕರಿ- ಕಾಂಡಿಮೆಂಟ್ಸ್ ಮಾಲೀಕರು.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಇನ್ನೂ ಬೆಂಗಳೂರಿನಲ್ಲಿ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಚಿಲ್ಲರೆ ಅಂಗಡಿ, ಬೀದಿಬದಿ ವ್ಯಾಪಾರಿಗಳು, ಮೊಬೈಲ್ ಕ್ಯಾಂಟೀನ್ ಸೇರಿ ಒಟ್ಟು ಸುಮಾರು 58 ಸಾವಿರ ಅಂಗಡಿಗಳಿವೆ. ಈ ಎಲ್ಲಾ ವ್ಯಾಪಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಜೂನ್ 18ರಂದು   ಅಂಗಡಿ ಕ್ಲೋಸ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ11 ಗಂಟೆಯವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು

ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕೊಡಿ,ಇಲ್ಲ ಉತ್ಪನ್ನಗಳನ್ನು ಸಂಪೂರ್ಣ ನಿಷೇಧಿಸಬೇಕು, ಬೇಕರಿ ಕಾಂಡಿಮೆಂಟ್ಸ್ ಮಾಲೀಕರು ಹಣ ಕೊಟ್ಟು ಖರೀದಿ ಮಾಡಿದ ಅ ವಸ್ತುಗಳನ್ನು ಅಧಿಕಾರಿಗಳು ಸೀಜ್ ಮಾಡ್ತಿದ್ದಾರೆ ಅದನ್ನು ನಿಲ್ಲಿಸಬೇಕು. ಹಾಗೇ ಅಧಿಕಾರಿಗಳ ದರ್ಪ ನಿಲ್ಲಿಸಬೇಕು. ಪುಡಿ ರೌಡಿಗಳ ರೌಡಿಸಂ ಕಡಿವಾಣ ಹಾಕಬೇಕು.

ಈ ಬಗ್ಗೆ ಮಾತನಾಡಿದ ವ್ಯಾಪಾರಿ, ಇತ್ತೀಚೆಗೆ ಬೇಕರಿ ಕಾಂಡಿಮೆಂಟ್ಸ್ ಮಾಲೀಕರಿಗೆ ಕಿರುಕುಳ ಹೆಚ್ಚಾಗಿದೆ. ಹಣ ಕೊಡದೆ ಕಿರುಕುಳ ಕೊಡ್ತಾರೆ. ಇದರಿಂದ ಗುರುವಾರ ಎಲ್ಲಾ ಸಣ್ಣಪುಟ್ಟ ವ್ಯಾಪಾರಿಗಳು ಸೇರಿಕೊಂಡು ಅಂಗಡಿ ಕ್ಲೋಸ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ11 ಗಂಟೆಯವರೆಗೆ ಮುಷ್ಕರ ಮಾಡುತ್ತೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us