ಸ್ನೇಹ, ಸಲುಗೆಯಿಂದ ಇರಲು ನಿರಾಕರಿಸಿದಕ್ಕೆ ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಕ್ಯಾಬ್ ಡ್ರೈವರ್ ಅರೆಸ್ಟ್

ತನ್ನ ಜೊತೆಗೆ ಸ್ನೇಹ ಸಲುಗೆಯಿಂದ ಇರುವುದಕ್ಕೆ ಒಪ್ಪಿಲ್ಲಾ ಅನ್ನೊ ಕಾರಣಕ್ಕೆ ಕ್ಯಾಬ್ ಡ್ರೈವರ್ ಮಹಿಳೆಯನ್ನು ಕೊಲೆ ಮಾಡಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸ್ನೇಹ, ಸಲುಗೆಯಿಂದ ಇರಲು ನಿರಾಕರಿಸಿದಕ್ಕೆ ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಕ್ಯಾಬ್ ಡ್ರೈವರ್ ಅರೆಸ್ಟ್
ದೀಪಾ
ಆಯೇಷಾ ಬಾನು

Updated on: Mar 09, 2023 | 2:39 PM

ಬೆಂಗಳೂರು: ಇಂದಿರಾನಗರದಲ್ಲಿ(Indiranagar) ಮಹಿಳೆಯನ್ನು ಕೊಲೆ(Murder) ಮಾಡಿ ಆಕೆಯ ಶವವನ್ನು ನಗರದ ಹೊರ ವಲಯದಲ್ಲಿ ಎಸೆದು ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಾಗಲೂರು ಪೊಲೀಸರು(Bagalur Police) ಬಂಧಿಸಿದ್ದಾರೆ. ಭಿಮರಾವ್ ಬಂಧಿತ ಅರೋಪಿ. ದೀಪಾ ಕೊಲೆಯಾದ ಮಹಿಳೆ.

ಸ್ನೇಹ, ಸಲುಗೆಯಿಂದ ಇರಲು ನಿರಾಕರಿಸಿದ್ದಕ್ಕೆ ಕೊಲೆ

ಹೊಸಕೋಟೆಯ ಖಾಸಗಿ ಕಂಪನಿಯೊಂದರಲ್ಲಿ ದೀಪಾ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಆರೋಪಿ ಭಿಮರಾವ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಭಿಮರಾವ್ ಪ್ರತಿ ದಿನ ದೀಪಾಳನ್ನು ಇಂದಿರಾನಗರದಿಂದ ಪಿಕಮ್-ಡ್ರಾಪ್ ಮಾಡುತ್ತಿದ್ದ. ದೀಪಾ ಕಂಡರೆ ಭಿಮರಾವ್​ಗೆ ಒಂದು ರೀತಿಯ ಹುಚ್ಚು ಮೋಹ. ಹೀಗಾಗಿ ಮಹಿಳೆ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ. ತನ್ನ ಜೊತೆಗೆ ಗೆಳತಿಯಂತೆ ಇರು ಎಂದು ಪೀಡಿಸುತ್ತಿದ್ದ. ಆದರೆ ದೀಪಾಗೆ ಇದು ಇಷ್ಟವಾಗುತ್ತಿರಲಿಲ್ಲ. ಆಕೆ ಆತನ ಜೊತೆ ಎಷ್ಟು ಅಂದರ ಅಷ್ಟರಂತೆ ಇದ್ದರು.

ಇದನ್ನೂ ಓದಿ: ವಿಜಯಪುರ: ಇಟ್ಟಲ್ಲಿಯೇ ಸುಟ್ಟು ಹೋದ ಓರ್ವ ವಿದ್ಯಾರ್ಥಿನಿಯ ಮೂರು ಹಾಲ್​ಟಿಕೆಟ್​! ವಾಮಚಾರ ಶಂಕೆ

ಕೊಲೆ ಮಾಡಿ ಕಾರಿನಲ್ಲಿ ಮೃತ ದೇಹ ಸಾಗಿಸಿ ಎಸ್ಕೇಪ್

ಫೆಬ್ರವರಿ 27 ರಂದು ಇಂದಿರಾನಗರದಲ್ಲಿ ದೀಪಾರನ್ನು ಪಿಕ್ ಅಪ್ ಮಾಡುವಾಗ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಆರೋಪಿ ಕಬ್ಬಿಣದ ಜಾಕ್ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಆಗ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ನಂತರ ಕಾರಿನಲ್ಲಿ ಮೃತ ದೇಹ ಸಾಗಿಸಿ ಬೆಂಗಳೂರು ಹೊರ ವಲಯದ ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದಾನೆ. ಮಾರ್ಚ್ ನಾಲ್ಕರಂದು ಮೃತ ದೇಹದ ಬಗ್ಗೆ ಬಾಗಲೂರು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಮಾಹಿತಿ ಆಧರಿಸಿ ಮೃತ ದೇಹವನ್ನು ಅಸ್ಪತ್ರೆಗೆ ರವಾನಿಸಲಾಗಿತ್ತು. ಪೊಲೀಸರು ಇದು ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿದ್ದರು. ತನಿಖೆ ವೇಳೆ ಮೃತ ಮಹಿಳೆ ಇಂದಿರಾನಗರ ನಿವಾಸಿ ದೀಪಾ ಎಂಬುದು ಬೆಳಕಿಗೆ ಬಂದಿದೆ. ಮೃತಳ ಬಟ್ಟೆ ಮತ್ತು ವಾಚಿನ ಮೂಲಕ ಗುರುತು ಪತ್ತೆ ಮಾಡಲಾಗಿದೆ.

ಮತ್ತೊಂದೆಡೆ ಇತ್ತ ಮಹಿಳೆ ನಾಪತ್ತೆ ಬಗ್ಗೆ ಆಕೆಯ ಕುಟುಂಬಸ್ಥರು ಇಂದಿರಾನಗರದಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಸದ್ಯ ಬಾಗಲೂರು ಪೊಲೀಸರು ಆರೋಪಿ ಭಿಮರಾಯ್ ಅರೆಸ್ಟ್ ಮಾಡಿದ್ದಾರೆ. ತನ್ನ ಜೊತೆಗೆ ಸ್ನೇಹ ಸಲುಗೆಯಿಂದ ಇರುವುದಕ್ಕೆ ಒಪ್ಪಿಲ್ಲಾ ಅನ್ನೊ ಕಾರಣಕ್ಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:35 pm, Thu, 9 March 23

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us