ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್​​ನಲ್ಲಿ ಡೇಟಿಂಗ್? ಅಧಿಕಾರಿಗಳೇ ಶಾಕ್!

ಕಬ್ಬನ್ ಪಾರ್ಕ್​​ ಇದೀಗ ಡೇಟಿಂಗ್ ಸ್ಪಾಟ್‌ ಆಗುತ್ತಿದೆಯಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ. ಏಕೆಂದರೆ ಬ್ಲೈಂಡ್ ಡೇಟ್ ಆಯೋಜಿಸಲಾಗಿದೆ. ಇದಕ್ಕಾಗಿ ಬುಕ್‌ಮೈ ಶೋನಲ್ಲಿ ಆಗಸ್ಟ್​ 31ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕ ಸ್ಥಳವನ್ನು ಡೇಟಿಂಗ್ ಸ್ಥಳವಾಗಿ ಬಳಸುವುದನ್ನು ವಿರೋಧಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್​​ನಲ್ಲಿ ಡೇಟಿಂಗ್? ಅಧಿಕಾರಿಗಳೇ ಶಾಕ್!
Kabban Park
Edited By:

Updated on: Aug 02, 2025 | 1:52 PM

ಬೆಂಗಳೂರು, ಆಗಸ್ಟ್​ 02: ಕಬ್ಬನ್ ಪಾರ್ಕ್ (Cubbon Park)​​ ಸಿಲಿಕಾನ್​ ಸಿಟಿ (bangaluru) ಜನರ ನೆಚ್ಚಿನ ತಾಣಗಳಲ್ಲಿ ಒಂದು. ಅದರಲ್ಲೂ ವಾಯು ವಿಹಾರಿಗಳಿಗೆ, ಪರಿಸರ ಪ್ರಿಯರಿಗೆ, ಪ್ರೇಮಿಗಳಿಗೆ ನೆಚ್ಚಿನ ಸ್ಪಾಟ್. ಐತಿಹಾಸಿಕ ಹಿನ್ನೆಲೆ ಇರುವ ಕಬ್ಬನ್ ಪಾರ್ಕ್​​ ಇದೀಗ ಡೇಟಿಂಗ್ ಸ್ಪಾಟ್‌ ಆಗುತ್ತಿದೆಯಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ. ಏಕೆಂದರೆ ಬುಕ್‌ ಮೈ ಶೋನಲ್ಲಿ ಕಬ್ಬನ್ ಪಾರ್ಕ್​​ನಲ್ಲಿ ಯುವಕ-ಯುವತಿಯರ ಬ್ಲೈಂಡ್ ಡೇಟ್​ಗೆ ಅವಕಾಶ ಕಲ್ಪಿಸಿಲಾಗಿದೆ. ಸದ್ಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬ್ಲೈಂಡ್ ಡೇಟಿಂಗ್​​ಗೆ ಸಾವಿರಾರು ರೂ

ಬ್ಲೈಂಡ್ ಡೇಟಿಂಗ್​ ಬಗ್ಗೆ ಬುಕ್ ಮೈ ಶೋನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆಗಸ್ಟ್​ 31ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಡೇಟಿಂಗ್ ಮಾಡಲು ಹುಡಗಿಯರಿಗೆ 199 ರೂ ಪ್ರವೇಶ ಶುಲ್ಕ ನಿಗದಿಪಡಿಸಿದ್ದರೆ, ಪುರಷರಿಗೆ 999 ದರ ನಿಗದಿ ಮಾಡಲಾಗಿದೆ. ಈ ಡೇಟಿಂಗ್​ಗೆ ಈಗಾಗಲೇ ಸಾವಿರಕ್ಕೂ ಹೆಚ್ಚು ಜನರು ಲೈಕ್ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಾಳೆ ವೀಲ್‌ಚೇರ್ ಸ್ನೇಹಿ ಶೌಚಾಲಯ ಉದ್ಘಾಟನೆ

ಸದ್ಯ ಇಲಾಖೆಯ ಅನುಮತಿ ಇಲ್ಲದೇ ಡೇಟಿಂಗ್​ ನಡೆಯುತ್ತಿದೆಯಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ. ಏಕೆಂದರೆ ಈ ಸುದ್ದಿ ಕೇಳಿ ತೋಟಗಾರಿಕೆಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಡೇಟಿಂಗ್‌ಗೆ ಅವಕಾಶ ನೀಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಕೂಡ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಇಡೀ ಬೆಂಗಳೂರಿನಲ್ಲಿ 3% ಮಾತ್ರ ಹಸಿರು ಪರಿಸರ: ಐಐಎಸ್ಸಿ ತಜ್ಞರ ವರದಿಯ ಶಾಕಿಂಗ್ ಅಂಶ ಬಹಿರಂಗ

ಡೇಟಿಂಗ್ ಎಂಬುವುದು ಖಾಸಗಿ ಸಂಗತಿಯಾಗಿದ್ದು, ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ನೀಡುತ್ತಿರುವುದು ದೊಡ್ಡ ಚರ್ಚೆಗೂ ಕಾರಣವಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಓದುಗರಿಗೆ ನೆಚ್ಚಿನ ತಾಣ ಕಬ್ಬನ್‌ ಪಾರ್ಕ್ ಡೇಟಿಂಗ್‌ ಸ್ಪಾಟ್‌ ಮಾಡಲು ಯತ್ನಿಸಲಾಗುತ್ತಿದ್ದು, ತೋಟಗಾರಿಕೆ ಇಲಾಖೆ ಕಾನೂನು ಹೋರಾಟಕ್ಕೂ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:05 pm, Sat, 2 August 25