AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್: 34 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ!

"ಕರ್ನಾಟಕ ಪೊಲೀಸರು ಏನ್ ಮಾಡ್ತಾರೆ ನೋಡೋಣ" ಎಂದು ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳಿಗೆ ಬೆಂಗಳೂರಿನ ಹೆಬ್ಬಾಳ ಪೊಲೀಸರು ಶಾಕ್ ನೀಡಿದ್ದಾರೆ. ದೆಹಲಿ ಹಾಗೂ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ನೈಜೀರಿಯಾ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿ, ಖಾದ್ಯ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್: 34 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ!
ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್
ಭಾವನಾ ಹೆಗಡೆ
|

Updated on: Jul 15, 2026 | 2:13 PM

Share

ಮುಖ್ಯಾಂಶಗಳು

  • ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ನಾಲ್ವರು ಡ್ರಗ್ ಪೆಡ್ಲರ್‌ಗಳ ಬಂಧನ.
  • ಹೆಬ್ಬಾಳ ಪೊಲೀಸರಿಂದ 34 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ.
  • ಫುಡ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಹಾಗೂ ಮಣಿಪುರ ಮೂಲದವರು.

ಬೆಂಗಳೂರು, ಜುಲೈ 15: “ಕರ್ನಾಟಕ ಪೊಲೀಸರು ಎಷ್ಟೇ ಕಣ್ಗಾವಲು ಇಟ್ಟರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ” ಎಂದು ಸೋಷಿಯಲ್ ಮೀಡಿಯಾ ಮೂಲಕ ಸವಾಲು ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳ (Drug Peddlers) ಜಾಲವನ್ನು ಹೆಬ್ಬಾಳ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ನೈಜೀರಿಯಾ ಪ್ರಜೆ ಸೇರಿ ನಾಲ್ವರು ಕುಖ್ಯಾತ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 580 ಗ್ರಾಂ ಎಂಡಿಎಂಎ (MDMA) ಕ್ರಿಸ್ಟಲ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಕಿಂಗ್‌ಪಿನ್

ಕೆಲ ದಿನಗಳ ಹಿಂದಷ್ಟೇ ಹೆಬ್ಬಾಳ ಪೊಲೀಸರು 34 ಕೋಟಿ ರೂ. ಮೌಲ್ಯದ 17 ಕೆಜಿ 400 ಗ್ರಾಂ ಡ್ರಗ್ಸ್ ಜಪ್ತಿ ಮಾಡಿ ಎಂಟು ಮಂದಿಯನ್ನು ಜೈಲಿಗಟ್ಟಿದ್ದರು. ಈ ಕಾರ್ಯಾಚರಣೆ ಬೆನ್ನಲ್ಲೇ, ನೈಜೀರಿಯಾದಲ್ಲಿದ್ದ ಪ್ರಮುಖ ಆರೋಪಿಯೊಬ್ಬ ಇಲ್ಲಿನ ಸ್ಥಳೀಯ ಪೆಡ್ಲರ್‌ಗಳಿಗೆ ಮೆಸೇಜ್ ಮಾಡಿದ್ದ. ಬೆಂಗಳೂರಿನಲ್ಲಿ ಈಗ ಡ್ರಗ್ಸ್ ಪೆಡ್ಲಿಂಗ್ ಮಾಡುವುದು ಕಷ್ಟವಾಗುತ್ತಿದೆ, ಕರ್ನಾಟಕ ಪೊಲೀಸರು ಫುಲ್ ಟೈಟ್ ಮಾಡ್ತಿದ್ದಾರೆ. ಆದರೂ ನಾವು ಬಿಸಿನೆಸ್ ಮುಂದುವರಿಸೋಣ, ಪೊಲೀಸರು ಏನ್ ಮಾಡ್ತಾರೆ ನೋಡೋ ಎಂದು ಚಾಲೆಂಜ್ ಹಾಕಿದ್ದ.

ಖಾದ್ಯ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ಸಾಗಾಟ

ಪೊಲೀಸರ ಕಣ್ಣು ತಪ್ಪಿಸಲು ಆರೋಪಿಗಳು ವಿವಿಧ ಫುಡ್ ಐಟಂ (ಖಾದ್ಯ ಪದಾರ್ಥ)ಗಳ ಪ್ಯಾಕೆಟ್‌ಗಳ ಒಳಗೆ ಎಂಡಿಎಂಎ ಡ್ರಗ್ಸ್ ಇಟ್ಟು ಸಾಗಿಸುತ್ತಿದ್ದ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಹೆಬ್ಬಾಳ ಪೊಲೀಸರು ಒಟ್ಟು 5 ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.

ನಾಲ್ವರ ಬಂಧನ

ಬೃಹತ್ ಕಾರ್ಯಾಚರಣೆಯ ಮೂಲಕ ಪೊಲೀಸರು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ನೈಜೀರಿಯಾ ಮೂಲದ ಸೊಲೊಮನ್ ಟಚುಕ್ಯೂ ಎಂಬಾತನನ್ನು ಹೆಡೆಮುರಿಕಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಡ್ರಗ್ಸ್ ಹಂಚಿಕೆ ಮಾಡುತ್ತಿದ್ದ ಮಣಿಪುರ ಮೂಲದ ರಾಕಾಂಗ್ಮಿ ತನಿರೋಸ್, ಸ್ಥಳೀಯರಾದ ಮೋಹನ್ ಕುಮಾರ್ ಮತ್ತು ಜಾನ್ಸನ್ ಎಂಬುವವರನ್ನು ಬಂಧಿಸಲಾಗಿದೆ. ಪೊಲೀಸರ ಸವಾಲನ್ನು ಸ್ವೀಕರಿಸಿ ಭರ್ಜರಿ ಬೇಟೆಯಾಡಿದ ಹೆಬ್ಬಾಳ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್
ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ