ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು

| Updated By: Ganapathi Sharma

Updated on: Mar 06, 2025 | 2:53 PM

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ 27 ಮೂಟೆ ಕೂದಲು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಚೀನಾ, ಬರ್ಮಾ, ಹಾಂಕಾಂಗ್‌ಗೆ ರಫ್ತು ಮಾಡಲು ಸಂಗ್ರಹಿಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಕೂದಲನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು
ಕೂದಲು (ಸಾಂದರ್ಭಿಕ ಚಿತ್ರ) ಹಾಗೂ ಕೂದಲು ಕಳ್ಳತನದ ಸಿಸಿಟಿವಿ ದೃಶ್ಯದ ಸ್ಕ್ರೀನ್​​ಗ್ರ್ಯಾಬ್
Follow us on

ಬೆಂಗಳೂರು, ಮಾರ್ಚ್ 6: ನಗದು, ಚಿನ್ನಾಭರಣ ಕಳವಾದ (Theft) ಬಗ್ಗೆ ಆಗಾಗ್ಗೆ ವರದಿಗಳಾಗುತ್ತಿರುತ್ತವೆ. ದೇವಸ್ಥಾನ ಹುಂಡಿಗೂ ಕನ್ನ ಹಾಕುವುದನ್ನು ಕೇಳಿರುತ್ತೇವೆ. ಆದರೆ ಈಗ ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರೊಂದಿಗೆ, ಬೆಂಗಳೂರಲ್ಲಿ (Bengaluru) ಏನು ಸಿಕ್ಕಿದರೂ ಕಳ್ಳರು ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಬೈಕ್ ಆಯ್ತು, ಚಪ್ಪಲಿ ಆಯ್ತು, ದೇವಸ್ಥಾನ ಹುಂಡಿಯೂ ಆಯ್ತು, ಇದೀಗ ಖತರ್ನಾಕ್ ಕಳ್ಳರು ತಲೆಗೂದಲನ್ನೂ ಕದ್ದೊಯ್ದಿದ್ದಾರೆ! ಹೌದು, ಬರೋಬ್ಬರಿ 27 ಮೂಟೆಗ ಕೂದಲು ಕಳವಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ (Soladevanahalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಖದೀಮರ ಕುಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದಲ್ಲ, ಎರಡಲ್ಲ ಮೂಟೆಗಟ್ಟಲೇ ಕೂದಲನ್ನು ಕಳ್ಳರು ಕದೊಯ್ದಿದ್ದಾರೆ. ಸೋಲದೇವನಹಳ್ಳಿ ಬಳಿಯ ಲಕ್ಷ್ಮೀ ಪುರ ಕ್ರಾಸ್‌ನಲ್ಲಿರುವ ಗೋಡೌನ್‌ನಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಕೂದಲಿನ ಮೂಟೆಗಳನ್ನು ಎರಡು ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ.

ಈ ಸಂಬಂದ ಗೋಡೌನ್ ಮಾಲೀಕ ವೆಂಕಟರಮಣ ಎಂಬವರು ದೂರು ನೀಡಿದ್ದಾರೆ. ಆರು ಜನ ಖದೀಮರು ವಾಹನದಲ್ಲಿ ಬಂದು ಕೂದಲು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಬಂಗ್ಲೆಯಂಥ ಮನೆಯಲ್ಲಿ ಹೇರಳ ಚಿನ್ನಾಭರಣ ಮತ್ತು ನಗದು!
ಯುವತಿ ಜತೆ ಲಿವ್ ಇನ್​ನಲ್ಲಿದ್ದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: 3 ಬಂಧನ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!

ಚೀನಾ, ಬರ್ಮಾ, ಹಾಂಕಾಂಗ್​ಗೆ ರಫ್ತಾಗುತ್ತಿತ್ತು ಕೂದಲು

ಮಾಲೀಕ ವೆಂಕಟರಮಣ ಅವರು ಚೀನಾ, ಬರ್ಮಾ, ಹಾಂಕಾಂಗ್‌ಗೆ ಕೂದಲು ರಫ್ತು ಮಾಡುವ ಉದ್ಯಮ ಹೊಂದಿದ್ದಾರೆ. ಕಳೆದ ವಾರ ಚೀನಾದ ವ್ಯಕ್ತಿಗಳು ಬಂದು ವಿಗ್ ತಯಾರಿಕೆಗೆ ಕೂದಲು ಕಳುಹಿಸುವಂತೆ ಮಾತುಕತೆ ನಡೆಸಿದ್ದರು. ಅವರಿಗೆ ಕಳುಹಿಸಿಕೊಡುವುದಕ್ಕಾಗಿ ಕೂದಲನ್ನು ಮೂಟೆ ಕಟ್ಟಿ ಇಡಲಾಗಿತ್ತು. ಇನ್ನೇನು ಎರಡು ದಿನಗಳಲ್ಲಿ ಕೂದಲು ರಫ್ತು ಆಗಬೇಕು ಎನ್ನುವಷ್ಟರಲ್ಲಿ ತಲೆಗೂದಲು ಕಳ್ಳರ ಪಾಲಾಗಿದೆ. 27 ಮೂಟೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. CCTVದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್

ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ವೈಟ್ ಅಂಡ್ ಬ್ಲಾಕ್ ದಂಧೆ ಮೂಲಕ ಕೋಟ್ಯಂತರ ರೂಪಾಯಿ ರೋಡೆ ಮಾಡಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದರು. ಇದೀಗ ಅದರ ಬೆನ್ನಲ್ಲೇ, ಕೂದಲನ್ನೆ ಕಳವು ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೊರಗಡೆ ಇಟ್ಟಿರುವ ಚಪ್ಪಲಿ ಕಳ್ಳತನ, ದೇಗುಲಗಳ ಹುಂಡಿಯಿಂದ ಕಳವು ಮಾಡುವುದು ಇತ್ಯಾದಿ ಪ್ರಕರಣಗಳು ಕೂಡ ಬೆಂಗಳೂರಿನಲ್ಲಿ ಹೆಚ್ಚಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Thu, 6 March 25