ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು

ಬೆಂಗಳೂರಿನ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಅವರು ಉದ್ಯಮಿ ಕಾರ್ತಿಕ್ ಎಂಬುವವರಿಗೆ ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಹಣ ಹಾಗೂ ಒಡವೆಗಳನ್ನು ಪೀಕಿರುವ ಆರೋಪ ಸಾಧನಾ ಮೇಲಿದ್ದು, 1.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು
Image Credit source: tv9
Edited By:

Updated on: Apr 23, 2026 | 1:24 PM

ಬೆಂಗಳೂರು, ಏಪ್ರಿಲ್ 23: ವ್ಯವಹಾರದ ಪ್ರಚಾರಕ್ಕಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಮೊರೆ ಹೋದ ಉದ್ಯಮಿಯೊಬ್ಬರು ಈಗ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವಂತಾಗಿದೆ. ‘ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕ ಕಾರ್ತಿಕ್ ಎಂಬುವವರಿಗೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಎಂಬಾಕೆ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಮೋಷನ್ ಹೆಸರಲ್ಲಿ ಶುರುವಾಗಿತ್ತು ಸ್ನೇಹ

ಕ್ಲಿನಿಕ್ ಪ್ರಚಾರದ ವಿಚಾರವಾಗಿ ಕಾರ್ತಿಕ್ ಅವರಿಗೆ ಸಾಧನಾ ಶೆಟ್ಟಿ ಪರಿಚಯವಾಗಿದ್ದರು. ಪ್ರಮೋಷನ್ ನೆಪದಲ್ಲಿ ಬೆಳೆದ ಸ್ನೇಹ ನಂತರ ಡೇಟಿಂಗ್ ಮಾಡುವ ಮಟ್ಟಕ್ಕೆ ಹೋಗಿತ್ತು. ಆರೋಪದ ಪ್ರಕಾರ, ಇಬ್ಬರೂ ಜೊತೆಗಿದ್ದಾಗ ಸಾಧನಾ ಶೆಟ್ಟಿ ಅವರು ಕಾರ್ತಿಕ್ ಅವರ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿಕೊಂಡಿದ್ದರು ಎನ್ನಲಾಗಿದೆ.

ಕೋಟಿ ರೂ. ಹಣಕ್ಕೆ ಬೇಡಿಕೆ

ಈ ವಿಡಿಯೋಗಳನ್ನು ಇಟ್ಟುಕೊಂಡೇ ಸಾಧನಾ ಶೆಟ್ಟಿ ಬ್ಲ್ಯಾಕ್‌ಮೇಲ್ ತಂತ್ರ ಆರಂಭಿಸಿದ್ದರು. ಆರಂಭದಲ್ಲಿ ಬೆದರಿಕೆ ಹಾಕಿ 5 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಹಾಗೂ 5 ಲಕ್ಷ ರೂಪಾಯಿ ನಗದನ್ನು ಪಡೆದಿದ್ದರು. ಅಷ್ಟೇ ಅಲ್ಲದೆ, 30 ಸಾವಿರ ಮೌಲ್ಯದ ಚಿನ್ನದ ಉಂಗುರ, 70 ಸಾವಿರದ ಚಿನ್ನದ ಚೈನ್ ಹಾಗೂ 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಕೂಡ ಕೊಡಿಸಿಕೊಂಡಿದ್ದರು. ಇಷ್ಟೆಲ್ಲಾ ಕೊಟ್ಟರೂ ದಾಹ ತೀರದ ಸಾಧನಾ ಶೆಟ್ಟಿ, ನಂತರ 1.5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಸಾರದಲ್ಲಿ ಬಿರುಗಾಳಿ

ಕಾರ್ತಿಕ್ ಹಣ ನೀಡಲು ನಿರಾಕರಿಸಿದಾಗ, ಸಾಧನಾ ಶೆಟ್ಟಿ ಆ ಖಾಸಗಿ ವಿಡಿಯೋಗಳನ್ನು ಕಾರ್ತಿಕ್ ಪತ್ನಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಇದರಿಂದ ಕಾರ್ತಿಕ್ ಅವರ ಕುಟುಂಬದಲ್ಲಿ ತೀವ್ರ ಜಗಳವಾಗಿದ್ದು, ಸಂಸಾರದ ಮೇಲೂ ಪರಿಣಾಮ ಬೀರಿತ್ತು. ಬೇರೆ ದಾರಿ ಕಾಣದೆ ಕಾರ್ತಿಕ್ ಈಗ ಜಯನಗರ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ

ದೂರಿನ ಆಧಾರದ ಮೇಲೆ ಪೊಲೀಸರು ಸಾಧನಾ ಶೆಟ್ಟಿಗೆ ನೋಟಿಸ್ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಾಧನಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ. ಆದರೆ, ತನಿಖೆ ಮುಂದುವರಿದಿದ್ದು, ಪೊಲೀಸರು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Thu, 23 April 26

Follow Us