ಬೆಂಗಳೂರು ಕಂಬಳ: ರಿಹರ್ಸಲ್ ಆರಂಭ, ಕೋಣಗಳಿಗೆ ಮಂಗಳೂರಿಂದಲೇ ಬಂದ ಕುಡಿಯುವ ನೀರು
ರಾಜ್ಯ ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ನಡೆಯುತ್ತಿದ್ದು, ಕಂಬಳಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ. ಅದ್ದೂರಿಯಾ ಕಂಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 24, 25, 26 ನೇ ತಾರೀಖಿನಂದು ಕಂಬಳ ನಡೆಯಲಿದ್ದು ರಾಜಕೀಯ ಗಣ್ಯರು, ಸಿನಿಮಾ ತಾರೆಯರು, ಹೆಸರಾಂತ ಕಲಾವಿದರು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಕಂಬಳ ಕಾರ್ಯಕ್ರಮ ಹೊಸ ದಾಖಲೆ ಬರೆಯಲು ಸಿದ್ಧವಾಗುತ್ತಿದೆ.
ಬೆಂಗಳೂರು, ನ.23: ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಸಲಾಗುತ್ತೆ. ಸಾಮಾನ್ಯವಾಗಿ ಈ ಕಂಬಳವನ್ನ ರೈತಾಪಿ ಜನರು ಭತ್ತದ ಕೊಯಿಲಿನ ನಂತರದಲ್ಲಿ ಮನರಂಜನೆಗೋಸ್ಕರ ಈ ಕ್ರೀಡೆಯನ್ನ ಏರ್ಪಡಿಸಲಾಗುತ್ತಿತ್ತು. ಆದ್ರೆ ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ದತೆ ನಡೆಯುತಿದ್ದು, ಇದೇ ಶುಕ್ರವಾರ ಕಂಬಳಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಾಳೆ 10 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗ್ಗೆಯಿಂದಲೇ ಕೋಣಗಳ
ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟಮೊದಲು ಬಾರಿಗೆ ರಾಜಾಧಾನಿಯಲ್ಲಿ ಇದೇ ನೆವೆಂಬರ್ 24, 25, 26 ನೇ ತಾರೀಖಿನಂದು ಕಂಬಳವನ್ನ ಆಯೋಜಿಸಿದ್ದು, ಪ್ಯಾಲೇಸ್ ಗ್ರೌಂಡ್ ನಲ್ಲಿ ಈಗಾಗಲೇ ಎಲ್ಲಾ ರೀತಿಯಾ ಸಿದ್ದತೆಗಳು ನಡೆಯುತ್ತಿವೆ. ಇನ್ನು ಕಂಬಳಕ್ಕೆಂದೆ ನೀರಿನ ಟ್ರ್ಯಾಕ್ ನಿರ್ಮಿಸಿದ್ದು ತ್ರಿವರ್ಣಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದೆ. ಇನ್ನು ಕಂಬಳದ ಟ್ರ್ಯಾಕ್ 157 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲವಿದ್ದು, ಒಟ್ಟು 200ಕ್ಕೂ ಹೆಚ್ಚು ಕೋಣಗಳು ಈ ಟ್ರಾಕ್ ನಲ್ಲಿ ಕಂಬಳಕ್ಕೆ ಇಳಿಯಲಿವೆ. ಇನ್ನು ಕಂಬಳಕ್ಕೆ ಬರುವ ಕೋಣಗಳನ್ನ ವಾಹನಗಳಲ್ಲಿ ತರಿಸಲಿದ್ದು, ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳಿಗೆ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿಗೆ ಒಂದು ದಿನದ ಮುಂಚಿತವಾಗಿ ಅಂದ್ರೆ ಇವತ್ತು ಕೋಣಗಳು ಬಂದಿಳಿಯಲಿವೆ. ಇನ್ನು ಈ ಮೂರು ದಿನದ ಕಂಬಳಕ್ಕೆ ಅಂದಾಜು 6 ರಿಂದ 7 ಲಕ್ಷದಷ್ಟು ಜನರು ಬರುವ ಸಾಧ್ಯಾತೆ ಇದ್ದು, ಜನರು ಕಂಬಳ ವೀಕ್ಷಿಸಲು ದೊಡ್ಡದಾದ ಸ್ಟೇಜ್ ಗಳನ್ನ ನಿರ್ಮಾಣ ಮಾಡಲಾಗಿದೆ. ಇನ್ನು ಕಂಬಳಕ್ಕೆ ಬರುವವರಿಗೆ ವಿಐಪಿ, ವಿವಿಐಪಿ, ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಪಾಸ್ ಗಳನ್ನ ಮಾಡಲಾಗಿದ್ದು ಪಾರ್ಕಿಂಗ್ ವ್ಯವಸ್ಥೆಯು ಇರಲಿದೆ.
ಕಂಬಳಕ್ಕೆ ಗಣ್ಯಾತೀಗಣ್ಯರ ದಂಡು
ಇನ್ನು ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಶೋಭಾ ಕರಂದ್ಲಾಜೆ, ಅನುಷ್ಕಾ ಶೆಟ್ಟಿ, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗುತ್ತಿದ್ದು, ಆಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಂದ ಕಂಬಳಕ್ಕೆ ಚಾಲನೆ ನೀಡಲಾಗುತ್ತಿದೆ. ಇನ್ನು ಕಂಬಳವನ್ನ ರಾಜಮಹಾರಾಜರ ಕೆರೆ ಎಂದು ಹೆಸರಿಟ್ಟಿದ್ದು, ಸಭಾ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ಚಾಮರಾಜ ಒಡೆಯರ್ ಅವರ ಹೆಸರನ್ನ ಇಟ್ಟಿದ್ದು, ಗಣ್ಯಾತೀಗಣ್ಯರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Bengaluru Kambala: ದಾಖಲೆ ಬರೆಯಲು ಸಜ್ಜಾಗುತ್ತಿದೆ ಬೆಂಗಳೂರು ಕಂಬಳ, ಇಲ್ಲಿದೆ ಸಂಪೂರ್ಣ ವಿವರ
ಕಂಬಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು
ಈ ಕಂಬಳ ಕೇವಲ ಕಂಬಳಕ್ಕೆ ಮಾತ್ರ ಸೀಮಿತವಾಗಿರದೇ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಕೂಡ ಆಯೋಜನೆ ಮಾಡಲಾಗಿದೆ. ಅದ್ರಲ್ಲಿ ಯಕ್ಷಗಾನ, ಹುಲಿಕುಣಿತ, ಕಾಮಿಡಿ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ, ಕಾಮಿಡಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳು ಇರುವುದರಿಂದ ರೂಟ್ ಮ್ಯಾಪ್ ಸಹ ರೆಡಿಮಾಡಲಾಗುತ್ತಿದ್ದು, ಟ್ರಾಫಿಕ್ ಕಡಿವಾಣಕ್ಕೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು
ಊರು ಬಿಟ್ಟು ಮತ್ತೊಂದು ಊರಿಗೆ ಕಂಬಳದ ಕೋಣಗಳು ಬಂದಿರುವುದರಿಂದ ಕೋಣಗಳ ಬಗ್ಗೆ ಮಾಲೀಕರು ವಿಶೇಷ ಗಮನವಹಿಸಿದ್ದಾರೆ. ಕಂಬಳದ ಕೋಣಗಳಿಗೆ ಕುಡಿಯಲು ನೀರು ಸಹ ಮಂಗಳೂರಿನಿಂದಲೇ ತರಲಾಗಿದೆ. ಕಂಬಳದ ಕೋಣಗಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕುವುದರಿಂದ ಅದಕ್ಕೆ ಹಾಕುವ ಆಹಾರದಿಂದ ಹಿಡಿದು ಕುಡಿಯುವ ನೀರಿನ ತನಕ ಮಾಲೀಕರು ಹೆಚ್ಚು ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ.
ಇನ್ನು, ಕಂಬಳದಲ್ಲಿ ಗೆದ್ದಂತಹ ಜೋಡಿಗೆ ಮೊದಲ ಪ್ರೈಸ್ ಆಗಿ 16 ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ನಗದನ್ನ ನೀಡಲಾಗುತ್ತಿದೆ. ಇನ್ನು ಎರಡನೇ ಪ್ರೈಸ್ ಆಗಿ 8 ಗ್ರಾಂ ಚಿನ್ನದ ಪದಕ ಹಾಗೂ 50 ಸಾವಿರ ನಗದು ಹಣವನ್ನ ನೀಡಲಾಗುತ್ತಿದೆ. ಇನ್ನು ಮೊರನೇ ಸ್ಥಾನಕ್ಕೆ 4 ಗ್ರಾಂ ಚಿನ್ನ 25 ಸಾವಿರ ಹಣವನ್ನ ನೀಡಲಾಗುತ್ತಿದೆ. ಮಂಗಳೂರಿನ ಈ ಕ್ರೀಡೆಯನ್ನ ರಾಜ್ಯಮಟ್ಟದಲ್ಲಿ ಪರಿಚಯಿಸಲು ಬೆಂಗಳೂರು ಕಂಬಳ ಸಮಿತಿ ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:03 pm, Thu, 23 November 23