ಬೆಂಗಳೂರು ಕಂಬಳ: ಪಾರ್ಕಿಂಗ್, ಎಂಟ್ರಿ – ಎಕ್ಸಿಟ್ ವಿವರ ಇಲ್ಲಿದೆ ನೋಡಿ

Bengaluru Kambala traffic advisory: ಬೆಂಗಳೂರು ಕಂಬಳಕ್ಕೆ ಬರುವವರು ಯಾವ ಮಾರ್ಗದ ಮೂಲಕ ಬರಬೇಕು? ಎಲ್ಲಿಂದ ಪ್ರವೇಶ, ನಿರ್ಗಮನ? ವಾಹನ ಪಾರ್ಕಿಂಗ್ ಎಲ್ಲಿ ಮಾಡಬೇಕು? ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಬರುವವರು ಹೇಗೆ ಬರಬಹುದು? ಕಂಬಳ ಹೊತರುಪಡಿಸಿ ಬೇರೆ ಕಡೆ ಹೋಗುವವರಿಗೆ ಸಂಚಾರ ನಿರ್ಬಂಧವೇನು? ಟ್ರಾಫಿಕ್​​ ಪೊಲೀಸರು ಬಿಡುಗಡೆ ಮಾಡಿರುವ ಮಾರ್ಗಸೂಚಿಯ ವಿವರ ಇಲ್ಲಿದೆ.

ಬೆಂಗಳೂರು ಕಂಬಳ: ಪಾರ್ಕಿಂಗ್, ಎಂಟ್ರಿ - ಎಕ್ಸಿಟ್ ವಿವರ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
Shivaprasad
| Updated By: Ganapathi Sharma

Updated on:Nov 23, 2023 | 10:07 PM

ಬೆಂಗಳೂರು, ನವೆಂಬರ್ 23: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳದ (Bengaluru Kambala) ಪ್ರಯುಕ್ತ ವಾಹನ ನಿಲುಗಡೆ, ಸಂಚಾರ ಬದಲಾವಣೆ, ಪ್ರವೇಶ ಮತ್ತು ನಿರ್ಗಮನ ವಿಚಾರವಾಗಿ ಟ್ರಾಫಿಕ್ ಪೊಲೀಸರು ಗುರುವಾರ ಮಾರ್ಗಸೂಚಿ (Traffic Advisory) ಬಿಡುಗಡೆ ಮಾಡಿದ್ದಾರೆ. 25ಮತ್ತು 26ರಂದು ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು ಹೀಗಿವೆ

  • ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್.
  • ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.
  • ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ಪ್ರವೇಶ.
  • ಕ್ಯಾಬ್​​ನಲ್ಲಿ ಬರುವವರಿಗೆ ಗೇಟ್ ನಂಬರ್ 2ಮೂಲಕ ಪ್ರವೇಶ.
  • ಗೇಟ್ ನಂಬರ್ 3ಮೂಲಕ ಕ್ಯಾಬ್​ಗಳ ಎಕ್ಸಿಟ್​​ಗೆ ಸೂಚನೆ.
  • ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.

ಕಂಬಳಕ್ಕೆ ಬರುವವರನ್ನು ಹೊರತುಪಡಿಸಿ ಇತರರಿಗೆ ಮಾರ್ಗಸೂಚಿ

  • ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.
  • ಅರಮನೆ ರಸ್ತೆ, ಬಿಡಿಎ ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್​ನಿಂದ ಹಳೇ ಉದಯ ಟಿವಿ ಜಂಕ್ಷನ್ ವರೆಗೆ ಎಮ್ ವಿ ಜಯರಾಂ ರಸ್ತೆ ಬಳಕೆಗೆ ಸೂಚನೆ‌‌.
  • ಮೇಖ್ರಿ ಸರ್ಕಲ್​ನಿಂದ ಎಲ್​ಆರ್​​ಡಿಇ ಜಂಕ್ಷನ್ ವರೆಗೆ ಬಳ್ಳಾರಿ ರಸ್ತೆ ಬಳಸಲು ಸೂಚನೆ.
  • ಬಾಳೆಕುಂದಿ ಸರ್ಕಲ್‌ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ವರೆಗೆ ಕನ್ನಿಂಗ್ ಹಾಮ್ ರೋಡ್ ಬಳಸಲು ಸೂಚನೆ.
  • ಹಳೇ ಉದಯ ಟಿವಿ ಜಂಕ್ಷನ್​ನಿಂದ‌ ಎಲ್​​ಆರ್​​ಡಿ ಜಂಕ್ಷನ್ ವರೆಗೆ ಮಿಲ್ಲರ್ಸ್ ಜಂಕ್ಷನ್ ಬಳಸಲು ಸೂಚನೆ.
  • ಜಯಮಹಲ್ ರಸ್ತೆ ಹಾಗೂ ಅರಮನೆ ರಸ್ತೆ ಸುತ್ತಮುತ್ತ ಸಂಚಾರ ಮಾಡುವವರು ಜಯಮಹಲ್ ರಸ್ತೆ ಬಳಕೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕರಾವಳಿ ಕಂಬಳದ ಇತಿಹಾಸ ತಿಳಿಯೋಣ ಬನ್ನಿ

ಪಾರ್ಕಿಂಗ್ ನಿಷೇಧಿತ ಸ್ಥಳಗಳಿವು

ಪ್ಯಾಲೇಸ್ ರಸ್ತೆ, ಎಮ್​​ವಿ ಜಯರಾಂ ರಸ್ತೆ, ಸಿವಿ ರಾಮನ್ ರಸ್ತೆ, ವಸಂತ್ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳ ಬಾಳು ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿ ವಾಹನ ನಿಲುಗಡೆಗೆ ನಿರ್ಬಂಧವಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:07 pm, Thu, 23 November 23

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು