ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋ ಚಿತ್ರೀಕರಿಸಿ ಪೋಸ್ಟ್: ವ್ಯಕ್ತಿಯ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಟ್ಯಾಗ್ ಮಾಡಿ ಯುವತಿಯೋರ್ವಳು ನೀಡಿದ್ದ ದೂರಿನ ಮೆರೆಗೆ ಸುಮೋಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು, ಜುಲೈ 10: ಅಸಭ್ಯವಾಗಿ ಕಾಣುವಂತೆ ಸಾರ್ವಜನಿಕ ಸ್ಥಳದಲ್ಲಿ ಯುವತಿಯರ (girls) ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ (bangaluru) ಕೆ.ಆರ್.ಪುರಂ ನಿವಾಸಿ ಗುರುದೀಪ್ ಸಿಂಗ್(26) ಬಂಧಿತ ವ್ಯಕ್ತಿ. ಯುವತಿ ದೂರಿನ ಮೆರೆಗೆ ಸುಮೋಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಗುರುದೀಪ್ ಸಿಂಗ್, ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದು, ಕೆಲಸ ಹುಡುಕುತ್ತಿದ್ದ. ಹೀಗಿರುವಾಗ ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ ಮತ್ತು ವಿಡಿಯೋ ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಟ್ಯಾಗ್ ಮಾಡಿ ಓರ್ವ ಯುವತಿ ದೂರು ನೀಡಿದ್ದಳು.
ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್: ಓರ್ವ ಯುವಕ ಅರೆಸ್ಟ್!
ಇನ್ನು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಓರ್ವ ವ್ಯಕ್ತಿ ವಿಕೃತಿ ಮೆರೆದಿದ್ದ. ಆತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್: ಛೀ, ಥೂ ಎಂದ ನೆಟ್ಟಿಗರು
ಹಾಸನದ ಹೊಳೆನರಸೀಪುರದ ಮೂಲದ ದಿಗಂತ್ ಎಂಬಾತನನ್ನು ಬನಶಂಕರಿ ಪೊಲೀಸರು ಪೀಣ್ಯ ಬಳಿ ಬಂಧಿಸಿದ್ದರು. metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಪ್ರತಿಕ್ರಿಯಿಸಿ, ಯುವತಿಯರ ವಿಡಿಯೋ ಸೆರೆಹಿಡಿಯುತ್ತಿದ್ದವನನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು.
ಮೆಟ್ರೋ ಸ್ಟೇಷನ್ನಲ್ಲಿ ಜೋಡಿಯ ರೋಮ್ಯಾನ್ಸ್!
ಇದೇ ರೀತಿಯಾಗಿ ಇತ್ತೀಚೆಗೆ ಜೋಡಿಯೊಂದು ಮೆಟ್ರೋ ನಿಲ್ದಾಣದಲ್ಲಿ ರೊಮ್ಯಾನ್ಸ್ ಮಾಡಿ ಮುಜುಗರಕ್ಕಿಡು ಮಾಡಿದ್ದರು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ನಡೆದ ಘಟನೆ ನಡೆದಿತ್ತು. ಜೋಡಿಯ ರೋಮ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ, ಕುಣಿದು ಕುಪ್ಪಳಿಸಿದ ಯುವತಿ
1 ನಿಮಿಷ 30 ಸೆಕಂಡ್ನ ರೋಮ್ಯಾನ್ಸ್ ವಿಡಿಯೋ ವೈರಲ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಅಸಭ್ಯವಾಗಿ ವರ್ತಿಸಿದ ಜೋಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಹಾಗೂ ಮೆಟ್ರೋ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







