ಅಯೋಧ್ಯೆಯ ರಾಮಮಂದಿರಕ್ಕೆ ಘಂಟೆ, ಪೂಜೆ ಸಾಮಾಗ್ರಿ ಕಳಿಸಿದ ಬಗ್ಗೆ ಕಾರಣ ಬಿಚ್ಚಿಟ್ಟ ಬೆಂಗಳೂರು ಉದ್ಯಮಿ
ಬೆಂಗಳೂರಿನ ಉದ್ಯಮಿ ರಾಜೇಂದ್ರ ನಾಯ್ಡು ಎನ್ನುವವರು ತಮ್ಮ ತಂದೆಯ ನೆನಪಿಗಾಗಿ ಘಂಟೆ ಮತ್ತು ಪೂಜಾ ಸಾಮಾಗ್ರಿಗಳನ್ನ ರವಾನಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆಗೆ ಏನಾದ್ರು ಸೇವಾರ್ಥವಾಗಿ ಕೊಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ತಂದೆ-ತಾಯಿಯ ನೆನಪಿಗಾಗಿ ಇಂದು ಘಂಟೆಗಳನ್ನ ಕಳುಹಿಸಿದ್ದೀವಿ. ಇಂದು ಬೆಳಗ್ಗೆ ಪೂಜೆ ಮಾಡಿ ಆಯೋಧ್ಯೆಗೆ ಕಳುಹಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು, ಡಿ.16: ಅಯೋಧ್ಯೆಯ ರಾಮಮಂದಿರ (Ayodhya Ram Mandir) ನಿರ್ಮಾಣದ ಕಾರ್ಯ ಬಹುತೇಕ ಮುಗಿದಿದ್ದು, ರಾಮಮಂದಿರದ ಉದ್ಘಾಟನೆ ಮಾತ್ರ ಬಾಕಿ ಉಳಿದಿದೆ. ರಾಮಮಂದಿರಕ್ಕೆ ಬೇಕಾದ ವಸ್ತುಗಳೆಲ್ಲವೂ ಒಂದೊಂದು ಕಡೆಯಿಂದ ಈಗಾಗಲೇ ರಾಮಮಂದಿರಕ್ಕೆ ತಲುಪುತ್ತಿವೆ. ಈ ಪೈಕಿ ಅಯೋಧ್ಯೆ ರಾಮಮಂದಿರಕ್ಕೆ ರಾಜಧಾನಿ ಬೆಂಗಳೂರಿನಿಂದ ಘಂಟೆ ಮತ್ತು ಪೂಜಾ ಸಾಮಾಗ್ರಿಗಳ ರವಾನೆ ಮಾಡಲಾಗುತ್ತಿದೆ. ಬೆಂಗಳೂರಿನ ಉದ್ಯಮಿ ರಾಜೇಂದ್ರ ನಾಯ್ಡು (Rajendra Naidu) ಎನ್ನುವವರು ತಮ್ಮ ತಂದೆಯ ನೆನಪಿಗಾಗಿ ಘಂಟೆ ಮತ್ತು ಪೂಜಾ ಸಾಮಾಗ್ರಿಗಳನ್ನ ರವಾನಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆಗೆ ಏನಾದ್ರು ಸೇವಾರ್ಥವಾಗಿ ಕೊಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ತಂದೆ-ತಾಯಿಯ ನೆನಪಿಗಾಗಿ ಇಂದು ಘಂಟೆಗಳನ್ನ ಕಳುಹಿಸಿದ್ದೀವಿ. ಇಂದು ಬೆಳಗ್ಗೆ ಪೂಜೆ ಮಾಡಿ ಆಯೋಧ್ಯೆಗೆ ಕಳುಹಿಸಿದ್ದೇನೆ. ಇನ್ನು ನಾಲ್ಕು ದಿನದಲ್ಲಿ ಗಂಟೆಗಳು ರಾಮಮಂದಿರ ತಲುಪಲಿವೆ. ತುಂಬ ಖುಷಿಯಾಗುತ್ತಿದೆ. ಸದ್ಯ 28 ಘಂಟೆಗಳನ್ನ ಕಳುಹಿಸಿಕೊಟ್ಟಿದ್ದೇವೆ. ಇವುಗಳನ್ನ ಮಂದಿರದ 10 ಸ್ಥಳಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಘಂಟೆಗಳು ಬೇಕು ಅಂದ್ರೆ ನಾವೇ ಕಳುಹಿಸಿಕೊಡುತ್ತೇವೆ. ಈ ಘಂಟೆಗಳನ್ನ ವಾಸ್ತುಪ್ರಕಾರವಾಗಿಗೆ ಮಾಡಲಾಗಿದೆ. ಒಂದು ಬಾರಿ ಬಾರಿಸಿದ್ರೆ 9 ಸೆಕೆಂಡ್ಗಳ ಕಾಲ ಓಂಕಾರ ಬರಲಿದೆ. ಇದೇ ಈ ಘಂಟೆಗಳ ವಿಶೇಷ. ನಮಗೆ 15 ಘಂಟೆಗಳನ್ನ ಮಾತ್ರ ಕೇಳಿದ್ರು. ಆದರೆ ನಾವು ಹೆಚ್ಚುಗೆಯಾಗಿಯೇ ಕೊಟ್ಟಿದ್ದೇವೆ ಎಂದು ಉದ್ಯಮಿ ರಾಜೇಂದ್ರ ನಾಯ್ಡು ತಿಳಿಸಿದ್ದಾರೆ.
ಇದನ್ನೂ ಓದಿ: ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಬೆಂಗಳೂರಿನಿಂದ ಘಂಟೆ, ಪೂಜಾ ಸಾಮಾಗ್ರಿ ರವಾನೆ
ಇನ್ನು ಈ ಗಂಟೆಗಳನ್ನ ನೀಡಲು ಏನೆಲ್ಲ ನಿಯಮವಳಿಗಳನ್ನ ಅನುಸರಿಸಬೇಕು ಎಂಬುವುದರ ಮಾಹಿತಿ ಪಡೆದಂತಹ ರಾಜೇಶ್ ನಾಯ್ಡು ಅವರಿಗೆ ಘಂಟೆಗಳು ಟೆಕ್ನಿಕಲ್ ಆಗಿಯೂ ಹಾಗೂ ದೇವಸ್ಥಾನಕ್ಕೆ ಬಳಸಲು ಸೂಕ್ತವಾದ ಮಾದರಿಯಲ್ಲಿ ಘಂಟೆಗಳನ್ನ ತರಲು ಸೂಚಿಸಲಾಗಿತ್ತಂತೆ. ಅದರಂತೆ ಭಾರತ ವಿಜ್ಞಾನ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು 73% ಕಾಪರ್, 23% ಲಿಕ್ಕರ್ ಬಳಕೆ ಮಾಡಿ ಓಂ ನಾದ ಬರುವಂತೆ ಘಂಟೆಗಳನ್ನ ತಯಾರಿಸಿ, 5 ತಿಂಗಳ ಹಿಂದೆ ಸ್ಯಾಂಪಾಲ್ ಗೆ ಕಳುಹಿಸಲಾಗಿತ್ತು. ಅದರಂತೆ ಎಲ್ಲಾ ಮಾದರಿಯಲ್ಲಿ ಘಂಟೆಗಳನ್ನ ರಾಮಮಂದಿರದಲ್ಲಿ ಬಳಕೆ ಮಾಡಲು ಸರಿಹೊಂದಿದ್ದರಿಂದ ಎಲ್ಲಾ ಘಂಟೆಗಳನ್ನ ಬೆಂಗಳೂರಿನಿಂದಲೇ ತರಲು ಸೂಚಿಸಲಾಗಿದೆ. ಇಂದು ಘಂಟೆಗಳನ್ನು ರಾಮಮಂದಿರಕ್ಕೆ ಕಳುಹಿಸಲಾಗಿದೆ. ಘಂಟೆಗಳು ಅಷ್ಟೇ ಅಲ್ಲದೇ ಪೂಜೆಗೆ ಬಳಸುವ ಬೆಳ್ಳಿಯ ದೀಪಾಗಳು, ದೂಪದ ಬಟ್ಟಲುಗಳು, ಬೆಳ್ಳೆಯ ಗಂಟೆಗಳನ್ನ ಸಹ ನೀಡಿದ್ದು, ಇವುಗಳನ್ನ ಸಹ ಆಯೋಧ್ಯೆಗೆ ಕಳುಹಿಸಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:30 pm, Sat, 16 December 23