ಬೆಂಗಳೂರಿಗರೇ ಗಮನಿಸಿ; ಕಬ್ಬನ್ ಪಾರ್ಕ್, ವಿಧಾನಸೌಧ ಮೆಟ್ರೋ ಸ್ಟೇಷನ್ ಬಂದ್
ಇಂದು ವಿಧಾನಸೌಧದಲ್ಲಿ ಆರ್ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಂಭ್ರಮಾಚರಣೆ ಶುರುವಾಗುವದಕ್ಕೂ ಮೊದಲೇ ಸೂತಕದ ಛಾಯೆ ಆವರಿಸಿದೆ. ಆರ್ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಆಗಮಿಸಿದ್ದ 10 ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಜನಜಾತ್ರೆಯೇ ಸೇರಿದ್ದರಿಂದ ಮುಂಜಾಗ್ರತಾ ಕ್ರಮವಾಗಿ 2 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳನ್ನು ನಿಲ್ಲಿಸದಿರಲು ನಮ್ಮ ಮೆಟ್ರೋ ನಿರ್ಧರಿಸಿದೆ.

ಬೆಂಗಳೂರು, ಜೂನ್ 4: 18 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ (IPL Champion) ಆಗಿರುವ ಆರ್ಸಿಬಿ (RCB) ವಿಜಯಯಾತ್ರೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ, ಮಿತಿಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿ 10 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಜನರ ಸ್ಥಿತಿ ಗಂಭೀರವಾಗಿದೆ. ನಾಲ್ಕೈದು ಜನರ ಕಾಲುಗಳು ಕಟ್ ಆಗಿವೆ. ಅಪ್ಪ-ಅಮ್ಮನ ಜೊತೆ ಸಂಭ್ರಮಾಚರಣೆಗೆ ಬಂದಿದ್ದ ಮಗು ಕೂಡ ಸಾವನ್ನಪ್ಪಿದೆ. ಇದರ ನಡುವೆ ಮೆಟ್ರೋ ರೈಲುಗಳಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಲು ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ನೇರಳೆ ಮಾರ್ಗದ 2 ಮೆಟ್ರೋ ನಿಲ್ದಾಣಗಳಾದ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ಗಳನ್ನು ಬಂದ್ ಮಾಡಲಾಗಿದೆ.
ಆರ್ಸಿಬಿ ತಂಡದ ಗೆಲುವಿನ ಸಂಭ್ರಮದ ವೇಳೆ ಕಾಲ್ತುಳಿತ ಉಂಟಾಗಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪರಿಸ್ಥಿತಿ ಕೈಮೀರಿದೆ. ಮೆಟ್ರೋ ರೈಲುಗಳಲ್ಲೂ ಜನಸಾಗರವೇ ಹರಿದುಬರುತ್ತಿರುವುದರಿಂದ ಯಾವುದೇ ಅಪಾಯಗಳು, ಕಾಲ್ತುಳಿತ ಸಂಭವಿಸಬಾರದು ಎಂಬ ಉದ್ದೇಶದಿಂದ 2 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿರುವ ನಿಲ್ದಾಣಗಳಲ್ಲಿ ಇಂದು ಸಂಜೆ 4.30ರಿಂದಲೇ ಸೇವೆ ಸ್ಥಗಿತ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಎರಡು ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.
*Metro Service Adjustments for RCB Team Felicitation Function*
*Bangalore, June 4, 2025:* Due to the extremely high footfalls for the Royal Challengers Bangalore (RCB) team felicitation function at Vidhana Soudha and Chinnaswamy Cricket Stadium,(1/4)
— ನಮ್ಮ ಮೆಟ್ರೋ (@OfficialBMRCL) June 4, 2025
ಇದನ್ನೂ ಓದಿ: RCB ಸಂಭ್ರಮಾಚರಣೆ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು
#WATCH | Karnataka police use mild force to manage the crowd outside M Chinnaswamy Stadium in Bengaluru
A large number of #RoyalChallengersBengaluru fans have arrived here to catch a glimpse of their champion team. pic.twitter.com/rnBSTx8vEN
— ANI (@ANI) June 4, 2025
10 ಅಭಿಮಾನಿಗಳು ಸಾವು:
ಆರ್ಸಿಬಿ ತಂಡದ ಸಂಭ್ರಮಾಚರಣೆಗೆ ಆಗಮಿಸಿದ್ದ ಅಭಿಮಾನಿಗಳ ನಡುವೆ ಕಾಲ್ತುಳಿತ ಉಂಟಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 10 ಅಭಿಮಾನಿಗಳು ಮೃತಪಟ್ಟಿದ್ದಾರೆ. ದಂತ ವೈದ್ಯಕೀಯ ವಿದ್ಯಾರ್ಥಿನಿ, ಒಂದು ಮಗು ಸೇರಿ 10 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ 6 ಅಭಿಮಾನಿಗಳು ಮೃತಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








