ಹೊಸ ವರ್ಷಾಚರಣೆಗೆ ಹೊರಡುವ ಮುನ್ನ ಎಚ್ಚರ; ಬೆಂಗಳೂರಿನ 40 ಫ್ಲೈಓವರ್​ಗಳು ಬಂದ್, ಪಾರ್ಕಿಂಗ್ ಮಾಹಿತಿ ಇಲ್ಲಿದೆ

New Year Celebration: ಬೆಂಗಳೂರಿನಲ್ಲಿ ಇಂದು ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಿದೆ. ರಾತ್ರಿಯಾಗುತ್ತಿದ್ದಂತೆ ಮೋಜು-ಮಸ್ತಿ ಹೆಚ್ಚಾಗಲಿದೆ. ನೀವು ಕೂಡ ನ್ಯೂ ಇಯರ್ ಆಚರಣೆಗೆ ಮನೆಯಿಂದ ಹೊರಗೆ ಹೋಗುವುದಾದರೆ ಟ್ರಾಫಿಕ್ ಪೊಲೀಸರ ಬಗ್ಗೆ ಎಚ್ಚರವಿರಲಿ. ಹಾಗೇ, ಬೆಂಗಳೂರಿನಲ್ಲಿ ಇಂದು ರಾತ್ರಿ ಸಂಚಾರಕ್ಕೆ ಯಾವೆಲ್ಲ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲಿದೆ.

ಹೊಸ ವರ್ಷಾಚರಣೆಗೆ ಹೊರಡುವ ಮುನ್ನ ಎಚ್ಚರ; ಬೆಂಗಳೂರಿನ 40 ಫ್ಲೈಓವರ್​ಗಳು ಬಂದ್, ಪಾರ್ಕಿಂಗ್ ಮಾಹಿತಿ ಇಲ್ಲಿದೆ
Mg Road New Year Celebration
Follow us
Jagadisha B
| Updated By: ಸುಷ್ಮಾ ಚಕ್ರೆ

Updated on:Dec 31, 2024 | 9:03 PM

ಬೆಂಗಳೂರು: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಇನ್ನೇನು ಕೆಲವೇ ಘಂಟೆಗಳಲ್ಲಿ ಸಂಭ್ರಮಾಚರಣೆ ಜೋರಾಗಲಿದೆ. ಪಬ್, ಎಣ್ಣೆ, ಮೋಜು-ಮಸ್ತಿ ಅಂತ ಪಾರ್ಟಿ ಮಾಡಿ ಬಳಿಕ ತಮ್ಮ ವಾಹನಗಳಲ್ಲಿ ರಾತ್ರಿ ಮನೆಗೆ ತೆರಳುವ ಮುನ್ನ ಸ್ವಲ್ಪ ಎಚ್ಚರವಾಗಿರಿ. ಏಕೆಂದರೆ, ಇವತ್ತು ನಿಮಗಾಗಿಯೇ ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಕಾದು ಕುಳಿತಿದ್ದಾರೆ. ಇಂದು ರಾತ್ರಿ ರಸ್ತೆ-ರಸ್ತೆಯಲ್ಲೂ ಸಂಚಾರಿ ಪೊಲೀಸರು ಹೈ ಅಲರ್ಟ್ ವಹಿಸಿದ್ದಾರೆ. ನಗರದಾದ್ಯಂತ ಫ್ಲೈಓವರ್​ಗಳು ಬಂದ್ ಆಗಲಿವೆ.

ಹೊಸ ವರ್ಷಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ಮೋಜು ಮಸ್ತಿ ಅಂತ ಜನ ಪಬ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇವತ್ತಿನ ಪಾರ್ಟಿ ಬಳಿಕ ಮನೆಗೆ ಹೊಗುವಾಗ ಕೊಂಚ ಹುಷಾರಾಗಿರಿ. ಏಕೆಂದರೆ ಕುಡಿದು ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲೆಂದೇ ಸಂಚಾರಿ ಪೊಲೀಸರು ನಗರದ ರಸ್ತೆ ರಸ್ತೆಗಳಲ್ಲಿ ಅಲರ್ಟ್ ಆಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಫ್ಲೈಓವರ್ ಹೊರತು ಪಡಿಸಿ 40 ಫ್ಲೈಓವರ್ ಬಂದ್ ಆಗಿವೆ.

ಇಂದು ರಾತ್ರಿ 11 ಗಂಟೆಯ ಬಳಿಕ ಬೆಂಗಳೂರು ನಗರದ ಬಹುತೇಕ ಎಲ್ಲಾ ಫ್ಲೈಓವರ್ ಗಳು ಬಂದ್ ಆಗಲಿವೆ. ಸಂಗೊಳ್ಳಿ ರಾಯಣ್ಣ ಫ್ಲೈಓವರ್, ಶಿವನಗರ ಫ್ಲೈಓವರ್, ಯಶವಂತಪುರ ಫ್ಲೈಓವರ್, ಲೂಲು ಮಾಲ್ ಬಳಿಯ ಫ್ಲೈಓವರ್, ಮಾರ್ಕೆಟ್ ಫ್ಲೈಓವರ್ ಸೇರಿದಂತೆ ನಗರದ 40 ಫ್ಲೈಓವರ್​ಗಳು ಬಂದ್ ಆಗಲಿದ್ದು, ನಾಳೆ ಬೆಳಿಗ್ಗೆ 6 ಗಂಟೆಗೆ ಓಪನ್ ಆಗಲಿದೆ. ವೀಲಿಂಗ್, ರ್ಯಾಶ್ ಡ್ರೈವಿಂಗ್ ಹಾಗೂ ಅಪಘಾತಗಳ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೈಓವರ್​ಗಳನ್ನು ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ: ಎಂಜಿ ರಸ್ತೆ, ಚರ್ಚ್​ಸ್ಟ್ರೀಟ್​ನತ್ತ ಯುವ ಸಮೂಹ

ಬೆಂಗಳೂರು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಲ್ಪಿಸುವ ಫ್ಲೈಓವರ್​ಗಳು ಮಾತ್ರ ರಾತ್ರಿ ಸಂಚಾರಕ್ಕೆ ಮುಕ್ತವಾಗಿರುತ್ತವೆ. ಆದರೂ, ಈ ಫ್ಲೈಓವರ್​ಗಳಲ್ಲಿ ರಾತ್ರಿ 10 ಗಂಟೆ ಬಳಿಕ ಬೈಕ್​ಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ. ನಗರದಾದ್ಯಂತ ಸದ್ಯ ಹೊಸ ವರ್ಷಾಚರಣೆಯ ಪಾರ್ಟಿ ಹಬ್ಬದ ವಾತವರಣ ಸೃಷ್ಟಿಸಿದೆ. ಆದರೆ, ಈ ಮೋಜು-ಮಸ್ತಿ ಕೇವಲ ಮನರಂಜನೆಗೆ ಸೀಮಿತವಾಗಿರಬೇಕೇ ಹೊರತು ಪಾರ್ಟಿ ಬಳಿಕ ಆಗಬಹುದಾದ ಅನಾಹುತಕ್ಕೆ ದಾರಿಯಾಗಬಾರದು ಎಂಬುದು ಪೊಲೀಸರ ಆಶಯ.

ಬದಲಿ ಸಂಚಾರ ವ್ಯವಸ್ಥೆ ಇಲ್ಲಿದೆ:

ಕೋರಮಂಗಲದ ಕಡೆ ಬರುವ ವಾಹನ ಸವಾರರ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರಿಂದ ಹಲವು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ವಾಹನ ಸಂಚಾರ ನಿರ್ಬಂಧ:

1. ನ್ಯಾಷನಲ್‌ಗೇಮ್ಸ್ ವಿಲೇಜ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ.

2. ವೈ.ಡಿ ಮಠ ರಸ್ತೆಯಲ್ಲಿ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್‌ವರೆಗೆ ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್ ರಸ್ತೆ, ಟಾನಿಕ್ ಹಿಂಭಾಗದ ರಸ್ತೆ, 17ನೇ ಹೆಚ್ ಮುಖ್ಯ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಟ್ರಾಫಿಕ್ ಡೈವರ್ಷನ್ ಸ್ಥಳ:

1. ಯುಕೋ ಬ್ಯಾಂಕ್ ಜಂಕ್ಷನ್

2. ಸುಖಸಾಗರ್ ಜಂಕ್ಷನ್

3. ಚೌಡೇಶ್ವರಿ ದೇವಸ್ಥಾನದ ಜಂಕ್ಷನ್

ಪಾರ್ಕಿಂಗ್ ನಿಷೇಧ ಸ್ಥಳ:

1. 80 ಅಡಿ ರಸ್ತೆಯಲ್ಲಿ ಯುಕೋ ಬ್ಯಾಂಕ್ ಜಂಕ್ಷನ್‌ನಿಂದ ಎನ್.ಜಿ.ವಿ ಬ್ಯಾಕ್‌ ಗೇಟ್ ಜಂಕ್ಷನ್‌ ವರೆಗೆ ರಸ್ತೆಯ ಎರಡೂ ಕಡೆ ಪಾರ್ಕಿಂಗ್ ನಿಷೇಧ ಹೇರಲಾಗಿದೆ.

2. ಸೋಮೇಶ್ವರ ದೇವಸ್ಥಾನದ ರಸ್ತೆ (ಸ್ಮಶಾನ ಕ್ರಾಸ್‌ನಿಂದ-ಮೈಕ್ರೋಲ್ಯಾಂಡ್ ಜಂಕ್ಷನ್‌ ವರೆಗೆ) ಪಾರ್ಕಿಂಗ್ ನಿಷೇಧ ವಿಧಿಸಲಾಗಿದೆ.

ಇದನ್ನೂ ಓದಿ: 1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು

ವಾಹನಗಳ ಪಾರ್ಕಿಂಗ್ ಸ್ಥಳ:

– 60 ಅಡಿ ಮಾದರಿ ರಸ್ತೆ ಎಡಭಾಗ (ಮುನಿರೆಡ್ಡಿ ಕಲ್ಯಾಣ ಮಂಟಪ ದಿಂದ ಕೆನರಾ ಬ್ಯಾಂಕ್ ಜಂಕ್ಷನ್‌ವರೆಗೆ)

– ಮುನಿರೆಡ್ಡಿ ಕಲ್ಯಾಣ ಮಂಟಪದ ಎದರುಗಡೆಯ ಬಿ.ಬಿ.ಎಂ.ಪಿ ಮೈದಾನ

– ಬೆಥನಿ ಶಾಲಾ ಪಕ್ಕದ ಬಿ.ಬಿ.ಎಂ.ಪಿ ಮೈದಾನ

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:

1. ಆಡುಗೋಡಿ ಜಂಕ್ಷನ್- ಯುಕೋ ಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು

– ಯುಕೋ ಬ್ಯಾಂಕ್ ಜಂಕ್ಷನ್‌ನಲ್ಲಿ ಎಡತಿರುವು ಪಡೆಯದೇ ಮಡಿವಾಳ ಚೆಕ್‌ಪೋಸ್ಟ್ ಕಡೆಗೆ ಸಾಗಿ ವಾಟರ್ ಟ್ಯಾಂಕ್ ಜಂಕ್ಷನ್ ಮುಖಾಂತರ ಸೋನಿ ವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು

2. ಮಡಿವಾಳ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು

– ಯುಕೋ ಬ್ಯಾಂಕ್ ಜಂಕ್ಷನ್‌ಗೆ ಬರದೇ, ಆಯ್ಯಪ್ಪ ಜಂಕ್ಷನ್, ವಾಟರ್ ಜಂಕ್ಷನ್ ಮುಖಾಂತರ ಅಥವಾ ಮಡಿವಾಳ ಸಂತೇಬೀದಿ, ಕೃಪಾನಿಧಿ ಜಂಕ್ಷನ್, ಐಶ್ವರ್ಯ ಜಂಕ್ಷನ್, ವಿಪ್ರೋ ಜಂಕ್ಷನ್ ಮುಖಾಂತರ ಸೋನಿ ವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು.

(ವರದಿ: ಜಗದೀಶ್)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Tue, 31 December 24

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ