Bengaluru News: ಕಲ್ಲಂಗಡಿಯನ್ನು ಮುಕ್ತಗೊಳಿಸಿ ಎಂಬ ಸಂದೇಶದೊಂದಿಗೆ ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ಚರ್ಚ್ ಸ್ಟ್ರೀಟ್‌ನಲ್ಲಿ ಮೌನ ಪ್ರತಿಭಟನೆ

Protest For Palestine: ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್‌ನಲ್ಲಿ 100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಮೌನ ನಡಿಗೆ ನಡೆಸಿದರು. ಹೋರಾಟಗಾರರು ಪೋಸ್ಟರ್‌ಗಳಲ್ಲಿ ಕಲ್ಲಂಗಡಿಗಳ ಚಿತ್ರಗಳನ್ನು ಪ್ರದರ್ಶಿಸಿದರು. ಪ್ಯಾಲೆಸ್ತೀನ್‌ ಧ್ವಜದ ಬಣ್ಣಕ್ಕೆ ಸಾಂಕೇತಿಕವಾಗಿ ಕಲ್ಲಂಗಡಿ ಹಣ್ಣಿನ್ನು ಪ್ರದರ್ಶಿಸಿ "ಕಲ್ಲಂಗಡಿಯನ್ನು ಮುಕ್ತಗೊಳಿಸಿ" ಎಂಬ ಸಂದೇಶದೊಂದಿಗೆ ಮೌನ ಪ್ರತಿಭಟನೆ ಮಾಡಲಾಯಿತು.

Bengaluru News: ಕಲ್ಲಂಗಡಿಯನ್ನು ಮುಕ್ತಗೊಳಿಸಿ ಎಂಬ ಸಂದೇಶದೊಂದಿಗೆ ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ಚರ್ಚ್ ಸ್ಟ್ರೀಟ್‌ನಲ್ಲಿ ಮೌನ ಪ್ರತಿಭಟನೆ
ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ಚರ್ಚ್ ಸ್ಟ್ರೀಟ್‌ನಲ್ಲಿ ಮೌನ ಪ್ರತಿಭಟನೆ
Follow us
TV9 Web
| Updated By: Digi Tech Desk

Updated on:Nov 06, 2023 | 12:12 PM

ಬೆಂಗಳೂರು, ನ.06: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಮುಂದುವರೆದಿದೆ (Israel Hamas War). ಇಸ್ರೇಲ್ ದಾಳಿಗೆ 9870ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಬಲಿಯಾಗಿದ್ದಾರೆ. ಸಾವಿರಾರು ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮುಸ್ಲಿಂಗಳ ವಿರುದ್ಧ ದಾಳಿ ನಿಲ್ಲಿಸಿ, ಪ್ಯಾಲೆಸ್ತೀನ್‌ ಬೆಂಬಲಿಸಿ ಎಂದು ಎಂಜಿ ರಸ್ತೆಯಲ್ಲಿ ನೂರಾರು ಜನರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಭಾನುವಾರ ಕೂಡ ನೂರಾರು ಮಂದಿ ಮೌನ ನಡಿಗೆ (Silent March) ಮೂಲಕ ಪ್ಯಾಲೆಸ್ತೀನ್‌ ಬೆಂಬಲಕ್ಕೆ ನಿಂತಿದ್ದಾರೆ.

ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್‌ನಲ್ಲಿ 100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಮೌನ ನಡಿಗೆ ನಡೆಸಿದರು. ಹೋರಾಟಗಾರರು ಪೋಸ್ಟರ್‌ಗಳಲ್ಲಿ ಕಲ್ಲಂಗಡಿಗಳ ಚಿತ್ರಗಳನ್ನು ಪ್ರದರ್ಶಿಸಿದರು. ಪ್ಯಾಲೆಸ್ತೀನ್‌ ಧ್ವಜದ ಬಣ್ಣಕ್ಕೆ ಸಾಂಕೇತಿಕವಾಗಿ ಕಲ್ಲಂಗಡಿ ಹಣ್ಣಿನ್ನು ಪ್ರದರ್ಶಿಸಿ “ಕಲ್ಲಂಗಡಿಯನ್ನು ಮುಕ್ತಗೊಳಿಸಿ” ಎಂಬ ಸಂದೇಶದೊಂದಿಗೆ ಮೌನ ಪ್ರತಿಭಟನೆ ಮಾಡಲಾಯಿತು.

ಇದನ್ನೂ ಓದಿ: Pro Palestine Protest: ಮುಸ್ಲಿಂಗಳ ವಿರುದ್ಧ ದಾಳಿ ನಿಲ್ಲಿಸಿ, ಪ್ಯಾಲೆಸ್ತೀನ್‌ ಬೆಂಬಲಿಸಿ ಎಂಜಿ ರಸ್ತೆಯಲ್ಲಿ ನೂರಾರು ಜನರಿಂದ ಪ್ರತಿಭಟನೆ

ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಚರ್ಚ್ ಸ್ಟ್ರೀಟ್ ಬಳಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ನೂರಾರು ಮಂದಿ ಜಮಾಯಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಅವರಲ್ಲಿ ಕೆಲವರು ತಮ್ಮ ಪೋಸ್ಟರ್‌ಗಳಲ್ಲಿ ಕಲ್ಲಂಗಡಿ ಹಣ್ಣಿನ ಹಿಂದಿನ ಸಂದೇಶ ಜನರಿಗೆ ಮುಟ್ಟಲಿ ಎಂಬ ಉದ್ದೇಶದಿಂದ ಕೆಲವೊತ್ತು ನಿಂತು ಮುಂದೆ ಸಾಗಿದರು. ಆದರೆ ಹೋರಾಟಗಾರರು ಯಾವುದೇ ಘೋಷಣೆಗಳನ್ನು ಕೂಗದೆ ಮೌನಾಚರಣೆ ಮೂಲಕ ಭಿತ್ತಿಚಿತ್ರ ಪ್ರದರ್ಶಿಸಿ ಮೆರವಣಿಗೆಯನ್ನು ಮಾಡಿದರು.

ಸೇಂಟ್ ಮಾರ್ಕ್ಸ್ ರಸ್ತೆಯ ಬಳಿ ಪೆಟ್ರೋಲ್ ಬಂಕ್ ಮೂಲಕ ಹಾದು ಹೋಗುತ್ತಿದ್ದಾಗ, ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬರು ಘೋಷಣೆ ಕೂಗಿದ್ದು, “ದೇಶದ್ರೋಹಿ ನಾಯಿಗಳಿಗೆ ಧಿಕ್ಕಾರ (ದೇಶ ವಿರೋಧಿ ನಾಯಿಗಳನ್ನು ಖಂಡಿಸಿ) ಎಂದರು.

ಇನ್ನು ಈ ಹೋರಾಟ ಯಾರಿಂದಲೂ ಯೋಜಿಸಲ್ಪಟ್ಟಿಲ್ಲ ಅಥವಾ ಸಂಘಟಿತವಾಗಿಲ್ಲ. ನಾವೆಲ್ಲರೂ ಸಾಮಾಜಿಕ ಮಾಧ್ಯಮ ಮತ್ತು ನಮ್ಮ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ, ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವ ಕಾರಣಕ್ಕೆ ಒಗ್ಗಟ್ಟಿನ ಪ್ರದರ್ಶನವಾಗಿ ಚರ್ಚ್ ಸ್ಟ್ರೀಟ್‌ನಲ್ಲಿ ಶಾಂತಿಯುತ ನಡಿಗೆಯನ್ನು ನಡೆಸಿದ್ದೇವೆ ಎಂದು ಹೋರಾಟಗಾರರೊಬ್ಬರು ತಿಳಿಸಿದರು. ಮತ್ತೊಂದೆಡೆ ಗುಂಪು ಗುಂಪು ಹೋರಾಟಗಾರರನ್ನು ನೋಡಿದ ಪೊಲೀಸರು ಹೋರಾಟಗಾರರನ್ನು ಚದುರಿಸಿದ್ದು ಐದು ಜನರನ್ನು ವಶಕ್ಕೆ ಪಡೆದರು.

ಬೆಂಗಳೂರು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:22 am, Mon, 6 November 23

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು