ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ: ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ
ಬೇಸಗೆಯ ಬಿಸಿಲಿನ ಬೇಗೆ ಜತೆಗೆ ಬೆಂಗಳೂರಿನ ಜನತೆಯ ಜೇಬಿಗೆ ಇದೀಗ ದರ ಏರಿಕೆಯ ಬಿಸಿ ಕೂಡ ತಟ್ಟಲಿದೆ. ಬಿಸಿಲಿನ ದಗೆ ತಾಳಲಾರದೆ ಜ್ಯೂಸ್, ಎಳನೀರು ಕುಡಿಯಲು ಹೋದರೆ ಜೇಬು ಸುಡಲಿದೆ! ನಗರದಲ್ಲಿ ತಾಜಾ ಹಣ್ಣಿನ ಜ್ಯೂಸ್ ಹಾಗೂ ಎಳನೀರು ದುಬಾರಿಯಾಗಿದ್ದು, ಯಾವುದರ ದರ ಎಷ್ಟು ಹೆಚ್ಚಾಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 1: ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ (Bengaluru Temperature) ಹೆಚ್ಚಳದೊಂದಿಗೆ ನಗರವಾಸಿಗಳು ಹೈರಾಣಾಗಿದ್ದಾರೆ. ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ದಗೆ ತಡೆಯಲಾರದೇ ಜನರು ತಂಪು ಪಾನೀಯಗಳತ್ತ (Coll Drinks) ಮುಖ ಮಾಡುತ್ತಿದ್ದಾರೆ. ಮಧ್ಯಾಹ್ನ, ಸಂಜೆಯಾದರೆ ಸಾಕು ಜ್ಯೂಸ್ (Fruit Juce) ಹಾಗೂ ಏಳನೀರಿನ ಅಂಗಡಿಗಳ ಮುಂದೆ ಗ್ರಾಹಕರು ಸರದಿ ನಿಲ್ಲುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವಂತೆಯೇ ಹಣ್ಣಿನ ಜ್ಯೂಸ್, ಎಳನೀರಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಎಳನೀರು ಹಾಗೂ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.
ಮೊದಲೇ ಹಣ್ಣು – ತರಕಾರಿಗಳ ಬೆಲೆ ಗಗನಕ್ಕೇರಿದೆ. ಬಿಸಿಲ ಬೇಗೆಯ ಕಾರಣ ದಿನದಿಂದ ದಿನಕ್ಕೆ ಗ್ರಾಹಕರು ಎಳನೀರು ಹಾಗೂ ಜ್ಯೂಸ್ಗೆ ಹೆಚ್ಚು ಬೇಡಿಕೆ ಇಡುತ್ತಿರುವುದರಿಂದ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.
ಕಳೆದ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಜ್ಯೂಸ್ಗಳ ಬೆಲೆಯಲ್ಲಿ 10 ರಿಂದ 20 ರೂ ರೂ ಏರಿಕೆಯಾಗಿದೆ. ಪ್ರತಿದಿನ ಒಂದೊಂದು ಅಂಗಡಿಗಳಲ್ಲಿಯೂ 500 ರಿಂದ 600 ಗ್ಲಾಸ್ ಜ್ಯೂಸ್ ಮಾರಾಟ ಆಗುತ್ತಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಎಷ್ಟಿದೆ ಹಣ್ಣಿನ ಜ್ಯೂಸ್ ಬೆಲೆ?
ಸದ್ಯ ಬೆಂಗಳೂರಿನ ಅಂಗಡಿಗಳಲ್ಲಿ ಆ್ಯಪಲ್ ಜ್ಯೂಸ್ ದರ 60 ರೂ. ಇದ್ದುದು 65ಕ್ಕೆ ಏರಿಕೆಯಾಗಿದೆ. ಪ್ರೊಮೋಗ್ರನೇಟ್ 60 ರೂ. ಇದ್ದುದು 65ಕ್ಕೆ, ಮುಸಂಬಿ ಜ್ಯೂಸ್ 45 ರಿಂದ 50, ಆರೆಂಜ್ 45 ರಿಂದ 55, ಬಾನಾನ ಮಿಲ್ಕ್ ಶೇಕ್ 50 ರಿಂದ 60, ಕ್ಯಾರೆಟ್ ಜ್ಯೂಸ್ 60 ರಿಂದ 65, ವಾಟರ್ಮೆಲನ್ 45 ರಿಂದ 50, ಫೈನಾಪಲ್ 45 ರಿಂದ 50, ಮಸ್ಕ್ ಮೆಲನ್ 45 ರಿಂದ 50, ಮಿಕ್ಸ್ ಜ್ಯೂಸ್ 45 ರಿಂದ 50, ಡ್ರೈ ಪ್ರೂಟ್ಸ್ ಶೇಕ್ 75 ರಿಂದ 80, ಸಪೋಟ 50 ರಿಂದ 55, ಪಪ್ಪಾಯ ಜ್ಯೂಸ್ 50 ರಿಂದ 55, ಗ್ರೇಫ್ಸ್ ಜ್ಯೂಸ್ 45 ರಿಂದ 50, ಪಲ್ಲಿ ಗ್ರೇಪ್ ಜ್ಯೂಸ್ 40 ರಿಂದ 50, ಕಬ್ಬಿನ ಜ್ಯೂಸ್ 35 ರಿಂದ 40 ಹಾಗೂ ಟೆಂಡರ್ ಕೊಕನಟ್ ಮಿಲ್ಕ್ ಶೇಕ್ 80 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ಕನಿಷ್ಠ ತಾಪಮಾನ 10 ವರ್ಷಗಳಲ್ಲೇ ಅತ್ಯಧಿಕ!
ಮತ್ತೊಂದೆಡೆ, ನಗರದ ಹಲವು ಕಡೆಗಳಲ್ಲಿ ಎಳನೀರು 50 ರಿಂದ 70 ರೂ. ವರೆಗೂ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಾದರೂ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ಅಂಗಡಿಗಳ ಮಾಲೀಕರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ