AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮತದಾನ ಮಾಡದವರು ಬದುಕಿದ್ದು ಸತ್ತಂತೆ, ಬ್ಯಾನರ್ ಹಾಕಿ ಆಕ್ರೋಶ​

ಸಿಲಿಕಾನ್ ಸಿಟಿ, ಸರ್ಕಾರದ ಖಜಾನೆ ತುಂಬಿಸೋ ನಗರಿ. ಐಟಿ ಬಿಟಿ ಕಂಪನಿಗಳ ನೆಲೆ.. ವಿದ್ಯಾವಂತರೇ ತುಂಬಿರೋ ಮಯಾನಗರಿ ಬೆಂಗಳೂರು.. ಆದ್ರೆ, ಬೆಂಗಳೂರಿನಲ್ಲಿ ಈ ಬಾರಿಯೂ ಮತದಾನ ಕಡಿಮೆಯಾಗಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಮತದಾನ ಮಾಡದವರು ಬದುಕಿದ್ದು ಸತ್ತಂತೆ ಅಂತ ಬ್ಯಾನರ್​ ಹಾಕಿದ್ದಾರೆ.

ಬೆಂಗಳೂರು: ಮತದಾನ ಮಾಡದವರು ಬದುಕಿದ್ದು ಸತ್ತಂತೆ, ಬ್ಯಾನರ್ ಹಾಕಿ ಆಕ್ರೋಶ​
ಮತ ಹಾಕದವರ ವಿರುದ್ಧ ಆಕ್ರೋಶ
Poornima Agali Nagaraj
| Edited By: |

Updated on: Apr 27, 2024 | 1:51 PM

Share

ಬೆಂಗಳೂರು, ಏಪ್ರಿಲ್​ 27: ಲೋಕಸಭೆ ಚುನಾವಣೆಯ (Lok Sabha Election) ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ನಡೆಯಿತು. ಬೆಂಗಳೂರಿನಲ್ಲಿ (Bengaluru) ಪ್ರತಿ ಬಾರಿಯಂತೆ ಕಡಿಮೆ ಮತದಾನವಾಗಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಮತದಾನ (Voting)ಮಾಡದವರು ಬದುಕಿದ್ದು ಸತ್ತಂತೆ ಅಂತ ರಸ್ತೆ ಬದಿಗಳಲ್ಲಿ ಬ್ಯಾನರ್​ ಹಾಕಿದ್ದಾರೆ. “ಚುನಾವಣಾ ಆಯೋಗ ಅಷ್ಟೊಂದು ಪ್ರಚಾರ ಮಾಡಿದ ನಂತರವೂ ಮತದಾನದಿಂದ ದೂರ ಉಳಿದು ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿಗಳು” ಎಂದು ಬ್ಯಾನರ್​ ಹಾಕಿದ್ದಾರೆ.

“ಪ್ರತಿ ಸಲದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ವಲಸಿಗರು ಕೈ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮತದಾನ ಮಾಡುವ ಹಕ್ಕಿದ್ದರೂ ಮತ ಹಾಕಿಲ್ಲ. ಇವರು ಬದುಕಿದ್ದು ಸತ್ತಂತೆ” ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

14 ಕ್ಷೇತ್ರಗಳಲ್ಲಿನ ಶೇಕಡಾವಾರು ಮತದಾನ

ರಾಜ್ಯದ 14 ಕ್ಷೇತ್ರಗಳಲ್ಲಿ ಒಟ್ಟು 69.23 ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 52.81 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 54.42 ರಷ್ಟು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 67.29 ರಷ್ಟು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 53.15 ರಷ್ಟು, ಚಾಮರಾಜನಗರ ಕ್ಷೇತ್ರದಲ್ಲಿ ಶೇ 76.59 ರಷ್ಟು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 76.82 ರಷ್ಟು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ 73.11 ರಷ್ಟು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇ 77.43 ರಷ್ಟು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 77.51 ರಷ್ಟು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇ 78.07 ರಷ್ಟು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ 81.48 ರಷ್ಟು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇ 70.45 ರಷ್ಟು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇ 77.70 ರಷ್ಟು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 76.06 ರಷ್ಟು ಮತದಾನವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಲು ಕಾರಣವೇನು? ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾಡಿದ ಪಟ್ಟಿ ಇಲ್ಲಿದೆ ನೋಡಿ

ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಮುಂದುವರೆದಿದ್ದು, ಮತದಾನ ಪ್ರಮಾಣ ನಿರೀಕ್ಷೆಯಂತೆ ಕಡಿಮೆ ಪ್ರಮಾಣದಲ್ಲಾಗಿದೆ. ಬೇರೆ ಕಡೆಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತಚಲಾಯಿಸಿದ್ದಾರೆ. ಯುವ ಮತದಾರರು, ವೃದ್ಧರು, ಶತಾ ಯುಷಿಗಳು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕೆಲವೆಡೆ ಬಹಿಷ್ಕಾರ

ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದ ಕಾರಣ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಅವರಿಗೆ ಎದುರಾಯಿತು.

ಇನ್ನು ದೇಶಾದ್ಯಂತ ನಡೆದ ಎರಡನೇ ಹಂತದ ಮತದಾನದಲ್ಲಿ ತ್ರಿಪುರಾದಲ್ಲಿ 77ರಷ್ಟು ಮತದಾನವಾಗಿದೆ. ಮಣಿಪುರದಲ್ಲಿ 76, ಮಹಾರಾಷ್ಟ್ರದಲ್ಲಿ 53ರಷ್ಟು ವೋಟಿಂಗ್ ಆಗಿದೆ. ಇನ್ನೂ ಮಧ್ಯಪ್ರದೇಶದಲ್ಲಿ 55, ಉತ್ತರ ಪ್ರದೇಶದಲ್ಲಿ 52, ಪಶ್ಚಿಮ ಬಂಗಾಳದಲ್ಲಿ 71ರಷ್ಟು ಮತದಾನವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ