AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ನಿಯಮಕ್ಕೆ ಡೋಂಟ್​ ಕೇರ್​: ಗ್ರಾಹಕರಿಂದ ಹೆಚ್ಚು ಹಣ ಪಡೆಯುತ್ತಿರುವ ಆ್ಯಪ್​ ಆಧಾರಿತ ಟ್ಯಾಕ್ಸಿ ಕಂಪನಿಗಳು

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಅಗ್ರಿಗೇಟರ್‌ ಕಂಪನಿಗಳ ವಾಹನಗಳ ಮೌಲ್ಯದ ಆಧಾರದಲ್ಲಿ ಏಕರೂಪ ಪ್ರಯಾಣ ದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಓಲಾ, ಊಬರ್​ ಹಾಗೂ ರ್ಯಾಪಿಡೋ ಸೇರಿದಂತೆ ಅಗ್ರಿಗೇಟರ್​ ಲೈಸೆನ್ಸ್​​ ಪಡೆದ ಕಂಪನಿಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ ಎಂದು ಸಾವರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಯಮಕ್ಕೆ ಡೋಂಟ್​ ಕೇರ್​: ಗ್ರಾಹಕರಿಂದ ಹೆಚ್ಚು ಹಣ ಪಡೆಯುತ್ತಿರುವ ಆ್ಯಪ್​ ಆಧಾರಿತ ಟ್ಯಾಕ್ಸಿ ಕಂಪನಿಗಳು
ಓಲಾ, ಊಬರ್​
Kiran Surya
| Updated By: ವಿವೇಕ ಬಿರಾದಾರ|

Updated on:Apr 02, 2024 | 10:20 AM

Share

ಬೆಂಗಳೂರು, ಏಪ್ರಿಲ್​ 02: ಆ್ಯಪ್‌ ಆಧಾರಿತ ಟ್ಯಾಕ್ಸಿ (Taxi) ಸೇವೆ ಒದಗಿಸುವ ಅಗ್ರಿಗೇಟರ್‌ ಕಂಪನಿಗಳು ಹಾಗೂ ಇತರೆ ಟ್ಯಾಕ್ಸಿ ಚಾಲಕರ ಕಳ್ಳಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ, ವಾಹನಗಳ ಮೌಲ್ಯದ ಆಧಾರದಲ್ಲಿ ಏಕರೂಪ ಪ್ರಯಾಣ ದರ ನಿಗದಿಪಡಿಸಿದೆ. ಆದರೂ ಕೂಡ ಓಲಾ (Ola), ಊಬರ್ (Uber)​ ಹಾಗೂ ರ್ಯಾಪಿಡೋ (Rapido) ಸೇರಿದಂತೆ ಅಗ್ರಿಗೇಟರ್​ ಲೈಸೆನ್ಸ್​​ ಪಡೆದ ಕಂಪನಿಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ ಎಂದು ಸಾವರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಲಾ, ಊಬರ್​ ಹಾಗೂ ರ್ಯಾಪಿಡೋ ಸೇರಿದಂತೆ ಅಗ್ರಿಗೇಟರ್‌ ಕಂಪನಿಗಳು ಸಮಯಕ್ಕೆ ತಕ್ಕ ಹಾಗೆ ದರ ಬದಲಾಯಿಸುತ್ತವೆ ಎಂಬ ಆರೋಪವಿದೆ. ನಾರ್ಮಲ್​​ ಟೈಮ್​ನಲ್ಲಿ ತೆಗೆದುಕೊಳ್ಳುವ ಹಣಕ್ಕಿಂತ, ಪೀಕ್​ ಅವರ್​ನಲ್ಲಿ ತೆಗೆದುಕೊಳ್ಳುವ ಹಣ ಹೆಚ್ಚಾಗಿರುತ್ತದೆ. ಈ ದರ ಆಗಾಗ ಬದಲಾಗುತ್ತಾ ಇರುತ್ತದೆ. ಪಿಕ್ ಅವರ್​ನಲ್ಲಿ ಸರ್​ಚಾರ್ಜ್ (ಹೆಚ್ಚುವರಿ ತೆರಿಗೆ) ಹೆಸರಲ್ಲಿ ಪ್ರಯಾಣಿಕರಿಂದ ಒನ್‌ ಟು ತ್ರಿಬಲ್ ಹಣವನ್ನುಕಂಪನಿಗಳು ಪಡೆದುಕೊಳ್ಳುತ್ತವೆ.

ಹಾಗಾದರೆ ಗ್ರಾಹಕರಿಂದ ಪಡೆಯುತ್ತಿರುವ ಹಣ ಎಷ್ಟು? ಇಲ್ಲಿದೆ ವಿವರ…

ಪೀಕ್​ ಅವರ್​ನಲ್ಲಿ ಕೆ.ಆರ್​ ಮಾರ್ಕೆಟ್​ನಿಂದ ಮೆಜೆಸ್ಟಿಕ್ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ (3.4 ಕಿಮೀ) ಹೋಗಲು ಓಲಾ ಆ್ಯಪ್​ನಲ್ಲಿ ಮಾರುತಿ ಸುಜುಕಿ ಎರಿಟಿಗಾ SUV (ಕಾರಿನ ಬೆಲೆ 13- ಲಕ್ಷ ರೂ.) ಬುಕ್​ ಮಾಡಿದರೆ 233 ರೂ. ತೆಗೆದುಕೊಳ್ಳಲಾಗುತ್ತದೆ. ಆದರೆ ನಿಯಮದ ಪ್ರಕಾರ 115 ರೂ. ತೆಗೆದುಕೊಳ್ಳಬೇಕು. ಹೆಚ್ಚುವರಿಯಾಗಿ 118 ರೂ. ಪಡೆದುಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Ola Electric: ಓಲಾ ಎಸ್1 ಸರಣಿ ಇವಿ ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಪೀಕ್​ ಅವರ್​ನಲ್ಲಿ ವಿಧಾನಸೌಧದಿಂದ ಬಿಬಿಎಂಪಿ ಮುಖ್ಯ ಕಚೇರಿ (2.4 ಕಿಮೀ) ಹೋಗಲು ಊಬರ್ ಆ್ಯಪ್​ನಲ್ಲಿ ಟಾಟಾ ಇಂಡಿಕಾ (ಕಾರಿನ ಬೆಲೆ – 4 ರಿಂದ 6 ಲಕ್ಷ ರೂ.) ಬುಕ್​ ಮಾಡಿದರೆ 151 ರೂ. ತೆಗೆದುಕೊಳ್ಳಲಾಗುತ್ತಿದೆ. ಆದರೆ ನಿಯಮದ ಪ್ರಕಾರ 100 ರೂ. ತೆಗೆದುಕೊಳ್ಳಬೇಕು. ಆದರೆ ಹೆಚ್ಚುವರಿಯಾಗಿ- 51 ರೂ. ಪಡೆಯಬೇಲಾಗುತ್ತದೆ.

ಪೀಕ್​ ಅವರ್​ನಲ್ಲಿ ಟೌನ್ ಹಾಲ್​ನಿಂದ ಕೆ.ಆರ್ ಮಾರ್ಕೆಟ್ (1.1 ಕಿಮೀ) ಹೋಗಲು ರ್ಯಾಪಿಡೋ ಆ್ಯಪ್​ನಲ್ಲಿ ಟಾಟಾ ಇಂಡಿಕಾ (ಕಾರಿನ ಬೆಲೆ – 5 ರಿಂದ 6 ಲಕ್ಷ ರೂ.) ಬುಕ್​ ಮಾಡಿದರೆ 105 ರೂ. ತೆಗೆದುಕೊಳ್ಳಲಾಗುತ್ತಿದೆ. ಆದರೆ ನಿಯಮದ ಪ್ರಕಾರ 100ರೂ. ಪಡೆಯಬೇಕು. ಆದರೆ ಹೆಚ್ಚುವರಿಯಾಗಿ 5 ರೂಪಾಯಿ ಪಡೆಯಲಾಗುತ್ತಿದೆ.

ಸಾರಿಗೆ ಇಲಾಖೆ ನಿಗದಿಪಡಿಸಿರುವ ದರ

10 ಲಕ್ಷಕ್ಕಿಂತ ಕಡಿಮೆ ವಾಹನಕ್ಕೆ 4 ಕಿಮೀ ವರೆಗೆ 100 ರೂಪಾಯಿ. ನಂತರದ ಪ್ರತಿ ಕಿಮೀ 24 ರೂಪಾಯಿ.

10 ರಿಂದ 15 ಲಕ್ಷದ ವಾಹನಕ್ಕೆ ಕನಿಷ್ಠ 4 ಕಿಮೀ ವರೆಗೆ 115 ರೂಪಾಯಿ. ನಂತರದ ಪ್ರತಿ ಕಿಮೀ 28 ರೂಪಾಯಿ ನಿಗದಿ ಮಾಡಲಾಗಿದೆ.

15 ಲಕ್ಷಕ್ಕಿಂತ ಹೆಚ್ಚಿನ ವಾಹನಕ್ಕೆ ಪ್ರತೀ ಕಿಮೀ 32 ರೂಪಾಯಿ (ನಿಗದಿತ ಕನಿಷ್ಠ 4 ಕಿಮೀ. ವರೆಗೆ 130 ರೂಪಾಯಿ) ನಿಗದಿ ಮಾಡಲಾಗಿದೆ. ಆದರೆ ಈ ದರವನ್ನು ಯಾವುದೇ ಕಂಪನಿಗಳು ಪಾಲಿಸುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:06 am, Tue, 2 April 24