ಕೋಡ್ ವರ್ಡ್ ಮೂಲಕ ಬೆಂಗಳೂರಿನಲ್ಲಿ ದರೋಡೆ ಮಾಡುತ್ತಿದ್ದ ಇಬ್ಬರು ಅರೆಸ್ಟ್! ಖದೀಮರ ಕೋಡ್ ವರ್ಡ್ ಹೇಗಿದೆ ನೋಡಿ
ಮನೆ ಕೆಲಸ ಮಾಡಿಸಲು ಬ್ಯಾಂಕ್ನಿಂದ ನಾಲ್ಕು ಲಕ್ಷ ಹಣ ಡ್ರಾ ಮಾಡಿ ಬರುತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು. ಆರೋಪಿಗಳ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು.

ಬೆಂಗಳೂರು: ಓಜಿ ಕುಪ್ಪಂ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಿರಿಕುಮಾರ್, ಷಣ್ಮುಗಂ ಎಂಬುವವರನ್ನ ಬೆಂಗಳೂರಿನ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದು, ಕೋಡ್ ವರ್ಡ್ಗಳ (Code Word) ಮೂಲಕವೇ ದರೋಡೆ (Robbery), ಕಳ್ಳತನ (Theft) ಮಾಡುತ್ತಿದ್ದರು. ತಲೆ ಮೇಲೆ ಕೈ ಇಟ್ಟರೆ ಅಲರ್ಟ್ ಆಗಿರುವಂತೆ, ಮೂಗಿನ ಮೇಲೆ ಕೈ ಇಟ್ಟರೆ ಕಳ್ಳತನ ಮಾಡುವಂತೆ ಕೋಡ್ ವರ್ಡ್ ಮೂಲಕ ಸೂಚನೆ ನೀಡುತ್ತಿದ್ದರು.
ಬಂಧಿತ ಆರೋಪಿಗಳು ಬ್ಯಾಂಕ್ ಬಳಿ ಹೊಂಚು ಹಾಕಿ ಹಣ ಡ್ರಾ ಮಾಡಿಕೊಂಡು ಬರುವವರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ದರೋಡೆ ಮಾಡುತಿದ್ದರು. ಮನೆ ಕೆಲಸ ಮಾಡಿಸಲು ಬ್ಯಾಂಕ್ನಿಂದ ನಾಲ್ಕು ಲಕ್ಷ ಹಣ ಡ್ರಾ ಮಾಡಿ ಬರುತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು. ಆರೋಪಿಗಳ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರಿಗೆ ಇದೀಗ ರೇಡ್ ಹ್ಯಾಂಡ್ ಅಗಿ ಸಿಕ್ಕಿ ಬಿದ್ದಿದ್ದಾರೆ.
ಕಾಲೇಜಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವನು ಬಂಧನ ಪ್ರತಿಷ್ಟಿತ ಕಾಲೇಜಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಎಎಸ್ಪಿ ಲಕ್ಷ್ಮೀ ಗಣೇಶ ನೇತೃತ್ವದಲ್ಲಿ ಪಿಎಸ್ಐ ಗಜೇಂದ್ರ ಮತ್ತು ತಂಡದಿಂದ ದಾಳಿ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ನೈಜೀರಿಯಾ ಮೂಲದ ವ್ಯಕ್ತಿ ಪ್ರತಿಷ್ಠಿತ ಕಾಲೇಜಿನ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಡ್ರಗ್ಸ್ ಖರೀದಿಸುವ ನೆಪದಲ್ಲಿ ಹೋಗಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 15 ಎಂಡಿಎಮ್ ಮಾತ್ರೆ, ಕೋಕೆನ್, ಕ್ರಿಸ್ಟಲ್ ಮಿಥ್, ಎಲ್ಎಸ್ಟಿ ಸ್ಟಾಂಪ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಪಡಿತರ ಅಕ್ಕಿ ಸಾಗಿಸುತ್ತಿದ್ದ ಇಬ್ಬರು ಬಂಧನ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಇಬ್ಬರನ್ನು ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಡೇಕೋಟೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಹಾನಗಲ್ ಕ್ರಾಸನಿಂದ ತುಮಕೂರಿಗೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದರು. ಅಕ್ಕಿ ಸಾಗಿಸುತ್ತಿದ್ದ ಇಬ್ಬರನ್ನ ಬಂಧಿಸಿದ ಗುಡೇಕೋಟೆ ಪೊಲೀಸರು, 50 ಕೆಜಿ ತೂಕದ 240 ಮೂಟೆ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಆದಿಲ್ ಬಾಷಾ ಹಾಗೂ ಸುರೇಶ ಬಂಧಿತ ಆರೋಪಿಗಳು. ಈ ಪ್ರಕರಣ ಗುಡೇಕೋಟೆ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ
Lata Mangeshkar: ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಚೇತರಿಕೆ; ವೈದ್ಯರು ನೀಡಿದ ಮಾಹಿತಿ ಇಲ್ಲಿದೆ
Published On - 10:39 am, Sun, 23 January 22




