ಮೊಬೈಲ್ ಕಳ್ಳತನ ತಡೆಯಲು ಪೊಲೀಸರಿಂದ ಹೊಸ ಅಸ್ತ್ರ: ಖದೀಮರು ಫೋನ್ ಕದ್ದರೂ ನೋ ಯೂಸ್
ಬೆಂಗಳೂರು ನಗರದಲ್ಲಿ ಸಿಇಐಆರ್ ಆ್ಯಪ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಯಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಫೋನ್ ಕಳ್ಳತನ(Mobile Theft) ಹೆಚ್ಚಾಗುತ್ತಿದೆ, ಹೀಗಾಗಿ ಮೊಬೈಲ್ ಫೋನ್ ಕಳ್ಳತನ ತಡೆಗೆ ಪೊಲೀಸರು (Bengaluru Police) ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಆ್ಯಪ್ ಮೂಲಕ ಮೊಬೈಲ್ ಫೋನ್ ಕಳ್ಳರಿಗೆ ಖಾಕಿ ಶಾಕ್ ಕೊಡಲು ಮುಂದಾಗಿದ್ದಾರೆ. ಖಾಕಿ ಪ್ಲ್ಯಾನ್ ಹೇಗಿದೆ ಅಂದ್ರೆ ಮೊಬೈಲ್ ಕದ್ರು ಇನ್ಮುಂದೆ ಅದು ನೋ ಯೂಸ್ ಆಗಲಿದೆ.
ಮೊಬೈಲ್ ಫೋನ್ ಕಳ್ಳತನ ತಡೆಯಲು ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಬೆಂಗಳೂರು ನಗರದಲ್ಲಿ ಸಿಇಐಆರ್ ಆ್ಯಪ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಯಲು ಯೋಜನೆ ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ ನಗರದಲ್ಲಿ ಕೇಂದ್ರ ಸರ್ಕಾರ ನಿರ್ಮಿತ ಸಿಇಐಆರ್(ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್) ಆ್ಯಪ್ ಬಳಕೆಗೆ ಇಲಾಖೆ ಮುಂದಾಗಿದೆ.
ಈ ಆ್ಯಪ್ ಹೇಗೆ ಕೆಲಸ ಮಾಡುತ್ತದೆ
ಮೊಬೈಲ್ ಕಳ್ಳತನವಾದ ಬಳಿಕ ಬೆಂಗಳೂರು ಪೊಲೀಸರ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೇರವಾಗಿ ಸಿಇಐಆರ್ ಆ್ಯಪ್ ಗೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಸಿಇಐಆರ್ ಆ್ಯಪ್ ಮೂಲಕ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಆಗುತ್ತದೆ. ಅಂದ್ರೆ ಇ ಲಾಸ್ಟ್ ನಲ್ಲಿ ನಿಮ್ಮ ಮೊಬೈಲ್ ಐಎಂಇಐ ಸಂಖ್ಯೆ ನಮೂದಿಸಬೇಕು. ನೊಂದಾಯಿತ ಐಎಂಇಐ ಸಂಖ್ಯೆಯ ಮೊಬೈಲನ್ನ ಸಿಇಐಆರ್ ಆ್ಯಪ್ ಸಂಪೂರ್ಣ ಬ್ಲಾಕ್ ಮಾಡುತ್ತೆ. ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸದಂತೆ ಮೊಬೈಲ್ ಬ್ಲಾಕ್ ಆಗುತ್ತೆ. ಮೊಬೈಲ್ ಕದ್ದರು ಬಳಕೆಗೆ ಆಗದಂತೆ ಆಗುತ್ತದೆ. ಆ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಆದ್ರೆ ಕದ್ದ ಮೊಬೈಲ್ ಫೋನ್ ಬಿಡಿಭಾಗಗಳಾಗಿ ಮಾಡಿದರೆ ಬ್ಲಾಕ್ ಅಸಾಧ್ಯ. ಅಲ್ಲದೆ ಕಳ್ಳತನವಾದ ಮೊಬೈಲ್ ಫೋನ್ ಆನ್ ಆದ ಕೂಡಲೇ ಲೊಕೇಷನ್ ಪತ್ತೆಯಾಗುತ್ತೆ. ಸದ್ಯ ದೇಶದ ಎರಡು ಮಹಾನಗರಗಳಲ್ಲಿ ಮಾತ್ರ ಸಿಇಐಆರ್ ಆ್ಯಪ್ ಬಳಕೆಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ. ಈ ಎರಡು ನಗರಗಳಲ್ಲಿ ಪೊಲೀಸರು ಸಿಇಐಆರ್ ಆ್ಯಪ್ ಬಳಸುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿದೆ. ದಿನವೊಂದಕ್ಕೆ ಸರಾಸರಿ 20 ರಿಂದ 30 ಮೊಬೈಲ್ ಕಳ್ಳತನವಾಗುತ್ತಿದೆ. ಮೊಬೈಲ್ ಕಳವು ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿದೆ. ಆದ್ರಿಂದ ಮೊಬೈಲ್ ಕಳ್ಳತನ ತಡೆಗೆ ಪೊಲೀಸರು ಸಿಇಐಆರ್ ಆ್ಯಪ್ ಮೊರೆ ಹೋಗಿದ್ದಾರೆ. ಈಗಾಗಲೇ ನಿನ್ನೆಯಿಂದ ಪ್ರಾಯೋಗಿಕವಾಗಿ ಆ್ಯಪ್ ಬಳಕೆ ಕಾರ್ಯಾರಂಭವಾಗಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕ ಕಾರ್ಯಾಚರಣೆ ನಡೆಯಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:11 am, Sun, 18 September 22