AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Cut: ವೀಕೆಂಡ್​​​ನಲ್ಲಿ ಬೆಂಗಳೂರಿಗರಿಗೆ ತಟ್ಟಲಿದೆ ಪವರ್ ಕಟ್ ಬಿಸಿ: ಈ ನಗರಗಳಲ್ಲಿ ವಿದ್ಯುತ್ ಕಡಿತ

Bengaluru Power Cut today: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನಲ್ಲಿ ಇಂದು ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾದರೆ ಯಾವೆಲ್ಲಾ ನಗರಗಳಲ್ಲಿ ಮತ್ತು ಯಾವ ಸಮಯದಲ್ಲಿ ವಿದ್ಯುತ್​ ಕಡಿತವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Power Cut: ವೀಕೆಂಡ್​​​ನಲ್ಲಿ ಬೆಂಗಳೂರಿಗರಿಗೆ ತಟ್ಟಲಿದೆ ಪವರ್ ಕಟ್ ಬಿಸಿ: ಈ ನಗರಗಳಲ್ಲಿ ವಿದ್ಯುತ್ ಕಡಿತ
Bengaluru Power Cut
ಗಂಗಾಧರ​ ಬ. ಸಾಬೋಜಿ
|

Updated on:Aug 24, 2025 | 8:18 AM

Share

ಬೆಂಗಳೂರು, ಆಗಸ್ಟ್​ 24: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸಿಲಿಕಾನ್ ಸಿಟಿ ಜನರಿಗೆ ವೀಕೆಂಡ್​​​ನಲ್ಲಿ ವಿದ್ಯುತ್​ ವ್ಯತ್ಯಯದ ಬಿಸಿ ತಟ್ಟಲಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (Bescom) ತಿಳಿಸಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ.

ವಿದ್ಯುತ್ ಕಡಿತ ಏಕೆ?

ಅಧಿಕಾರಿಗಳ ಪ್ರಕಾರ, ಪ್ರಸರಣ ಜಾಲದ ತುರ್ತು ನಿರ್ವಹಣೆ ಮತ್ತು ನವೀಕರಣ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇಂದು ವಿದ್ಯುತ್ ಕಡಿತ ಅನಿವಾರ್ಯವಾಗಿದೆ. ಇದು ಮುಂದಿನ ದಿನಗಳಲ್ಲಿ ವಿಶ್ವಾಸಾರ್ಹ ಮತ್ತು ನಿರಂತರ ವಿದ್ಯುತ್ ಸರಬರಾಜು ಒದಗಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಎಲ್ಲೆಲ್ಲಿ ವಿದ್ಯುತ್ ಕಡಿತ

ಎಚ್​​ಎಂಟಿ ರಸ್ತೆ, ಆರ್​ ಎನ್​​ಎಸ್​​ ಅಪಾರ್ಟ್​​ ಮೆಂಟ್​, ಸಿಎಂಟಿಐ, ಬೋರಲಿಂಗಪ್ಪ ಗಾರ್ಡನ್​, ಪೀಣ್ಯ ಪೊಲೀಸ್​​ ಠಾಣೆ ರಸ್ತೆ, ಟೆಲಿಪೋನ್​​ ಎಕ್ಸ್​ ಚೇಂಜ್​, ರಿಲಯನ್ಸ್​​ ಕಮ್ಯುನಿಕೇಷನ್​, ಗಣಪತಿನಗರ ಮುಖ್ಯರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮಲಯಾಳಿ ಅತಿಥಿಗೃಹ ರಸ್ತೆ, ಕೆಎಚ್​​ ಬಿ ಲೇಔಟ್​, ಬ್ಯಾಂಕ್​​ ಕಲೊನಿ, ಯುಕೊ ಬ್ಯಾಂಕ್​​ ರಸ್ತೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜೆಕೆಡಬ್ಲೂ ಲೇಔಟ್​, ಇಎಸ್​​ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್​ ಸಂಪರ್ಕ ಇರುವುದಿಲ್ಲ.

ಇದನ್ನೂ ಓದಿ: Power Cut: ಬೆಂಗಳೂರು ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ಇಂದು 6 ಗಂಟೆ ವಿದ್ಯುತ್ ವ್ಯತ್ಯಯ

ನೆಲಗೆದರನಹಳ್ಳಿ, ಸಬ್​​ ಸ್ಟೇಷನ್​ ವ್ಯಾಪ್ತಿಯ ಕೆಂಪಯ್ಯ ಗಾರ್ಡನ್​​, ಶಿಗರಳಪಾಳ್ಯ ಮುಖ್ಯರಸ್ತೆ, ಮಾರುತಿ ಇಂಡಸ್ಟ್ರಿಯಲ್​ ಎಸ್ಟೇಟ್​, ಎಚ್​ ಎಂಟಿ ಲೇಜೌಟ್​​, ಶಿವಪುರ, ಗೃಹಲಕ್ಷಿ ಲೇಔಟ್​, ಶಿವಪುರ ಲೇಔಟ್​​, ವಿನಾಯನಗರ, 8ನೇ ಮೈಲಿ ರಸ್ತೆ, ಜಾಲಹಳ್ಳಿ ಕ್ರಾಸ್​, ಶೋಭಾ ಅಪಾರ್ಟ್​ ಮೆಂಟ್​, ಅಮರಾಮತಿ ಲೇಔಟ್​, ಕೆಎಪಿಎಲ್​, ಕರ್ನಾಟಕ ಆ್ಯಂಟಿಬಯೋಟಿಕ್ಸ್​​ ಪ್ರೈವೇಟ್​​ ಲಿಮಿಟೆಡ್​​, ರುಕ್ಮಿಣಿನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್​ ಸಂಪರ್ಕ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:15 am, Sun, 24 August 25