Bengaluru Stampede: RCB, KSCA ವಿರುದ್ಧ ಇಡಿಗೆ ದೂರು, ಇತ್ತ ಸಿಎಂ-ಡಿಸಿಎಂ ಮೇಲೆ ಕ್ರಮಕ್ಕೆ ಸ್ವಾಮೀಜಿಗಳು ಮನವಿ

Bengaluru RCB Victory Celebrations Stampede: ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ (ಜೂ.03) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಈ ಪ್ರಕರಣ ಸಂಬಂಧ ಸ್ವಾಮೀಜಿಗಳು ಆರ್​ಸಿಬಿ, ಕೆಎಸ್​ಸಿಎ, ಸಿಎಂ ಮತ್ತು ಡಿಸಿಎಂ ವಿರುದ್ಧ ದೂರು ದಾಖಲಿಸಿದ್ದಾರೆ.

Bengaluru Stampede: RCB, KSCA ವಿರುದ್ಧ ಇಡಿಗೆ ದೂರು, ಇತ್ತ ಸಿಎಂ-ಡಿಸಿಎಂ ಮೇಲೆ ಕ್ರಮಕ್ಕೆ ಸ್ವಾಮೀಜಿಗಳು ಮನವಿ
ಇಡಿಗೆ ಸ್ವಾಮೀಜಿಗಳು ಬರೆದ ಪತ್ರ, ಆರ್​ಸಿಬಿ

Updated on: Jun 09, 2025 | 3:40 PM

ಬೆಂಗಳೂರು, ಜೂನ್ 09: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) 11 ಮಂದಿ ಆರ್​ಸಿಬಿ (RCB) ಅಭಿಮಾನಿಗಳು ಮೃತಪಟ್ಟಿದ್ದಾರೆ. ಸದ್ಯ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪ್ರಕರಣ ಸಂಬಂಧ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಹಲವು ವಿಚಾರಗಳು ಬಹಿರಂಗವಾಗುತ್ತಿವೆ. ಕಾಲ್ತುಳಿತ ಪ್ರಕರಣ ಸಂಬಂಧ ಈಗಾಗಲೆ ನಾಲ್ವರನ್ನು ಬಂಧಿಸಲಾಗಿದೆ.  ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು ಆರ್​ಸಿಬಿ ಮ್ಯಾನೇಜ್ಮೆಂಟ್​ ಮತ್ತು ಕೆಎಸ್​ಸಿಎ ವಿರುದ್ಧ ಇಡಿಗೆ ದೂರು ನೀಡಿದ್ದಾರೆ. ಮತ್ತು ಅತಿ ಹಿಂದುಳಿದ ಮಠಾಧೀಶರ ಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.

ಆರ್​ಸಿಬಿ ವಾಣಿಜ್ಯೋದ್ಯಮಕ್ಕಾಗಿ ಬಳಸಿಕೊಂಡಿದೆ. ತಮ್ಮ ಪ್ರತಿಷ್ಠೆಗಾಗಿ ಆರ್​​ಸಿಬಿ ಕೋಟ್ಯಂತರ ರೂ. ಖರ್ಚು ಮಾಡಿದೆ. ಆರ್​ಸಿಬಿ ಹಣಕಾಸು ವ್ಯವಹಾರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು, ಕೆಎಸ್​​ಸಿಎವು ಸ್ಥಾನ ಮತ್ತು ಪದವಿಗಾಗಿ ಹಣ ನೀಡಿರುವುದು ಗೊತ್ತಾಗಿದೆ. ವಾಣಿಜ್ಯ ಸಂಸ್ಥೆಗಳಿಗೆ ನೀಡಬೇಕಿದ್ದ ಕೋಟಿಗಟ್ಟಲೇ ಹಣ ಬಾಕಿ ಇದೆ. ಕಾರ್ಯಕ್ರಮಕ್ಕೆಂದು ಹಣ ಸಂಗ್ರಹಿಸಿ ಬೇರೆ ಕಡೆ ಬಳಸಿದ್ದಾರೆ‌. ಸರ್ಕಾರ, ಬಿಸಿಸಿಐನಿಂದಲೂ ಹಣ ಪಡೆದು ತಪ್ಪು ಲೆಕ್ಕ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣಕ್ಕೆ ಸರಿಯಾದ ಲೆಕ್ಕ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್​​ಸಿಎ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸಿಎಂ, ಡಿಸಿಎಂ ವಿರುದ್ಧ ದೂರು

ಅತೀ ಹಿಂದುಳಿದ ಮಠಾಧೀಶರ ಸಭಾ ಬೆಂಗಳೂರಿನ ಕಬ್ಬನ್​ಪಾರ್ಕ್​​ ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಗೃಹ ಸಚಿವ ಪರಮೇಶ್ವರ್ ಮತ್ತು ಆರ್​​ಸಿಬಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದೆ. ಇವರ ನಿರ್ಲಕ್ಷ್ಯದಿಂದಲೇ ಆರ್​ಸಿಬಿಯ 11 ಅಭಿಮಾನಿಗಳ ಸಾವಾಗಿದೆ. ಹೀಗಾಗಿ ನಾಲ್ವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ
Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಳ
Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು
ತನಿಖೆಗಿಳಿದ ಸಿಐಡಿ: ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಕುನ್ಹಾ ಆಯೋಗಕ್ಕೆ ಸೂಚನೆ

ಪ್ರಕರಣ ರದ್ದು ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕೇಸ್​ ಅನ್ನು ರದ್ದುಪಡಿಸುವಂತೆ ಆರ್‌ಸಿಬಿ ಸಿಒಒ ರಾಜೇಶ್ ಮೆನನ್, ನಿಖಿಲ್ ಸೋಸಲೆ, ಡಿಎನ್‌ಎ ಇವೆಂಟ್‌ ಮ್ಯಾನೇಜೆಂಟ್‌ನ ಸುನೀಲ್‌ ಮ್ಯಾಥ್ಯೂ, ಕಿರಣ್‌ ಕುಮಾರ್, ಶಮಂತ್ ಮಾವಿನಕೆರೆ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಅರ್ಜಿಗಳಲ್ಲಿ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಕಾರ್ಯಕ್ರಮ ಆಯೋಜನೆಯಲ್ಲಿ ಸರ್ಕಾರದ ಪಾತ್ರ ಇದೆ. ಸಿಎಂ ಟ್ವೀಟ್, ಡಿಸಿಎಂ ಹೇಳಿಕೆಗಳನ್ನೇ ಆಧಾರವನ್ನಾಗಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ ಎಂಟರ್​ಟೈನ್ಮೆಂಟ್, ಸರ್ಕಾರದ ವಿರುದ್ಧ ಗಂಭೀರ ಆರೋಪ

ಹೈಕಮಾಂಡ್​ಗೆ ಮಾಹಿತಿ ನೀಡಲಿರುವ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಜೂ.09 ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಆರ್​ಸಿಬಿ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳ ಸಾವು ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ ನೀಡಲಿದ್ದಾರೆ.

ವರದಿ: ವಿಕಾಸ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Mon, 9 June 25