AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ರಿಂಗ್​ ರೈಲು: ಅಂತಿಮ ಹಂತದ ಸರ್ವೆ ಕಾರ್ಯ ಆರಂಭ, ಏನಿದು ಯೋಜನೆ?​​ ಇಲ್ಲಿದೆ ಓದಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಹೊರವಲಯದ ಸುತ್ತಲೂ ಸುಮಾರು 287 ಕಿಮೀ ಉದ್ದದ ರಿಂಗ್​ ರೈಲು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು ರಿಂಗ್​ ರೈಲು: ಅಂತಿಮ ಹಂತದ ಸರ್ವೆ ಕಾರ್ಯ ಆರಂಭ, ಏನಿದು ಯೋಜನೆ?​​ ಇಲ್ಲಿದೆ ಓದಿ
ರೈಲು
Kiran Surya
| Updated By: ವಿವೇಕ ಬಿರಾದಾರ|

Updated on: Jan 12, 2024 | 10:12 AM

Share

ಬೆಂಗಳೂರು, ಜನವರಿ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಹೊರವಲಯದ ಸುತ್ತಲೂ ಸುಮಾರು 287 ಕಿಮೀ ಉದ್ದದ ರಿಂಗ್​ ರೈಲು (Ring Rail) ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅಧ್ಯಯನಕ್ಕಾಗಿ ಈಗಾಗಲೆ 7 ಕೋಟಿ ರೂ. ಮಂಜಾರಾಗಿತ್ತು. ಇದೀಗ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಅಂತಿಮ ಹಂತದ ಲೊಕೇಶನ್ ಸರ್ವೆ ಕಾರ್ಯ ನಡೆಯುತ್ತಿದೆ.

ಈ ಲೊಕೆಶನ್​ ಸರ್ವೆಯಲ್ಲಿ ರೈಲ್ವೆ ಇಲಾಖೆ ಹಲವು ಮಾಹಿತಿ ಸಂಗ್ರಹಿಸಿದೆ. ಅಲೈನ್​ ಮೆಂಟ್, ನಿಲ್ದಾಣಗಳ ಸಂಖ್ಯೆ ಮತ್ತು ಮ್ಯಾಪಿಂಗ್, ಸಿವಿಲ್ ಸ್ಟ್ರಕ್ಚರ್-ಬ್ರಿಡ್ಜ್ ಗಳು (RUB&ROB) ಯೋಜನೆಗೆ ಬೇಕಾಗುವ ಲ್ಯಾಂಡ್ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಯಿಂದ ಅಯೋಧ್ಯೆಗೆ 11 ವಿಶೇಷ ರೈಲು

ಈ ರಿಂಗ್​ ರೈಲ್​​ ಏಳು ಪ್ರಮುಖ ನಿಲ್ದಾಣಗಳನ್ನು ಹೊಂದಿರಲಿದೆ. ನೀಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ, ಸೋಲುರು ಪ್ರಮುಖ ನಿಲ್ದಾಣಗಳಾಗಿವೆ. ಬೆಂಗಳೂರು ಉಪನಗರ ರೈಲ್ವೇ ಯೋಜನೆ (ಬಿಎಸ್​ಆರ್​ಪಿ), ನಮ್ಮ ಮೆಟ್ರೋ ರೈಲಿಗೆ ಪೂರಕವಾಗಿ ನಗರದ ಸುತ್ತ ವೃತ್ತಾಕಾರವಾಗಿ ರಿಂಗ್​ ರೈಲು ಯೋಜನೆ ನಿರ್ಮಾಣಗೊಳ್ಳಲಿದೆ. ನಗರದಲ್ಲಿ ಮುಂದಿನ 20-30 ವರ್ಷಗಳ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಲ್ಲಿ ರಿಂಗ್​ ರೈಲ್​​ ಪ್ರಮುಖ ಪಾತ್ರ ವಹಿಸಲಿದೆ.

ನಿಡವಂದದಿಂದ ದೊಡ್ಡಬಳ್ಳಾಪುರವರೆಗೆ 40.9 ಕಿಮೀ, ದೊಡ್ಡಬಳ್ಳಾಪುರದಿಂದ ದೇವನಹಳ್ಳಿವರೆಗೆ 28.5 ಕಿಮೀ, ದೇವನಹಳ್ಳಿಯಿಂದ ಮಾಲೂರುವರೆಗೆ 46.5 ಕಿಮೀ, ಮಾಲೂರಿನಿಂದ ಹೀಲಳಿಗೆವರೆಗೆ 52 ಕಿಮೀ, ಹೀಲಳಿಗೆಯಿಂದ ಹೆಜ್ಜಾಲವರೆಗೆ 42 ಕಿಮೀ, ಹೆಜ್ಜಾಲದಿಂದ ಸೋಲೂರುವರೆಗೆ 43.5 ಕಿಮೀ, ಸೋಲೂರಿನಿಂದ ನಿಡವಂದವರೆಗೆ 34.2 ಕಿಮೀ ಸಂಪರ್ಕ ಕಲ್ಪಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ