ಬೆಂಗಳೂರು ರಸ್ತೆಗಳಲ್ಲಿ AI ಕಣ್ಗಾವಲು! ಕಸ, ಗುಂಡಿ, ಒತ್ತುವರಿ ಪತ್ತೆಗೆ ಹೊಸ ತಂತ್ರಜ್ಞಾನ

ಬೆಂಗಳೂರಿನ ಕಸದ ಸಮಸ್ಯೆಗೆ ಎಐ ಅಸ್ತ್ರ ಪ್ರಯೋಗಿಸಲಾಗಿದೆ. ಎಐ ಕ್ಯಾಮೆರಾ ವಾಹನಗಳು ರಸ್ತೆಗುಂಡಿ, ಕಸ ಸೇರಿದಂತೆ ನಗರದ ಸಮಸ್ಯೆಗಳನ್ನು ಗುರುತಿಸಿ ಟಿಕೆಟ್ ಸೃಷ್ಟಿಸುತ್ತವೆ. ಸುಮಾರು 1000 ಕಸದ ಸಮಸ್ಯೆಗಳನ್ನು 10 ದಿನಗಳಲ್ಲಿ ಬಗೆಹರಿಸಲು ಜಿಬಿಎ ಮಾರ್ಷಲ್‌ಗಳಿಗೆ ಡೆಡ್‌ಲೈನ್ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು ರಸ್ತೆಗಳಲ್ಲಿ AI ಕಣ್ಗಾವಲು! ಕಸ, ಗುಂಡಿ, ಒತ್ತುವರಿ ಪತ್ತೆಗೆ ಹೊಸ ತಂತ್ರಜ್ಞಾನ
ಜಿಬಿಎ
Image Credit source: x.com/GBA
Edited By:

Updated on: Oct 16, 2026 | 10:40 PM

ಮುಖ್ಯಾಂಶಗಳು

  • ರಸ್ತೆ ಗುಂಡಿ, ಬೀದಿದೀಪ, ಕಸದ ಸಮಸ್ಯೆಗೆ ಎಐ ಮೂಲಕ ಪರಿಹಾರ
  • ಕೊನೆಗೂ ತಂತ್ರಜ್ಞಾನದ ಮೊರೆ ಹೋದ ಜಿಬಿಎ
  • 10 ದಿನ ಡೆಡ್‌ಲೈನ್​​

ಬೆಂಗಳೂರು, ಅಕ್ಟೋಬರ್​​​ 16: ಬೆಂಗಳೂರಿನ ಕಸದ ಸಮಸ್ಯೆಗೆ ಕೊನೆಗೂ ತಂತ್ರಜ್ಞಾನದ ಅಸ್ತ್ರ ಪ್ರಯೋಗವಾಗಿದೆ. ಎಐ ಮೂಲಕ ಕಸ ಪತ್ತೆ ಹಚ್ಚುವ ಕಾರ್ಯಾಚರಣೆ ಶುರು ಮಾಡಿದೆ. ಎಐ ಗುರುತಿಸಿದ ಕಸದ ಸಮಸ್ಯೆಯನ್ನು 10 ದಿನದೊಳಗೆ ಕ್ಲಿಯರ್ ಮಾಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಯುಕ್ತ ಎಂ. ಮಹೇಶ್ವರ ರಾವ್​​ ಮಾರ್ಷಲ್‌ಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಎಐ ಕ್ಯಾಮೆರಾ ಮೂಲಕ ಸಮೀಕ್ಷೆ 

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 311 ಕಿ.ಮೀ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳಿವೆ. ಇದರಲ್ಲಿ 150 ಕಿ.ಮೀ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಎಐ ಕ್ಯಾಮೆರಾ ಅಳವಡಿಸಿದ ವಾಹನದ ಮೂಲಕ ಸಮೀಕ್ಷೆ ನಡೆಸಲಾಗಿದೆ. ಚಿತ್ರಗುಪ್ತ ಅರ್ಬನ್ ಟೆಕ್ನಾಲಜೀಸ್ ಸಹಯೋಗದಲ್ಲಿ ಈ ಸಮೀಕ್ಷೆ ಮಾಡಲಾಗಿದೆ. ರಸ್ತೆಯಲ್ಲಿ ಚಲಿಸುವ ಈ ವಾಹನವೇ ಸ್ವಯಂಚಾಲಿತವಾಗಿ ಬ್ಲಾಕ್ ಸ್ಪಾಟ್, ರಸ್ತೆಗುಂಡಿ, ಫುಟ್‌ಪಾತ್ ಒತ್ತುವರಿ, ಕಟ್ಟಡ ತ್ಯಾಜ್ಯ, ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್, ಬೀದಿದೀಪ ಸಮಸ್ಯೆಯನ್ನು ಗುರುತಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ರಿಲೀಫ್: ಮನೆ ಮುಂದೆ ವಾಹನ ಪಾರ್ಕ್ ಮಾಡಿದ್ದಕ್ಕೆ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ತಡೆ

ಪತ್ತೆಯಾದ ಪ್ರತಿ ಸಮಸ್ಯೆಗೂ ಸ್ವಯಂಚಾಲಿತವಾಗಿ ಟಿಕೆಟ್ ನಂಬರ್​ ಸಿದ್ಧಗೊಳ್ಳುತ್ತದೆ. ಈ ಸಮೀಕ್ಷೆಯಲ್ಲಿ ಒಟ್ಟು 2000 ಟಿಕೆಟ್‌ಗಳು ಕ್ರಿಯೇಟ್ ಆಗಿವೆ. ಅದರಲ್ಲಿ ಸುಮಾರು 1000 ಟಿಕೆಟ್‌ಗಳು ಕೇವಲ ಕಸ ಮತ್ತು ಕಸದ ಬ್ಲಾಕ್ ಸ್ಪಾಟ್‌ಗೆ ಸಂಬಂಧಿಸಿವೆ. ಈ 1000 ಟಿಕೆಟ್‌ಗಳನ್ನು 10 ದಿನದೊಳಗೆ ಕ್ಲೋಸ್ ಮಾಡುವಂತೆ ಆಯುಕ್ತರು ಮಾರ್ಷಲ್‌ಗಳಿಗೆ ಡೆಡ್‌ಲೈನ್ ಕೊಟ್ಟಿದ್ದಾರೆ.

ಅನ್ವೇಷಕ ಹೆಸರಿನ ಮೊಬೈಲ್ ಆ್ಯಪ್ ಅಭಿವೃದ್ಧಿ

ಇನ್ನು ಇದಕ್ಕಾಗಿ ಪಾಲಿಕೆ ‘ಅನ್ವೇಷಕ’ ಹೆಸರಿನ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಮಾರ್ಷಲ್‌ಗಳು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ತಮ್ಮ ವ್ಯಾಪ್ತಿಯ ಸಮಸ್ಯೆಗಳ ವಿವರ ಈ ಆ್ಯಪ್‌ ಡ್ಯಾಶ್‌ಬೋರ್ಡ್‌ನಲ್ಲಿ ಸಿಗಲಿದೆ. ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿ, 50 ಮೀಟರ್ ವ್ಯಾಪ್ತಿಯೊಳಗೆ ಜಿಯೋ-ಟ್ಯಾಗ್ ಫೋಟೋ ಅಪ್‌ಲೋಡ್ ಮಾಡಿದರೆ, ಮಾತ್ರ ಟಿಕೆಟ್ ಕ್ಲೋಸ್ ಆಗುತ್ತೆ.

ಈ ಕುರಿತು ಗುರುವಾರ ಮಾರ್ಷಲ್‌ಗಳಿಗೆ ವಿಶೇಷ ಕಾರ್ಯಾಗಾರ ಕೂಡ ನಡೆಸಲಾಗಿದೆ. ಸಾರ್ವಜನಿಕರು ದೂರು ಕೊಡುವ ಮುನ್ನವೇ ಸಮಸ್ಯೆ ಪತ್ತೆ ಹಚ್ಚುವುದೇ ಈ ಎಐ ಯೋಜನೆಯ ಉದ್ದೇಶ. ಪಾಲಿಕೆ ದಿನನಿತ್ಯ ಸ್ವಚ್ಛತಾ ಕಾರ್ಯ ಮಾಡಿದರೂ ಅದಕ್ಕೆ ದಾಖಲೆ ಇರಲ್ಲ. ಐಎನಿಂದ ಡಿಜಿಟಲ್ ಸಾಕ್ಷ್ಯ ಮತ್ತು ಪಾರದರ್ಶಕತೆ ಬರಲಿದೆ ಅಂತಾ ಆಯುಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಫುಡ್ ಆರ್ಡರ್ ರೀತಿ ಬೆಂಗಳೂರು ರಸ್ತೆ ಗುಂಡಿ ದುರಸ್ತಿ: ಬುಕ್ ಮಾಡಿದ್ರೆ ಸಾಕು ಬರಲಿದೆ ‘ಜೆಟ್ ಪ್ಯಾಚರ್

ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಕಸದ ಕಥೆಗೆ ಎಐ ಮೂಲಕ ಬ್ರೇಕ್ ಹಾಕಲು ದಕ್ಷಿಣ ಪಾಲಿಕೆ ಮುಂದಾಗಿದೆ. 10 ದಿನದ ಡೆಡ್‌ಲೈನ್​ನಲ್ಲಿ ಮಾರ್ಷಲ್‌ಗಳು ಎಷ್ಟು ಬ್ಲಾಕ್ ಸ್ಪಾಟ್ ಕ್ಲಿಯರ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us