ಫುಡ್ ಆರ್ಡರ್ ರೀತಿ ಬೆಂಗಳೂರು ರಸ್ತೆ ಗುಂಡಿ ದುರಸ್ತಿ: ಬುಕ್ ಮಾಡಿದ್ರೆ ಸಾಕು ಬರಲಿದೆ ‘ಜೆಟ್ ಪ್ಯಾಚರ್
ಬ್ರ್ಯಾಂಡ್ ಬೆಂಗಳೂರಿಗೆ ದೊಡ್ಡ ಸವಾಲಾಗಿದ್ದ ರಸ್ತೆ ಗುಂಡಿಗಳ ಸಮಸ್ಯೆಗೆ ಬಗೆಹರಿಸಲು ಜಿಬಿಎ ಬಿಗ್ ಪ್ಲಾನ್ ರೂಪಿಸಿದೆ. ಸ್ವಿಗ್ಗಿ, ಜೊಮ್ಯಾಟೊ ಮಾದರಿಯಲ್ಲೇ ರಸ್ತೆ ಗುಂಡಿ ಮುಚ್ಚಲು ಸ್ಪೆಷಲ್ ಆ್ಯಪ್ ತರಲು ಜಿಬಿಎ ಮುಂದಾಗಿದ್ದು, ನೀವು ಒಂದೇ ಒಂದು ಕಾಲ್ ಅಥವಾ ಮೆಸೇಜ್ ಮಾಡಿದ್ರೆ ಸಾಕು, ನಿಮ್ಮ ಲೊಕೇಶನ್ಗೆ ಓಡೋಡಿ ಬಂದು ರಸ್ತೆ ಗುಂಡಿ ಮುಚ್ಚಲಿದೆ. ಅದು ಹೇಗೆ ಏನು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಅಕ್ಟೋಬರ್ 14): ಆನ್ನಲ್ಲಿ ಆರ್ಡರ್ ಮಾಡಿದರೆ ಸಾಕು ಜೊಮ್ಯಾಟೋ, ಸ್ವಿಗ್ಗಿ, ಜೆಪ್ಟೋ ಕೆಲವೇ ನಿಮಿಷಗಳಲ್ಲಿ ನಾವಿರುವಲ್ಲಿಗೆ ಬಂದು ಸೇವೆ ನೀಡುತ್ತವೆ. ಇದೇ ಮಾದರಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು ಗ್ರೇಟ್ ಬೆಂಗಳೂರು ಮುಂದಾಗಿದೆ. ಇದಕ್ಕೆ ವಿದೇಶ ತಂತ್ರಜ್ಞಾನ ಬಳಕೆಗೆ ಪ್ಲ್ಯಾನ್ ಮಾಡಿದ್ದು, ಜಸ್ಟ್ ಆನ್ಲೈನ್ ಮೂಲಕ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ಹಂಚಿಕೊಂಡರೇ ಸಾಕು ಜಿಬಿಎ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಪಾಟ್ಗೆ ಬಂದು ಗುಂಡಿ ಮುಚ್ಚಲಿದೆ.
ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿ ಸಮಸ್ಯೆ ಹೊಸದೇನಲ್ಲ. ಒಂದು ಮಳೆ ಬಂದ್ರೆ ಸಾಕು ರಸ್ತೆಗಳೆಲ್ಲಾ ಹೊಂಡಮಯವಾಗುತ್ತೆ. ವಾಹನ ಸವಾರರು ಹೈರಾಣಾಗಿದ್ದಾರೆ. ಇದನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿಬಿಎ, ಇದೀಗ ಮಾಸ್ಟರ್ ಪ್ಲಾನ್ ಮಾಡಿದೆ. ಅದುವೇ ಆನ್ಲೈನ್ ಬುಕಿಂಗ್ ಆ್ಯಪ್ ಪ್ಲಾನ್. ಸ್ವಿಗ್ಗಿ, ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿವಂತೆ, ಇನ್ನು ಮುಂದೆ ಗುಂಡಿ ಮುಚ್ಚೋಕೂ ಬುಕ್ ಮಾಡಬಹುದು. ಆನ್ಲೈನ್ ನಲ್ಲಿ ಬುಕ್ ಮಾಡಿದ್ರೆ ಕ್ಷಣಾರ್ಧದಲ್ಲಿ ನಿಮ್ಮ ಸ್ಪಾಟ್ ಗೆ GBA ಟೀಂ ಬಂದು ಗುಂಡಿಯನ್ನು ಮುಚ್ಚಲಿದೆ. ಈ ಬಗ್ಗೆ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದ್ದು, ಜಸ್ಟ್ ಒನ್ ಕಾಲ್ ಇಲ್ಲವೇ ಒನ್ ಮೆಸೇಜ್ ಹಾಕಿದ್ರೆ ಸಾಕು, ತಕ್ಷಣವೇ ಸ್ಪಂದಿಸಿ ನಿಮ್ಮ ಬಳಿ ಟೀಂ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಜಿಬಿಎ ಇ-ಆಸ್ತಿ 2.0 ಸಾಫ್ಟ್ವೇರ್ನಿಂದ ಆಸ್ತಿ ಮಾಲೀಕರಿಗೆ ಸಂಕಷ್ಟ! ಹೆಸರು, ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ನೋಂದಣಿ ತಿರಸ್ಕಾರ
ವಿದೇಶಿ ಮಾದರಿಯ ತಂತ್ರಜ್ಞಾನ ಬಳಕೆ
ನಿಮ್ಮ ದೂರನ್ನ ಆಲಿಸಿ, ನಿಮ್ಮ ಲೊಕೇಶನ್ ಟ್ರ್ಯಾಕ್ ಮಾಡಿ GBA ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ . ಅದಕ್ಕಾಗಿ ಅತ್ಯಾಧುನಿಕ ಜೆಟ್ ಪ್ಯಾಚರ್ ತಂತ್ರಜ್ಞಾನವನ್ನ GBA ಬಳಕೆ ಮಾಡಿಕೊಳ್ಳುತ್ತಿದೆ.ಇಲ್ಲಿವರೆಗೆ ಗುಂಡಿ ಬಿದ್ದರೆ ಇಡೀ ರಸ್ತೆಯನ್ನೇ ಅಗೆದು ಡಾಂಬರು ಹಾಕಲಾಗುತ್ತಿತ್ತು. ಆದ್ರೆ ಜೆಟ್ ಪ್ಯಾಚರ್ ನಲ್ಲಿ ಹಾಗಲ್ಲ. ಎಷ್ಟು ಗುಂಡಿ ಇದೆ ಅಷ್ಟನ್ನೇ ಟಾರ್ಗೆಟ್ ಮಾಡಿ ಮುಚ್ಚಲಾಗುತ್ತೆ. ಇದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ.
ವಿದೇಶಿ ಮಾದರಿಯ ಈ ತಂತ್ರಜ್ಞಾನ ಈಗಾಗಲೇ ಅಮೆರಿಕಾ, ಸ್ವೀಡನ್, ಲಂಡನ್ ನಲ್ಲಿ ಸಕ್ಸಸ್ ಆಗಿದೆ. ಇದೇ ಮಾದರಿಯನ್ನ ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳಲು GBA ಮುಂದಾಗಿದೆ. ಈ ಯೋಜನೆ ಜಾರಿಗೊಳಿಸಲು ಈಗಾಗಲೇ GBA ಎಲ್ಲಾ ಪಾಲಿಕೆಗಳಿಗೂ ಜೆಟ್ ಪ್ಯಾಚರ್ ವಾಹನ ತರಿಸಿಕೊಳ್ಳಲು ಸೂಚನೆ ನೀಡಿದೆ. GBA ವ್ಯಾಪ್ತಿಯ 5 ಪಾಲಿಕೆಗಳಲ್ಲೂ ಜೆಟ್ ಪ್ಯಾಚರ್ ವಾಹನ ಬಂದ ಕೂಡಲೇ ಈ ಪ್ಲಾನ್ ಲಾಂಚ್ ಆಗಲಿದೆ.
ಒಟ್ಟಾರೆ ಬ್ರ್ಯಾಂಡ್ ಬೆಂಗಳೂರಿಗೆ ಕಂಟಕವಾಗಿದ್ದ ಗುಂಡಿ ಸಮಸ್ಯೆಗೆ ಆ್ಯಪ್ ಮೂಲಕ ಪರಿಹಾರ ಸಿಗುವ ನಿರೀಕ್ಷೆ ಇದೆ. ಈ ಪ್ಲಾನ್ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.




