AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ?

ಪ್ರೀತಿಸಿ ಮದುವೆಯಾಗಿದ್ದಾತನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. 18 ತಿಂಗಳ ಮಗುವಿದ್ದರೂ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ವಿಚ್ಚೇದನಕ್ಕೂ ಒತ್ತಡ ಹಾಕುವುದರ ಜೊತೆಗೆ ಬೆದರಿಕೆ ಹಾಕಲಾಗಿತ್ತು. ವರದಕ್ಷಿಣೆ ಮತ್ತು ಹಣಕ್ಕಾಗಿ ಒತ್ತಾಯಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಮೃತ ಮಹಿಳೆಯ ತಂದೆ ಆರೋಪಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ?
ಸಾಂದರ್ಭಿಕ ಚಿತ್ರImage Credit source: shutterstock.com
ಪ್ರಸನ್ನ ಹೆಗಡೆ
|

Updated on: Apr 23, 2026 | 5:37 PM

Share

ಬೆಂಗಳೂರು, ಏಪ್ರಿಲ್​​ 23: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ಭುವನೇಶ್ವರಿ (29) ಮೃತ ವಿವಾಹಿತೆಯಾಗಿದ್ದು, ತಾಯಿ ಮತ್ತು 18 ತಿಂಗಳ ಮಗುವಿನೊಂದಿಗೆ ಅವರು ವಾಸವಿದ್ದರು ಎನ್ನಲಾಗಿದೆ. ನಿರಂತರವಾಗಿ ಕರೆ ಮಾಡಿದರೂ ಭುವನೇಶ್ವರಿ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತೆ ಅನುಮಾನಗೊಂಡು ವಿಷಯವನ್ನು ಅವರ ತಾಯಿಗೆ ತಿಳಿಸಿದ್ದಾರೆ. ಬಳಿಕ ತಾಯಿ ಹಾಗೂ ನೆರೆಹೊರೆಯವರು ಪರಿಶೀಲಿಸಿದಾಗ ಭುವನೇಶ್ವರಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮವಾರವೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಭುವನೇಶ್ವರಿ ತಂದೆ ತಮಿಳುನಾಡಿನ ತಿರುವಾರೂರಿನ ನಿವಾಸಿ ಟಿ. ಅಂಬಳಗನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಮೃತ ಮಹಿಳೆಯ ಪತಿ ಹರೀಶ್ ಕುಮಾರ್, ಅತ್ತೆ ಮತ್ತು ಮಾವನ ಮಗನ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ ಕಳೆದ ಏಳು ತಿಂಗಳಿನಿಂದ ಮಗಳು ಭುವನೇಶ್ವರಿ ಜೊತೆಗೆ ಆಕೆಯ ಪತಿ ಹರಿಶ್​​ ಕುಮಾರ್​​ ವಾಸಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಭುವನೇಶ್ವರಿ ಮತ್ತು ಹರೀಶ್ ವಿವಾಹಕ್ಕೂ ಮೊದಲು ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ 2022ರ ನವೆಂಬರ್ 20ರಂದು ಇವರಿಬ್ಬರ ವಿವಾಹ ನಡೆದಿತ್ತು. ಸುಮಾರು 25 ಲಕ್ಷ ಹಣವನ್ನು ಮದುವೆಗೆ ಖರ್ಚು ಮಾಡಲಾಗಿತ್ತು. ಆದರೆ ಮದುವೆ ಬಳಿಕ ಪತಿ ಮನೆಯಲ್ಲಿ ಭುವನೆಶ್ವರಿ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಒಳಗಾಗಿ ಮನೋವ್ಯಾಧಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ; ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು

2025ರ ಅಕ್ಟೋಬರ್​​ನಲ್ಲಿ ತವರು ಸೇರಿದ್ದ ಭುವನೇಶ್ವರಿಯನ್ನು ಆ ಬಳಿಕ ಪತಿ ಹರೀಶ್​​ ಸಂಪರ್ಕಿಸಿರಲಿಲ್ಲ. ಬದಲಾಗಿ ವಿಚ್ಛೇದನಕ್ಕೆ ಒತ್ತಡ ಹಾಕಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ. ನಂತರ ಭುವನೇಶ್ವರಿ ಜೆ.ಪಿ. ನಗರದ ಫ್ಲಾಟ್‌ನಲ್ಲಿ ವಾಸಿಸಲು ಆರಂಭಿಸಿದ್ದರು. ಮಗುವಿಗೆ ಅನಾರೋಗ್ಯ ಉಂಟಾದಾಗಲೂ ನೋಡಲು ಬಂದಿರಲಿಲ್ಲ. ಅಲ್ಲದೆ, 2026ರ ಏಪ್ರಿಲ್ 8ರಂದು ಹರೀಶ್ ತಂದೆ ನಿಧನರಾದಾಗ ಭುವನೇಶ್ವರಿ ಮತ್ತು ಅವರ ಕುಟುಂಬ ಅಂತ್ಯಕ್ರಿಯೆಗೆ ಹಾಜರಾಗಲು ಹೋದಾಗಲೂ ಆರೋಪಿಗಳು ಅವರನ್ನು ತಡೆದಿದ್ದರು. ಮದುವೆಯ ಸಮಯದಲ್ಲಿ ಚಿನ್ನಾಭರಣ ಮತ್ತು ಹಣವನ್ನು ವರದಕ್ಷಿಣೆಯಾಗಿ ನೀಡಿದರೂ ಹರೀಶ್, ಅವರ ತಾಯಿ ಹಾಗೂ ಸಹೋದರರು ತಿಂಗಳಿಗೆ 20,000ರಿಂದ 30,000 ಹಣವನ್ನು ಸಂಬಳದಿಂದ ನೀಡಲು ಮತ್ತು ಪೋಷಕರಿಂದ ದುಡ್ಡು ತರುವಂತೆ ಭುವನೇಶ್ವರಿ ಅವರನ್ನು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ