ಬೆಂಗಳೂರು: ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ

ಜಯನಗರದ ಹೋಲಿ ಕ್ರಿಸ್ಟ್ ಶಾಲೆಯ ಹಿಂದಿ ವಿಷಯದ ಶಿಕ್ಷಕಿ ಅಜ್ಮತ್​​ ವಿದ್ಯಾರ್ಥಿ ಅಶ್ವಿನ್​ಗೆ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿಯ ಹಲ್ಲು ಮುರಿದಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ವಿದ್ಯಾರ್ಥಿ ಅಶ್ವಿನ್ ತಂದೆ​ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ
ವಿದ್ಯಾರ್ಥಿ ಅಶ್ವಿನ್​, ಶಿಕ್ಷಕಿ ಅಜ್ಮತ್​
Follow us
|

Updated on:Nov 08, 2024 | 12:07 PM

ಬೆಂಗಳೂರು, ನವೆಂಬರ್​ 08: ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿ (Teacher) ವಿದ್ಯಾರ್ಥಿಯ (Student) ಹಲ್ಲು ಮುರಿಯುವ ಹಾಗೆ ಹೊಡೆದಿದ್ದಾರೆ. ಜಯನಗರದ (Jayanagar) ಹೋಲಿ ಕ್ರಿಸ್ಟ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಅಶ್ವಿನ್ ಎಂಬ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದನು. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಅಶ್ವಿನ್ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಅಶ್ವಿನ್​ನ ಹಲ್ಲು ಮುರಿದಿದೆ.

ವಿದ್ಯಾರ್ಥಿ ಅಶ್ವಿನ್​ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ವಿದ್ಯಾರ್ಥಿ ಅಶ್ವಿನ್ ತಂದೆ​ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕಿ ಅಜ್ಮತ್​ ವಿರುದ್ಧ ಜಯನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶಿಕ್ಷಕಿ ಅಜ್ಮತ್​ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅಶ್ವಿನ್​ ಪೋಷಕರು ಶಿಕ್ಷಕಿ ಅಜ್ಮತ್​ಗೆ ನೋಟಿಸ್​ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯನ್ನು ಮನೆ ಮಾಡಿಕೊಂಡು 5 ವರ್ಷದಿಂದ ವಾಸವಾಗಿರುವ ಕುಟುಂಬ

ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ವಿದ್ಯಾರ್ಥಿಯ ಪೋಷಕರು ಶಾಲೆಗೆ ನುಗ್ಗಿ, ಶಿಕ್ಷಕಿಯ ಜಾತಿ ಯಾವುದು ಅಂತ ಪ್ರಶ್ನೆ ಮಾಡಿದ್ದಾರೆ. ಮಗುವಿಗೆ ಏನಾಗಿದೆ ಅಂತ ಕೇಳದೆ, ನಿಮ್ಮ ಜಾತಿ ಯಾವುದು ಅಂತ ಕೇಳಿ ಗಲಾಟೆ ಮಾಡಿದ್ದಾರೆ ಎಂದು ಶಿಕ್ಷಕಿ ಅಜ್ಮತ್​​ ಹೇಳಿದರು.

ನಾನು ಕ್ಲಾಸ್ ಮುಗಸುಕೊಂಡು ಬಂದೆ. ಮಧ್ಯಾಹ್ನ ಊಟ ಮುಗಸಿಕೊಂಡು ಹೋಗಾವಗ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳೇ ಹೊಡೆದಾಡಿಕೊಂಡಿದ್ದಾರೆ. ಈ ವೇಳೆಯೇ ಹಲ್ಲು ಮುರಿದು ಹೋಗಿದೆ. ವಿದ್ಯಾರ್ಥಿಗೆ ನಾನು ಏನು ಮಾಡಿಲ್ಲ. ಗಲಾಟೆ ನಿಯಂತ್ರಿಸಲು ಕೈಗೆ ಒಂದು ಏಟು ಕೊಟ್ಟಿದ್ದೆ ಅಷ್ಟೇ.  ವಿದ್ಯಾರ್ಥಿ ಮುಖಕ್ಕೆ ಪಟಾಕಿ ಗಾಯ ಕೂಡಾ ಆಗಿತ್ತು. ಮಕ್ಕಳು-ಮಕ್ಕಳು ಹೊಡೆದಾಡಿಕೊಂಡು ನನ್ನ ಮೇಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ನನ್ನ ಮೇಲೆ ಗಮ್ ಹಾಕಿದ್ದಾರೆ ಎಂದು ಶಿಕ್ಷಕಿ ಅಜ್ಮತ್​ ತಳಿಸಿದರು.

ಪೋಷಕರು ಶಾಲೆಗೆ ಬರುತ್ತಿದ್ದಂತೆ ನೀನು ಯಾವ ಜಾತಿ ಶಿಕಕ್ಷಕಿ ಅಂತ ಕೇಳಿದ್ದಾರೆ. ನೀನು ಹಿಂದೂನಾ  ಅಥವಾ ಮುಸ್ಲಿಂ ಶಿಕ್ಷಕಿಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ನಾನು ಪೋಷಕರ ಕಾಲು ಹಿಡದು ಕೇಳಿಕೊಂಡಿದ್ದೇನೆ. ನನ್ನ ಕಡೆಯಿಂದ ಯಾವುದೇ ತಪ್ಪಿಲ್ಲ. ಹಿಂದೂ ಮಕ್ಕಳಿಗೆ ನಾವು ಯಾವುದೇ ಟಾರ್ಗೇಟ್ ಮಾಡಿಲ್ಲ ಎಂದು ಶಿಕ್ಷಕಿ ಕಣ್ಣೀರು ಹಾಕ್ತೀದರು.

ಈ ಹಿಂದೆ ಅಶ್ವಿನ್​ನ ತಂಗಿಗೂ ಕೂಡ ಹೊಡೆದಿದ್ದು, ಕೈ ಊದಿ ಕೊಂಡಿತ್ತು. ಆಗ, ಶಾಲಾ ಆಡಳಿತ ಮಂಡಳಿ ಕ್ಷಮಾಪಣೆ ಪತ್ರ ಬರೆದು ಕೊಟ್ಟಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:55 am, Fri, 8 November 24

‘ನವಗ್ರಹ’ ರಿ ರೀಲೀಸ್: ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
‘ನವಗ್ರಹ’ ರಿ ರೀಲೀಸ್: ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ವಿಶೇಷ ಸ್ಥಾನಮಾನ ನಿರ್ಣಯ ಕುರಿತು ಮೂರನೇ ದಿನವೂ ವಿಧಾನಸಭೆಯಲ್ಲಿ ಗದ್ದಲ
ವಿಶೇಷ ಸ್ಥಾನಮಾನ ನಿರ್ಣಯ ಕುರಿತು ಮೂರನೇ ದಿನವೂ ವಿಧಾನಸಭೆಯಲ್ಲಿ ಗದ್ದಲ
300 ರೂ. ಆಮಿಷವೊಡ್ಡಿ ಸಿದ್ದು ಸಮಾವೇಶಕ್ಕೆ ಜನ ಕರೆಸಿದ ಆರೋಪ: ವಿಡಿಯೋ ವೈರಲ್
300 ರೂ. ಆಮಿಷವೊಡ್ಡಿ ಸಿದ್ದು ಸಮಾವೇಶಕ್ಕೆ ಜನ ಕರೆಸಿದ ಆರೋಪ: ವಿಡಿಯೋ ವೈರಲ್
ಮಾಡರ್ನ್ ಯುಗದ ಕಳ್ಳರಿಗೆ ಸಿಸಿಟಿವಿಗಳ ವಿಶ್ವಾಸರ್ಹತೆ ಮೇಲೆ ನಂಬಿಕೆ ಇಲ್ಲ!
ಮಾಡರ್ನ್ ಯುಗದ ಕಳ್ಳರಿಗೆ ಸಿಸಿಟಿವಿಗಳ ವಿಶ್ವಾಸರ್ಹತೆ ಮೇಲೆ ನಂಬಿಕೆ ಇಲ್ಲ!
ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ