Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಟ್ರಾಫಿಕ್​​ ರೂಲ್ಸ್​ ಬ್ರೆಕ್​ ಮಾಡಿದವರ ಮನೆಗೆ ನೋಟಿಸ್​ ಜೊತೆಗೆ ಬರಲಿದೆ ಕ್ಯೂಆರ್​​ ಕೋಡ್

ಸಂಚಾರಿ ನಿಯಮಗಳನ್ನು ಪಾಲಿಸಬೇಕಾದದ್ದು ಸಾರ್ವಜನಿಕರ ಆದ್ಯ ಕರ್ತವ್ಯ. ಟ್ರಾಫಿಕ್​ ರೂಲ್ಸ್​ಗಳನ್ನು ಬ್ರೇಕ್​ ಮಾಡಿ ಬೇಕಾ ಬಿಟ್ಟಿಯಾಗಿ ರಸ್ತೆ ಮೇಲೆ ಸಂಚರಿಸಿದರೆ ವಾಹನದ ಮೇಲೆ ಕೇಸ್​ ಬೀಳುತ್ತದೆ, ದಂಡ ಬೀಳುವುದು ಪಕ್ಕಾ. ದಂಡ ಬಿದ್ದರೂ ಕಟ್ಟದವರಿಗೆ ಮತ್ತು ತಾನು ಸಂಚಾರಿ ನಿಯಮ ಉಲ್ಲಂಘಿಸಿಲ್ಲ ಎಂದು ವಾದಿಸುವವರಿಗೆ ಬೆಂಗಳೂರು ಟ್ರಾಫಿಕ್​ ಪೊಲೀಸರು ಸಾಕ್ಷಿ ಸಮೇತ ಉತ್ತರ ನೀಡಲಿದ್ದಾರೆ.

ಬೆಂಗಳೂರು: ಟ್ರಾಫಿಕ್​​ ರೂಲ್ಸ್​ ಬ್ರೆಕ್​ ಮಾಡಿದವರ ಮನೆಗೆ ನೋಟಿಸ್​ ಜೊತೆಗೆ ಬರಲಿದೆ ಕ್ಯೂಆರ್​​ ಕೋಡ್
ಸಾಂದರ್ಭಿಕ ಚಿತ್ರ
Follow us
Jagadisha B
| Updated By: ವಿವೇಕ ಬಿರಾದಾರ

Updated on: Mar 01, 2024 | 12:29 PM

ಬೆಂಗಳೂರು, ಮಾರ್ಚ 01: ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಟ್ರಾಫಿಕ್​ ರೂಲ್ಸ್​​ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ (Traffic Rules Break) ಮಾಡುತ್ತಲೇ ಇರುತ್ತಾರೆ. ಆದರೆ ಇನ್ಮುಂದೆ ಇದು ನಡೆಯಲ್ಲ. ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ನೋಟಿಸ್​​ ಹೋಗುತ್ತಿತ್ತು. ನೋಟಿಸ್​ ಬಂದರೂ ಹಲವರು ದಂಡ ಕಟ್ಟದೆ ತಕಾರಾರು ತೆಗೆಯುತ್ತಿದ್ದರು. ಇದರಿಂದ ಟ್ರಾಫಿಕ್​ ಪೊಲೀಸರು (Traffic Police) ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹೈ ಟೆಕ್ನಾಲಜಿ ಬಳಸಿ ದಂಡ ವಸೂಲಿಗೆ ಮುಂದಾಗಿದ್ದಾರೆ.

ಹೌದು ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ. ಈ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್​​ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್​ ಸಹ ನಿಮ್ಮ ಮೊಬೈಲ್​ಗೆ ಬರಲಿದೆ.

ನಿಯಮ ಉಲ್ಲಂಘನೆಯ ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ನೀವು ಸಂಚಾರಿ ಪೊಲೀಸ್​ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಸಂಚಾರಿ ಪೊಲೀಸ್​ ಇಲಾಖೆ ವೆಬ್​ ಸೈಟ್ Btp.gov.in.

ದೂರು/ ಸಲಹೆ ನೀಡುವುದು ಹೇಗೆ?

  1. Btp.gov.in ವೆಬ್​ಸೈಟ್​ಗೆ ಭೇಟಿ ನೀಡಿದ ಬಳಿಕ ಮೇಲಗಡೆ ಬಲ ಭಾಗದಲ್ಲಿ Complain& Suggestions ಅಂತ ಕಾಣುತ್ತದೆ.
  2. Complain& Suggestions ಮೇಲೆ ಕ್ಲೀಕ್​ ಮಾಡಿದ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
  3. ಅಲ್ಲಿ ಯಾವ ಟ್ರಾಫಿಕ್​ ಸಿಗ್ನಲ್​ ದೂರು ಅಂತ ನಮೂದಿಸಬೇಕು. ಬಳಿಕ ಗಾಡಿ ಸಂಖ್ಯೆ, ಏನು ಸಮಸ್ಯೆ ​ಅಂತ ಬರಿಬೇಕು. ಬಳಿಕ ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಇಮೇಲ್​ ಐಡಿ, ದೂರು ಬರೆದು ಸಬ್​ಮಿಟ್​ ಕೊಟ್ಟರೆ, ನಿಮ್ಮ ದೂರು ಸಂಚಾರಿ ಪೊಲೀಸರಿಗೆ ತಲಪುತ್ತದೆ.

ಇದನ್ನೂ ಓದಿ: ಬರೋಬ್ಬರಿ 300 ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ, 3 ಲಕ್ಷ ರೂ. ದಂಡ

ನಿಯಮ ಉಲ್ಲಂಘಿಸಿದ ಸ್ಕೂಟಿ ಪೆಪ್ ಮೇಲೆ 3.22 ಲಕ್ಷ ದಂಡ

ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್​ ಮೇಲೆ 2023ರ ಡಿಸೆಂಬರ್​​ನಲ್ಲಿ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿತ್ತು. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್​ಗಳು ದಾಖಲಾಗಿದ್ದವು. ಸ್ಕೂಟಿ ಬೆಲೆಯೇ 70 ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. KA 04 KF9072 ನಂಬರ್​ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿ ನಿಯಮ ಉಲ್ಲಂಘಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ