ಬೆಂಗಳೂರಿನಲ್ಲೊಂದು ಭಯಾನಕ ಘಟನೆ: ಕ್ಯಾಬ್ಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ
ಬೆಂಗಳೂರಿನಲ್ಲಿ ಮಧ್ಯರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕರ ನೆರವಿನಿಂದ ಸದ್ಯ ಯುವತಿಯ ರಕ್ಷಣೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಘಟನೆಯಿಂದ ನಗರದ ಮಹಿಳೆಯರ ಭದ್ರತಾ ಕುರಿತು ಕಳವಳ ವ್ಯಕ್ತವಾಗಿದೆ.

ಬೆಂಗಳೂರು, ಜನವರಿ 30: ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರಿಗೆ, ಯುವತಿಯರಿಗೆ (girls) ಎಷ್ಟು ಸೇಫ್ ಎಂಬ ಪ್ರಶ್ನೆ ಆಗಾಗ ಸಾರ್ವಜನಿಕರಿಗೆ ಉದ್ಭವಿಸುತ್ತಲ್ಲೇ ಇರುತ್ತೆ. ಲೈಂಗಿಕ ದೌರ್ಜನ್ಯ, ಕಿರುಕುಳ ವೈವಾಹಿಕ ಹಿಂಸಾಚಾರ ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಈ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಇದೀಗ ನಗರದಲ್ಲಿ ಮತ್ತೊಂದು ಭಯಾನಕ ಕೃತ್ಯ ನಡೆದಿದೆ. ಕ್ಯಾಬ್‌ನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವಂತಹ ಘಟನೆ ನಡೆದಿದೆ.
ಸೋಮವಾರ ಬೆಳ್ಳಂಬೆಳಗ್ಗೆ ಪೂರ್ವ ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಬುಕ್ ಮಾಡಿದ್ದ ಕ್ಯಾಬ್ಗೆ ಇಬ್ಬರು ವ್ಯಕ್ತಿಗಳು ಬಲವಂತವಾಗಿ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವಂತಹ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಯುವತಿ ಆರೋಪದ ಮೇಲೆ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಕಮ್ಮನಹಳ್ಳಿಯ ನಿವಾಸಿಯಾಗಿರುವ ಯುವತಿ ದೂರಿನ ಪ್ರಕಾರ, ಮಧ್ಯರಾತ್ರಿ 2 ಗಂಟೆ ನಡುವೆ ಘಟನೆ ನಡೆದಿದೆ. ವೈಟ್‌ಫೀಲ್ಡ್‌ನಿಂದ ಸ್ನೇಹಿತನನ್ನು ತನ್ನ ಮನೆಗೆ ಕರೆದುಕೊಂಡು ಬರಲು ಹೊರಟಿದ್ದು, ಇದಕ್ಕಾಗಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್ ಬಂದ ಕೂಡಲೇ ಯುವತಿ ಕಾರು ಹತ್ತಿ ಕುಳಿತುಕೊಳ್ಳುವಷ್ಟರಲ್ಲಿ ಇಬ್ಬರು ಅಪರಿಚಿತರು ಕಾರು ಹತ್ತಿದ್ದಾರೆ. ಇತ್ತ ಚಾಲಕನಿಗೂ ಅವರು ಪರಿಚಯವಿಲ್ಲದ್ದರಿಂದ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತನ್ನ ಹಾರಾಟ ಶುರು ಮಾಡಿದ ಗರುಡ ಗ್ಯಾಂಗ್: ಉದ್ಯಮಿಗಳೇ ಇವರ ಟಾರ್ಗೆಟ್
ಗಾಬರಿಗೊಂಡ ಯುವತಿ ಕಾರಿನಿಂದ ಇಳಿದು ಓಡಿಹೋಗಲು ಪ್ರಯತ್ನಿಸಿದ್ದಾಳೆ. ಯುವತಿ ಕಾರಿನಿಂದ ಇಳಿದು ತನ್ನ ಮನೆಯತ್ತ ಓಡುತ್ತಿದ್ದಂತೆ ಇಬ್ಬರು ಅಪರಿಚಿತರ ಪೈಕಿ ಓರ್ವ ಅವಳ ಹಿಂದೆ ಓಡಿಹೋಗಿ ಕುತ್ತಿಗೆ ಹಿಡಿದು ಬೀಳಿಸಿದರೆ, ಮತ್ತೊಬ್ಬ ಬಟ್ಟೆಗೆ ಕೈ ಹಾಕಿದ್ದ. ಅಷ್ಟರಲ್ಲಿ ಯುವತಿ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದು, ಸಾರ್ವಜನಿಕರು ನೆರವಿಗೆ ಬರುವಷ್ಟರಲ್ಲಿ ಇಬ್ಬರು ಅಪರಿಚಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಪೊಲೀಸ್ ಅಧಿಕಾರಿ ಹೇಳಿದ್ದೇನು?
ಸದ್ಯ ಯುವತಿ ದೂರಿನ ಮೇರೆಗೆ ಪೊಲೀಸರು ಬಿಎನ್ಎಸ್ ಸೆಕ್ಷನ್ 74 (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ದೂರಿನ ಪ್ರಕಾರ ಅಪರಿಚಿತರು 20 ಅಥವಾ 30 ರ ವಯಸ್ಸಿವರಾಗಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಆದ್ದರಿಂದ ನಾವು ಸುತ್ತಮುತ್ತಲಿನ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.