ಸದನದಲ್ಲಿ ವಕ್ಫ್ ಬೋರ್ಡ್ ವರದಿ ಮಂಡಿಸಕ್ಕೆ ಬಿಜೆಪಿಯವರಿಗೆ ಡ್ಯಾಷ್ ಇಲ್ಲ ಎಂದು ಏಕವಚನದಲ್ಲೇ ಜಾಡಿಸಿದ ಸಿಎಂ ಇಬ್ರಾಹಿಂ!
ಯಾರು ಯಾರ ಮೇಲೆ ಬೇಕಾದರೂ ದಾಳಿ ಮಾಡಕೊಳ್ಳಲಿ. ಬಜರಂಗದಳ, RSS, ಶ್ರೀರಾಮಸೇನೆ ಅವರೆಲ್ಲ ಒಂದೇ ಗುಂಪು. ನಮಗೆ ಬೇರೆ ಯಾರೂ ಇಲ್ಲ, ನಮಗೆ ಜನರ ಆಶೀರ್ವಾದ ಅಷ್ಟೇ.
ಬೆಂಗಳೂರು: ವಕ್ಫ್ ಬೋರ್ಡ್ ಬಗ್ಗೆ ಮೂರು ವರ್ಷ ರಿಪೋರ್ಟ್ ಇಟ್ಕೊಂಡು ಹುಲಿ ಬಂತು ಹುಲಿ ಅಂತಾ ಹೇಳ್ತಾರೆ. ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ (ಡ್ಯಾಷ್) ಇಲ್ಲ ಎಂದು ಏಕ ವಚನದಲ್ಲೇ ಜೆ.ಡಿ.ಎಸ್ ರಾಜ್ಯದ್ಯಕ್ಷ ಸಿಎಂ ಇಬ್ರಾಹಿಂ ಜಾಡಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಿ ನಿಮ್ಮ ಜೇಬಿಗೆ ಕೈ ಹಾಕಿದ್ರೆ ನೀವು ಬೇರೆಯವರ ಜೇಬಿಗೆ ಕೈಹಾಕ್ತೀರಾ ಎಂದು ಪ್ರಶ್ನಿಸಿದರು. IMA, ಅಮಾನತ್ ಬ್ಯಾಂಕ್, ಸಹಕಾರ ಸಂಘದ ಹಗರಣಗಳ ವರದಿ ಏನಾಯ್ತು. ಜನತಾ ದಳ ಸರ್ಕಾರಕ್ಕೆ ಬಂದಾಗ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳನ್ನ ಜೈಲಿಗೆ ಕಳಿಸ್ತೇವೆ. ನಿಮಗೆ ಧೈರ್ಯ ಇದ್ರೆ ಎಲ್ಲಾ ಹಗರಣಗಳನ್ನ ಸಿಬಿಐಗೆ ಕೊಡಿ. ನೋಡ್ತೀನಿ ಮಾಡ್ತೀನಿ ಅಂತಾ ಯಾಕೆ ಹೇಳ್ತಾ ಇದ್ದೀರ. ಇನ್ನೂ NIA ದಾಳಿ ವಿಚಾರವಾಗಿ ಮಾತನಾಡಿದ್ದು, ಯಾರು ಯಾರ ಮೇಲೆ ಬೇಕಾದರೂ ದಾಳಿ ಮಾಡಕೊಳ್ಳಲಿ.
ಬಜರಂಗದಳ, RSS, ಶ್ರೀರಾಮಸೇನೆ ಅವರೆಲ್ಲ ಒಂದೇ ಗುಂಪು. ನಮಗೆ ಬೇರೆ ಯಾರೂ ಇಲ್ಲ, ನಮಗೆ ಜನರ ಆಶೀರ್ವಾದ ಅಷ್ಟೇ. ನೀವೆಲ್ಲ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಶ್ರೀರಾಮಸೇನೆ, ಆರ್‌ಎಸ್‌ಎಸ್, ಭಜರಂಗದಳ PFI ಎಲ್ಲಾ ಒಂದೇ ತಾಯಿ ಮಕ್ಕಳು. ನಮಗೆ ಜನತಾದಳ ಒಂದೆ. ನಮ್ಮ ತಾಯಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಗೃಹಸಚಿವ ಆರಗ ಜ್ಞಾನೇಂದ್ರ:
ಮಾಹಿತಿ ಆಧಾರದ ಮೇಲೆ NIAಯವರು ದಾಳಿ ಮಾಡಿದ್ದಾರೆ. ಅದನ್ನ ತಡೆದು ಪ್ರತಿಭಟನೆ ಮಾಡುತ್ತಾರೆ ಅಂದರೆ ಏನರ್ಥ? ಇಂಥ ದುಷ್ಟ ಶಕ್ತಿಗಳಿಗೆ ಬೆಂಬಲ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. NIA ದಾಳಿಯಲ್ಲಿ ಯಾವ ರಾಜಕೀಯ ಇಲ್ಲ. PFI ಸಂಘಟನೆ ಏನೇನು ಕೃತ್ಯ ಮಾಡುತ್ತಿದೆ ಮಾಹಿತಿ ಇದೆ. ಕಾಂಗ್ರೆಸ್ ಇಂಥ ದುಷ್ಟ ಶಕ್ತಿಯನ್ನ ಬೆಳೆಸಿದ್ದರಿಂದ ಪ್ರಾಣಹಾನಿಯಾಗಿದೆ. ವೋಟ್ ಬ್ಯಾಂಕ್ ರಾಜಕಾರಣದಿಂದ ಪ್ರಾಣಹಾನಿ ಆಗುತ್ತಿವೆ ಎಂದು ಕಾಂಗ್ರೆಸ್ ವಿರುದ್ಧ ಗೃಹಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ರು.
PFI, SDPI ಬ್ಯಾನ್ ಮಾಡಲು ಸಮಯ ಬರಬೇಕು:
PFI, SDPI ಬ್ಯಾನ್ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೆ. ಸಂಘಟನೆಗಳನ್ನ ಬ್ಯಾನ್ ಮಾಡಲು ಸಮಯ ಬರಬೇಕು. ಶಂಕಿತ ಉಗ್ರರನ್ನ ಬಂಧಿಸಿದ ಪೊಲೀಸರಿಗೆ ಅಭಿನಂದನೆ. ಧರ್ಮ ನೋಡಿ ಪೊಲೀಸರು ಕಾರ್ಯಚರಣೆ ಮಾಡಲ್ಲ ಎಂದು ಶಿವಮೊಗ್ಗ ಪೊಲೀಸರಿಗೆ ಗೃಹಸಚಿವ ಅರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:45 pm, Thu, 22 September 22