ವಿಧಾನಪರಿಷತ್​ನಲ್ಲಿ ಪೇ ಸಿಎಂ ಪೋಸ್ಟರ್ ಗದ್ದಲ: ಬಿಜೆಪಿಯಿಂದಲೂ ಪೋಸ್ಟರ್ ಪ್ರದರ್ಶನ, ಕುರ್ಚಿ ಮೇಲೆ ಹತ್ತಿ ಆಕ್ರೋಶ ಹೊರ ಹಾಕಿದ ಪ್ರಕಾಶ್ ರಾಥೋಡ್​

ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ’ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಷತ್​ನಲ್ಲಿ ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದೆ.

ವಿಧಾನಪರಿಷತ್​ನಲ್ಲಿ ಪೇ ಸಿಎಂ ಪೋಸ್ಟರ್ ಗದ್ದಲ: ಬಿಜೆಪಿಯಿಂದಲೂ ಪೋಸ್ಟರ್ ಪ್ರದರ್ಶನ, ಕುರ್ಚಿ ಮೇಲೆ ಹತ್ತಿ ಆಕ್ರೋಶ ಹೊರ ಹಾಕಿದ ಪ್ರಕಾಶ್ ರಾಥೋಡ್​
ವಿಧಾನಪರಿಷತ್​ನಲ್ಲಿ ಪೇ ಸಿಎಂ ಪೋಸ್ಟರ್ ಗದ್ದಲ
Follow us
TV9 Web
| Updated By: ಆಯೇಷಾ ಬಾನು

Updated on:Sep 22, 2022 | 2:02 PM

ಬೆಂಗಳೂರು: ಇಂದು ವಿಧಾನಪರಿಷತ್​ನಲ್ಲಿ ಪೇ ಸಿಎಂ ಪೋಸ್ಟರ್ ವಿಚಾರ ಪ್ರತಿಧ್ವನಿಸಿದ್ದು ಗದ್ದಲ, ಕೋಲಾಹಲ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ’ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಷತ್​ನಲ್ಲಿ ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದ್ದು ಗದ್ದಲದ ನಡುವೆಯೇ ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್​ ಪ್ರದರ್ಶನ ಮಾಡಿದ್ರು.

ನಿನ್ನೆ ಸದನದಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ಕದನ ನಡೆದಿತ್ತು. ಇದಾದ ಬಳಿಕ ರಾತ್ರಿ ಮಲಗಿ ಬೆಳಗೇಳುವಷ್ಟರಲ್ಲಿ ನಗರದ ರಸ್ತೆ, ಫ್ಲೈಓವರ್, ಗೋಡೆಗಳ ಮೇಲೆ ಸಿಎಂ ಬೊಮ್ಮಾಯಿ ಭಾವಚಿತ್ರವಿರೋ ಪೇ ಸಿಎಂ ಅನ್ನೋ ಪೋಸ್ಟರ್​​ಗಳನ್ನ ಅಂಟಿಸಲಾಗಿತ್ತು. ಪೇಸಿಎಂ ಕ್ಯೂ ಆರ್​ ಕೋಡ್ ಸ್ಕ್ಯಾನ್ ಮಾಡಿದ್ರೆ 40 ಪರ್ಸೆಂಟ್ ಸರ್ಕಾರ ಅನ್ನೋ ವೆಬ್​ಸೈಟ್ ಓಪನ್ ಆಗುತ್ತೆ. ಕೊರೊನಾ ಸ್ಕ್ಯಾಮ್, ರೋಡ್ ಸ್ಕ್ಯಾಮ್, ಬಿಟ್​ಕಾಯಿನ್ ಸ್ಕ್ಯಾಮ್ ಹೀಗೆ ಹಗರಣಗಳ ಆರೋಪದ ಪಟ್ಟಿ ಬಿಚ್ಚಿಕೊಳ್ಳುತ್ತೆ. ಸದ್ಯ ಈ ಘಟನೆ ಸಂಬಂಧ ಇಂದು ವಿಧಾನಪರಿಷತ್​ನಲ್ಲಿ ಮತ್ತೆ ಕಾಂಗ್ರೆಸ್ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದೆ. ಮಧ್ಯರಾತ್ರಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಕಾರ್ಯಕರ್ತರು ಟೆರೆರಿಸ್ಟ್ ಗಳಾ? 40%, 100% ಎಲ್ಲಾ ವಿಚಾರಗಳು ಚರ್ಚೆಯಾಗಲಿ ಎಂದು ಹರಿಪ್ರಸಾದ್ ಆಗ್ರಹಿಸಿದರು. ಇದನ್ನೂ ಓದಿ: ಆಸ್ಕರ್​​ಗೆ ಪ್ರವೇಶ ಪಡೆದ ಚೆಲ್ಲೋ ಶೋ, ಗುಜರಾತಿ ಚಿತ್ರದ ಮುಂದೆ ಆರ್​​ಆರ್​ಆರ್ ಸೋತಿದ್ದೇಕೆ ಎಂಬುದಕ್ಕೆ ರಾಜಕೀಯ ಕಾರಣ ನೀಡಿದ ತೆಲಂಗಾಣ ಸಚಿವ

ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಆಗಿದೆ. ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್ ಹಿಡಿದು ಪ್ರದರ್ಶಿಸಿದ್ದಾರೆ. ಭ್ರಷ್ಟ ಕಾಂಗ್ರೆಸ್​​ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಈ ಗದ್ದಲದ ನಡುವೆಯೇ ವಿಧೇಯಕ ಮಂಡಿಸಲಾಗಿದ್ದು ಇದಕ್ಕೆ ತೀವ್ರ ಆಕ್ರೋಶ ಹೊರ ಹಾಕಲಾಗಿದೆ. ಇನ್ನು ಹೌಸ್​​ ಆರ್ಡರ್​ನಲ್ಲಿ ಇಲ್ಲ ಎಂದು ಜೆಡಿಎಸ್ ಸದಸ್ಯರು ಘೋಷಣೆ ಕೂಗಿದ್ದಾರೆ. ಗದ್ದಲದ ನಡುವೆಯೇ ಸಭಾಪತಿ ಪ್ರಶ್ನೋತ್ತರ ಮುಂದುವರಿಸಿದ್ರು. ಪ್ರಶ್ನೋತ್ತರ ಮುಗಿಸಿ ಕಾಗದ ಪತ್ರಗಳನ್ನು ಮುಂದಿಟ್ರು. ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಭ್ರಷ್ಟ ಕಾಂಗ್ರೆಸ್​​ಗೆ ಧಿಕ್ಕಾರ ಎಂದು ಘೋಷಣೆ ಕೂಗುದ್ರು. ಆಗ ಗದ್ದಲ ಮತ್ತಷ್ಟು ಹೆಚ್ಚಾಗಿದ್ದು ಈ ವೇಳೆ ಸಭಾಪತಿ ಪೀಠದ ರಕ್ಷಣೆಗೆ ಮಾರ್ಷಲ್​ಗಳು ಧಾವಿಸಿದ್ದು ತೀವ್ರ ಗದ್ದಲ ಹಿನ್ನೆಲೆ ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡಲಾಗಿದೆ.

ಆದ್ರೆ ಪರಿಷತ್​ ಕಲಾಪ ಮುಂದೂಡಿದರೂ ಸದಸ್ಯರಿಂದ ಗದ್ದಲ ಮಾತ್ರ ನಿಂತಿಲ್ಲ. ಸಭಾಪತಿ ಪೀಠಕ್ಕೆ ಪೋಸ್ಟರ್ ಹಿಡಿದು ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಿದ್ದಾರೆ. ಕಾಂಗ್ರೆಸ್​ನ ಪ್ರಕಾಶ್ ರಾಥೋಡ್​ ಕುರ್ಚಿ ಮೇಲೆ ಹತ್ತಿ ನಿಂತಿದ್ದಾರೆ. ಬಿ.ಕೆ.ಹರಿಪ್ರಸಾದ್​ ಸಭಾಪತಿ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:02 pm, Thu, 22 September 22