ಡೆಡ್ಲೈನ್ ಮುಗಿದ್ರೂ ಬಗೆಹರೆಯದ ರಸ್ತೆ ಗುಂಡಿ: ಜೇಬು ತುಂಬಿಸಿಕೊಂಡ್ರಾ ಎಂದ ಬಿಜೆಪಿ ಎಂಪಿ
ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ‘ಟಿವಿ9’ ನಿರಂತರ ವರದಿ ಬೆನ್ನಲ್ಲೇ ರಸ್ತೆಗುಂಡಿಗಳನ್ನ ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ಲೈನ್ ಅಂತ್ಯವಾಗಿದೆ. ಪಾಲಿಕೆ ಅಧಿಕಾರಿಗಳು ಕೂಡ ಗುಂಡಿ ಮುಚ್ಚುವ ಕೆಲಸಕ್ಕೆ ವೇಗ ನೀಡಿದ್ದಾರೆ. ಭಾನುವಾರವೂ ಫೀಲ್ಡ್ಗಿಳಿದ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಮೂಲಕ ರಸ್ತೆಗುಂಡಿಗಳಿಗೆ ತೇಪೆ ಹಚ್ಚಿಸಿದ್ದಾರೆ. ಆದರೂ ಸಹ ಕೆಲ ಗಡೆಗಳಲ್ಲಿ ಹಾಗೇ ಗುಂಡಿಗಳು ಇವೆ. ಇದಕ್ಕೆ ಬಿಜೆಪಿ ಸಂಸದ ಪಿಸಿ ಮೋಹನ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 18): ಬೆಂಗಳೂರಲ್ಲಿ ಮುಂದಿನ 15 ದಿನಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿಬಿಡುತ್ತೇವೆ. ಎಲ್ಲ ರಸ್ತೆಗಳನ್ನು ಜನಸ್ನೇಹಿ ಆಗಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು. ಕಾಂಗ್ರೆಸ್ ಸರ್ಕಾರ ನೀಡಿದ್ದ ಗಡುವು ಈಗಾಗಲೇ ಮುಕ್ತಾಯವಾಗಿದೆ. ಆದರೆ, ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಇನ್ನೂ ಇವೆ ಎಂದು ಬಿಜೆಪಿ ಸಂಸದ ಪಿ.ಸಿ ಮೋಹನ್ ಹೇಳಿದ್ದಾರೆ. ಮುಂದುವರಿದು, ರಸ್ತೆಗುಂಡಿಗಳನ್ನು ಮುಚ್ಚುವ ಬದಲು ಅವರ ಜೇಬು ತುಂಬಿಸಿಕೊಂಡರೆ ಎಂದು ಗುಂಡಿ ಇರುವ ರಸ್ತೆಯ ವಿಡಿಯೋ ಶೇರ್ ಮಾಡಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಸಿ ಮೋಹನ್, ಬೆಂಗಳೂರಿನಲ್ಲಿ ಗುಂಡಿಯಲ್ಲಿ ರಸ್ತೆಯೋ ರಸ್ತೆಯಲ್ಲಿ ಗುಂಡಿಯೋ ಎನ್ನುವಂತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಇದೇನಾ 15 ದಿನಗಳಲ್ಲಿ ರಸ್ತೆಗುಂಡಿ ಮುಚ್ಚುವ ಪರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ರಸ್ತೆಗುಂಡಿಗಳನ್ನು ಮುಚ್ಚುವ ಬದಲು ಅವರ ಜೇಬು ತುಂಬಿಸಿಕೊಂಡರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಗಡುವು ಇಂದು ಅಂತ್ಯ: ರಜಾ ದಿನವಾದ ಭಾನುವಾರವೂ ಮುಂದುವರಿದ ಕಾಮಗಾರಿ!
ಇನ್ನು ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರ ಟ್ವೀಟ್‌ಗೆ ಜನ ಕಾಮೆಂಟ್ ಮಾಡಿರುವುದನ್ನು ನೋಡಿದರೆ, ಈ ಟ್ವೀಟ್ ಅವರಿಗೆ ತಿರುಗುಬಾಣವಾದಂತಿದೆ. ಹೌದು….ನೀವು ಓರ್ವ ಸಂಸದರಾಗಿ ಏನು ಮಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ನೀವು 15 ವರ್ಷಗಳಿಂದ ಸಂಸದರು ಎಂದು ಭಾವಿಸುತ್ತೇನೆ. ನಿಮ್ಮ ಕ್ಷೇತ್ರ ಹೆಂಗಿದೆ ಎಂದು ಕೇಳಿದ್ದಾರೆ. ಇನ್ನು ಕೆಲವರು ಬಿಡಿ ಸರ್ ಇದಕ್ಕಿಂತ ಮುಂಚೆ ಏನಾದರು ಬದಲಾಗಿತ್ತಾ ಅಂತಲೂ ಕೇಳಿದ್ದಾರೆ. ಈ ಬೆಂಗಳೂರು ರಸ್ತೆಗುಂಡಿಗಳನ್ನು ಮುಚ್ಚುವುದರಲ್ಲಿ ಬಿಜೆಪಿಯ ಪಾತ್ರವೇನು ಇಲ್ಲವೇ. ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಬ್ಲೈಮ್ ಮಾಡ್ತಿದೆ. ನಿಮಗೆ ಜನರ ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿ ಇಲ್ಲವೇ ಎಂದು ಜನ ಪ್ರಶ್ನೆ ಮಾಡಿದ್ದಾರೆ.
They promised to fill Bengaluru’s potholes in 15 days, but ended up filling their pockets instead? pic.twitter.com/ekRaXQ653A
— P C Mohan (@PCMohanMP) September 18, 2024
ನೀವು ಬರೀ ಟ್ವೀಟ್ ಮಾಡಿದರೆ ಸಾಕೇ, ನೀವೇನೂ ಮಾಡಲ್ವಾ ಪ್ರಧಾನಿ ಮೋದಿ ಅವರ ಹಿಂದೆ ಕುಳಿತು ಚಪ್ಪಾಳೆ ತಟ್ಟುತ್ತೀರಾ ಎಂದು ಕೆಲವರು ಹಿಂದಿಯಲ್ಲೂ ಟ್ವೀಟ್ ಮಾಡಿ ಸಂಸದರನ್ನು ಪ್ರಶ್ನೆ ಮಾಡಿದ್ದಾರೆ. ಕೆಲವೇ ಕೆಲವರು ಮಾತ್ರ ಬಿಜೆಪಿ ಸಂಸದರನ್ನು ಸಮರ್ಥನೆ ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ