BMTC ಬಸ್ ನಿಲ್ದಾಣದಲ್ಲಿ ಡಿಜಿಟಲ್ ಬೋರ್ಡ್ ಅಳವಡಿಕೆ; ಇಲ್ಲಿದೆ ಮಾಹಿತಿ
ಬಸ್ ತಂಗುದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವ ಯೋಜನೆಯು ದೀರ್ಘಕಾಲದಿಂದ ಬಾಕಿ ಉಳಿದಿದೆ. ನಿರ್ಭಯಾ ಯೋಜನೆ ಅಡಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಮುಖ್ಯ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ ರೆಡ್ಡಿ ಹೇಳಿದರು.
ಬೆಂಗಳೂರು ನ.13: ನಗರದಾದ್ಯಂತ ಇರುವ ಐನೂರಕ್ಕೂ ಹೆಚ್ಚು ಬಿಎಂಟಿಸಿ (BMTC) ಬಸ್ ತಂಗುದಾಣಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಬೋರ್ಡ್‌ಗಳನ್ನು (Digital Boards) ಅಳವಡಿಸಲಾಗಿದೆ. ಆಯ್ದ ಬಸ್ ತಂಗುದಾಣಗಳಲ್ಲಿ ಮಾತ್ರ ಈ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು, ಇನ್ನೂ ಕೆಲವು ತಂಗುದಾಣಗಳಲ್ಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಬಸ್ ತಂಗುದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವ ಯೋಜನೆಯು ದೀರ್ಘಕಾಲದಿಂದ ಬಾಕಿ ಉಳಿದಿದೆ. ನಿರ್ಭಯಾ ಯೋಜನೆ ಅಡಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಡಿಜಿಟಲ್ ಬೋರ್ಡ್‌ಗಳು ಬಿಎಂಟಿಸಿ ಬಸ್ ಮಾರ್ಗಗಳು, ಬಸ್ ನೋಂದಣಿ ಸಂಖ್ಯೆಗಳು, ಬಸ್‌ನ ಗಮ್ಯಸ್ಥಾನ ಮತ್ತು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಆಗಮನದ ಅಂದಾಜು ಸಮಯವನ್ನು ತಿಳಿಸುತ್ತದೆ ಎಂದು ಮುಖ್ಯ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ ರೆಡ್ಡಿ ಹೇಳಿದರು.
ಇದನ್ನೂ ಓದಿ: ಡಕೋಟಾ ಎಕ್ಸ್ಪ್ರೆಸ್: ಈ ವರ್ಷ ಮಾರ್ಗ ಮಧ್ಯೆದಲ್ಲೇ 1478 ಬಾರಿ ಕೆಟ್ಟು ನಿಂತ ಬಿಎಂಟಿಸಿ ಬಸ್ಗಳು
ಡಿಜಿಟಲ್ ಬೋರ್ಡ್‌ಗಳು ಬಸ್‌ಗಳಲ್ಲಿ ನೈಜ-ಸಮಯದ ಡೇಟಾವನ್ನು ಒದಗಿಸುತ್ತವೆ. ಸುಮಾರು 40 ತಂಗುದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ. ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲು ಅಗತ್ಯವೆಂದರೆ ವಿದ್ಯುತ್ ಸರಬರಾಜು. ಆದರೆ ಕೆಲವು ತಂಗುದಾಣದಲ್ಲಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸ್ಮಾರ್ಟ್‌ಫೋನ್ ಹೊಂದಿರುವವರು ಮತ್ತು ನಮ್ಮ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವವರು ಈ ಎಲ್ಲಾ ವಿವರಗಳನ್ನು ಫೋನ್‌ನಲ್ಲಿ ಪಡೆಯಬಹುದಾದರೂ, ಹೆಚ್ಚಿನ ಪ್ರಯಾಣಿಕರು ಭೌತಿಕ ಬೋರ್ಡ್‌ಗಳನ್ನೇ ನೋಡುತ್ತಾರೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ