ಸಿಎಲ್​​ಪಿ ಸಭೆಗೆ ಮುಹೂರ್ತದ ಬೆನ್ನಲ್ಲೇ ಜೋರಾದ ಸಚಿವಾಕಾಂಕ್ಷಿಗಳ ಲಾಬಿ: ರೇಸ್​​ನಲ್ಲಿ ಇರೋದು ಯಾರ್ಯಾರು?

ಕರ್ನಾಟಕ ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ ನೂತನ ಸಚಿವರ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು ಶುರುವಾಗಿದೆ. ನಾಳೆ ಸಿಎಲ್‌ಪಿ ಸಭೆ ನಿಗದಿಯಾಗಿದ್ದು, ಹೊಸ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಇದ್ದ ಸಚಿವರು ಮತ್ತು ಸ್ಥಾನ ಗಿಟ್ಟಿಸಲು ಹಿರಿಯ ಶಾಸಕರು ಪೈಪೋಟಿಗಿಳಿದಿದ್ದಾರೆ. ಈ ನಡುವೆ ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಲಿದ್ದಾರೆ. ಈ ವೇಳೆ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೊಸ ಸರ್ಕಾರದ ರಚನೆ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ.

ಸಿಎಲ್​​ಪಿ ಸಭೆಗೆ ಮುಹೂರ್ತದ ಬೆನ್ನಲ್ಲೇ ಜೋರಾದ ಸಚಿವಾಕಾಂಕ್ಷಿಗಳ ಲಾಬಿ: ರೇಸ್​​ನಲ್ಲಿ ಇರೋದು ಯಾರ್ಯಾರು?
ಸಚಿವ ಸ್ಥಾನದ ರೇಸ್​​ನಲ್ಲಿ ಇರೋದು ಯಾರ್ಯಾರು?
Image Credit source: Tv9 Kannada
Edited By:

Updated on: May 29, 2026 | 12:11 PM

ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿಗಳ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸರ್ಜನೆಗೊಂಡಿರುವ ಬಗ್ಗೆ ಗೆಜೆಟ್ ಅಧಿಸೂಚನೆ ಪ್ರಕಟವಾಗಿದೆ. ನಾಳೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯೂ ನಿಗದಿಗೊಂಡಿದ್ದು, CLP ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದೆ. ಹೀಗಾಗಿ ನೂತನ ಮುಖ್ಯಮಂತ್ರಿಗಳ ಚಿವ ಸಂಪುಟ ಸೇರಲು ಆಕಾಂಕ್ಷಿಗಳ ಲಾಬಿಯೂ ಜೋರಾಗಿಯೇ ನಡೆಯುತ್ತಿದೆ.

ಜೋರಾದ ಲಾಬಿ

DK Shivakumar To Discuss About New Govt Formation With High Command, Lobbying Intensifies

ಹೊಸ ಸರ್ಕಾರ ರಚನೆಯ ಕಸರತ್ತು ಗರಿಗೆದರುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ದಿಲ್ಲಿಗೆ ಜಿಗಿದಿದೆ. ಮುಂಜಾನೆ 3 ಗಂಟೆಯ ವಿಮಾನದಲ್ಲೇ ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಎನ್.ಎಸ್. ಬೋಸರಾಜು ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತಲುಪಿದ್ದಾರೆ. ಸದ್ಯ ಸಚಿವರಾಗಿರುವವರು ಮುಂದಿನ ಸಂಪುಟದಲ್ಲೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಹಿರಿಯ ಶಾಸಕರಾಗಿದ್ದೂ ಈವರೆಗೆ ಸಚಿವ ಸ್ಥಾನ ಸಿಗದ ನಾಯಕರು ಈ ಬಾರಿ ಸಂಪುಟ ಸೇರಲು ದೆಹಲಿ ಮಟ್ಟದಲ್ಲಿ ಭರ್ಜರಿ ಸರ್ಕಸ್ ಆರಂಭಿಸಿದ್ದಾರೆ .

ಯಾರಿಗೆಲ್ಲ ಸಚಿವ ಸ್ಥಾನ?

ನೂತನ ಸಚಿವ ಸಂಪುಟ ಸೇರ್ಪಡೆ ಸಂಬಂಧ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆ ಮತ್ತೆ ಸಚಿವರಾಗುವ ವಿಶ್ವಾಸದಲ್ಲಿ 11ರಿಂದ 13 ಶಾಸಕರಿದ್ದಾರೆ ಎನ್ನಲಾಗಿದೆ. ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್​, ಡಾ.ಪರಮೇಶ್ವರ್, H​.K.ಪಾಟೀಲ್, ಶಿವರಾಜ ತಂಗಡಗಿ, ಮುನಿಯಪ್ಪ, ಮಂಕಾಳು ವೈದ್ಯ, ಸಂತೋಷ್​​ ಲಾಡ್​, ದಿನೇಶ್ ಗುಂಡೂರಾವ್ ಮತ್ತೆ ಸಂಪುಟ ಸೇರ್ಪಡೆ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ಕೆಲವರ ಹೆಸರನ್ನು ಡಿಕೆಶಿ ಪರಿಗಣಿಸುವ ಸಾಧ್ಯತೆಯೂ ಇದೆ. ಹೈಕಮಾಂಡ್ ಒಪ್ಪಿದರೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಇದ್ದ 29 ಮಂದಿ ಸಚಿವರ ಪೈಕಿ 11ರಿಂದ 13 ಮಂದಿ ಸಂಪುಟಕ್ಕೆ ಪುನಃ ಆಯ್ಕೆ ಸಾಧ್ಯತೆ ಇದೆ.

ಇದನ್ನೂ ಓದಿ: ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ; ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್

ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಲಿದ್ದಾರೆ. ಈ ವೇಳೆ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೊಸ ಸರ್ಕಾರದ ರಚನೆ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ. ಹೊಸದಾಗಿ ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕು, ನೂತನ ಸಿಎಂ ಜೊತೆಗೆ ಎಷ್ಟು ಜನ ಸಚಿವರು ಮೊದಲ ಹಂತದಲ್ಲಿ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್‌ನಿಂದ ಡಿಕೆಶಿ ನಿರ್ದೇಶನ ಹಾಗೂ ಸಲಹೆಗಳನ್ನು ಪಡೆಯಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Follow Us