ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ರೇಡ್; ಮೊಬೈಲ್ ಫೋನ್, ಡ್ರಗ್ಸ್ ಪತ್ತೆ
ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿಯಿದ್ದು, ಈ ನಡುವೆ ಇಂದು(ಮೇ.8) ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election) ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿಯಿದ್ದು, ಈ ನಡುವೆ ಇಂದು(ಮೇ.8) ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಹೌದು ಮತದಾನಕ್ಕೆ ಎರಡು ದಿನಗಳಿದ್ದು, ಈ ವೇಳೆ ಜೈಲಿನಿಂದ ಕರೆ ಮಾಡಿ ಬೆದರಿಕೆ ಹಾಕುವುದು, ಇಂತವರಿಗೆ ಮತ ಹಾಕಿ ಎಂದು ಒತ್ತಡ ಹಾಕುವ ಶಂಕೆ ಹಿನ್ನಲೆ, ಅಪರಾಧ ವಿಭಾಗದ ಜಂಟಿ ಆಯುಕ್ತ ಡಾ. ಶರಣಪ್ಪ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು ಹಾಗೂ CCBಯ ಎಲ್ಲ ಸಿಬ್ಬಂದಿಗಳು ರೇಡ್ ಮಾಡಿದ್ದಾರೆ.
ಇನ್ನು ದಾಳಿ ವೇಳೆ ಮೊಬೈಲ್ ಫೋನ್ಗಳು, ಅಲ್ಪ ಪ್ರಮಾಣದ ಡ್ರಗ್ಸ್ ಹಾಗೂ ಊಟದ ಪ್ಲೇಟ್ನಲ್ಲಿ ತಯಾರಿಸಿದ ಚಾಕುಗಳು ಚಾಕುಗಳು ಪತ್ತೆಯಾಗಿದೆ. ಪ್ರಮುಖವಾಗಿ ರೌಡಿಶೀಟರ್ಗಳು, ಕೊಲೆ ಆರೋಪಿಗಳು, ಇತರ ಅಪರಾಧ ಹಿನ್ನಲೆಯುಳ್ಳವರನ್ನ ವಿಚಾರಣೆ ಮಾಡಲಾಗಿದ್ದು, ವಿಚಾರಣಾಧೀನ ಖೈದಿಗಳು, ಶಿಕ್ಷೆಗೆ ಒಳಗಾಗಿರುವ ಖೈದಿಗಳ ಬ್ಯಾರಕ್ನಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಜೈಲಿನಲ್ಲಿದ್ದುಕೊಂಡೆ ಎಲೆಕ್ಷನ್ ಅಖಾಡದಲ್ಲಿ ಕಾರ್ಯಾಚರಣೆ ನಡೆಸಿದ್ದ ಹಲವು ಅಸಾಮಿಗಳು ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ವಿಡಿಯೋ: ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್ ಅಧಿಕಾರಿಗೆ ದೂರು ನೀಡಿದ ಬಾಲಕ!
ಮೈಸೂರಿನಲ್ಲಿ ರೌಡಿಶೀಟರ್ಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಫುಲ್ ಅಲರ್ಟ್ ಆಗಿದ್ದು, ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸೂಚನೆ ಮೇರೆಗೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ವಿವಿಧ ಬಡಾವಣೆಯ ರೌಡಿಶೀಟರ್ಗಳ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಖಾಸಗಿ ಲಾಡ್ಜ್ ನಲ್ಲಿ ಬಿಜೆಪಿ ಹಣವಿಟ್ಟಿದ್ದ ಆರೋಪ; ಜೆಡಿಎಸ್ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ
ತುಮಕೂರು: ವಿಧಾನಸಭೆ ಚುನಾವಣೆ ಹಿನ್ನಲೆ ನಗರದ ಖಾಸಗಿ ಲಾಡ್ಜ್ನಲ್ಲಿ ಬಿಜೆಪಿ ಹಣವಿಟ್ಟಿದ್ದ ಆರೋಪ ಮಾಡಲಾಗಿದ್ದು, ಜೊತೆಗೆ ಸಂಸದ ಜಿಎಸ್ ಬಸವರಾಜ್ ಆಪ್ತ ಕುಂದರನಹಳ್ಳಿ ರಮೇಶ್ ಸೇರಿದಂತೆ ಹಲವರು ಲಾಡ್ಜ್ನಲ್ಲಿದ್ದ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಹಣ ಹಂಚಲು ಲಾಡ್ಜ್ ನಲ್ಲಿದ್ದರು ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಪೊಲೀಸರು ಲಾಡ್ಜ್ ಗೆ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಕೂಡ ಭೇಟಿಯಾಗಿದ್ದು, ಬಳಿಕ ಲಾಡ್ಜ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಪೂರ್ಣ ಶೋಧ ಮಾಡಿದ್ದರು.
ಕುಂದರನಹಳ್ಳಿ ರಮೇಶ್ಗೆ ತುಮಕೂರು ನಗರದಲ್ಲಿ ಮನೆಯಿದ್ದರೂ ಯಾಕೆ ಲಾಡ್ಜ್ ನಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಪರವಾಗಿ ಹಣ ಹಂಚಲು ಇದ್ದರೆಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ. ರೇಡ್ ಗೆ ಹೋದ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರಿಂದಲೇ ದಾಂದಲೇ ಆರೋಪ ಮಾಡಿದ್ದಾರೆ. ಜೊತೆಗೆ ಇದನ್ನ ಕೇಳಲು ಬಂದ ತುಮಕೂರು ಮಹಾನಗರ ಪಾಲಿಕೆ ಉಪಮೇಯರ್ ನರಸಿಂಹ ಮೂರ್ತಿ ಹಾಗೂ ರವೀಶ್ ಜಹಾಂಗೀರ್ ನ್ನ ಠಾಣೆಗೆ ಬಿಟ್ಟು ಕೊಂಡಿಲ್ಲ. ನಗರದಲ್ಲಿ ಬಿಜೆಪಿಯಿಂದ ಚುನಾವಣಾ ಆಯೋಗವನ್ನ ಹೈಜಾಕ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ನಿಯಂತ್ರಣ ತಪ್ಪಿದ ಕಾರು, ಟ್ರಾಫಿಕ್ ಪೊಲೀಸ್ಗೆ ಢಿಕ್ಕಿ; ನೋಡಿ ವೈರಲ್ ವಿಡಿಯೋ
ಅವರು ಹೇಳಿದಂತೆ ಚುನಾವಣಾ ಆಯೋಗ ಕೇಳುತ್ತಿದೆ. ಹಣದ ಬಗ್ಗೆ ಮಾಹಿತಿ ನೀಡಿ ಹೋದ ಅಮಾಯಕರ ಮೇಲೆ ಕೇಸ್ ದಾಖಲಿಸಿದ್ದಾರೆ. ಸಂಸದ ಜಿಎಸ್ ಬಸವರಾಜ್ ಠಾಣೆಗೆ ಹೋಗಿ ರಮೇಶ್ ರನ್ನ ಕರೆದುಕೊಂಡು ಬಂದಿದ್ದಾರೆ. ಸಿಐಟಿ ಕಾಲೇಜ್ ಹೆಸರಿನಲ್ಲಿ ರೂಮ್ ಬುಕ್ ಆಗಿದ್ದು. ನಗರದಲ್ಲಿ ಬಿಜೆಪಿಯಿಂದ ಹಣ ಹಂಚಿಕೆ ಮಾಡಲಾಗುತ್ತಿದೆ. ಆದರೆ ಅದನ್ನ ಕೇಳಲು ಹೋದವರ ಮೇಲೆಯೇ ಕೇಸ್ ದಾಖಲಿಸಿದ್ದಾರೆ. ಜೊತೆಗೆ ಕುಂದರನಹಳ್ಳಿ ರಮೇಶ್ ಮೇಲೆ ದಾಂದಲೇ ಮಾಡಿ ಬ್ಯಾಗ್, ಹಾಸಿಗೆ, ದಿಂಬು ಶೋಧಿಸಿ ಚೆಲ್ಲಿಪಿಲ್ಲಿ ಮಾಡಿ ದಾಂದಲೇ ಮಾಡಿ 23 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆಂದು ದೂರು ನೀಡಿದ್ದಾರೆ. ಈ ಕುರಿತು ನಾಲ್ಕು ಜನ ನಿಖಿಲ್, ಸಾಧಿಕ್, ಹೇಮಂತ್, ರಕ್ಷಿತ್ ವಿರುದ್ಧ ದೂರು ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
