AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಷಾರ್: ಅಕ್ರಮ ವಲಸಿಗರಿಗೆ ಜಾಗ ಕೊಟ್ರೆ ಮನೆ ಮಾಲಿಕರಿಗೆ ಸಂಕಷ್ಟ

ಬೆಂಗಳೂರು ಪೊಲೀಸರು ಅಕ್ರಮ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಮಿಷನರ್ ಸೂಚನೆ ಮೇರೆಗೆ ಈಗಾಗಲೇ 2000ಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆ ನಡೆಸಲಾಗಿದೆ. ನೈಜೀರಿಯನ್ ಮತ್ತು ಬಾಂಗ್ಲಾ ವಲಸಿಗರು ಸೇರಿದಂತೆ ಹಲವರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.

ಹುಷಾರ್: ಅಕ್ರಮ ವಲಸಿಗರಿಗೆ ಜಾಗ ಕೊಟ್ರೆ ಮನೆ ಮಾಲಿಕರಿಗೆ ಸಂಕಷ್ಟ
ಪೊಲೀಸರಿಂದ ಪರಿಶೀಲನೆImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on: Feb 26, 2026 | 10:29 PM

Share

ಬೆಂಗಳೂರು, ಫೆಬ್ರವರಿ 26: ನಗರದಲ್ಲಿ ವಿದೇಶಿಗರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನಲೆ ಪೊಲೀಸರು (police) ಅಲರ್ಟ್ ಆಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಅಕ್ರಮ ವಿದೇಶಿಗರ (Illegal Foreigners) ಪತ್ತೆಗೆ ಖಾಕಿ ಪಡೆ ಮುಂದಾಗಿದೆ. ಕಮಿಷನರ್​​ ಸೂಚನೆ ಬೆನ್ನಲ್ಲೇ ನಗರ‌ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ವೇಳೆ ಅಕ್ರಮ ವಲಸಿಗರಿಗೆ ಜಾಗ ಕೊಟ್ಟರೆ ಮನೆ ಮಾಲಿಕರಿಗೂ ಸಂಕಷ್ಟ ತಪ್ಪಿದ್ದಲ್ಲ.

ಬೆಂಗಳೂರಲ್ಲಿ ಪೊಲೀಸರ ತಲಾಶ್

ಬೆಂಗಳೂರಿನ ಆಯಾ ವಿಭಾಗದಲ್ಲಿ ಅನುಮಾನಿತ ಸ್ಥಳಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ. ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ನಿನ್ನೆ ಒಂದು ದಿನವೇ ಸುಮಾರು 2000ಕ್ಕೂ ಹೆಚ್ಚು ವಿದೇಶಿಗರ ವಿಚಾರಣೆ ಮಾಡಲಾಗಿದೆ. ಇದರಲ್ಲಿ ಬಹುತೇಕ ವಿದೇಶಿಕರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅಕ್ರಮವಾಗಿ ನೈಜೀರಿಯನ್ಸ್​​ ಹಾಗೂ ಬಾಂಗ್ಲಾ ವಲಸಿಗರು ನೆಲೆಸಿರುವುದು ಪತ್ತೆಯಾಗಿದೆ‌. ಸದ್ಯ ಅಕ್ರಮವಾಗಿ ನೆಲೆಸಿರುವ ಎಲ್ಲರ ವಿಚಾರಣೆ ನಡೆದಿದೆ. ಎಲ್ಲಿಂದ? ಯಾವಾಗ? ಯಾರು ಕರೆತಂದರು ಎಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಿಸಿಬಿ ಭರ್ಜರಿ ಕಾರ್ಯಚರಣೆ: ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ 9 ವಿದೇಶಿಗರ ಬಂಧನ

ವೀಸಾ ವೆರಿಫಿಕೇಶನ್ ಜೊತೆಗೆ ಫಾರ್ಮ್ ಸಿ ಮತ್ತು ಇತರೆ ಬೇರೆ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಲೈವ್ ಕ್ಯಾಮೆರಾ ಬಳಸಿ ಆಯಾ ನಗರಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.

ಇನ್ನು ಮನೆಯ ಮಾಲೀಕರು ಮತ್ತು ವಿದೇಶೀಯರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಮಾಲೀಕರು ಫಾರ್ಮ್ ಸಿ ಮಾಹಿತಿಯನ್ನು ಸ್ಥಳೀಯ ಠಾಣೆಗೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಡಿಪೋಟೇಷನ್‌ (ಪ್ರತಿನಿಧಿತ್ವ) ಮಾಡುವ ಕೆಲಸ ಪೊಲೀಸರು ಇನ್ಮುಂದೆ ಮಾಡಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಡುಕ ಶುರು: ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ

ಸದ್ಯ ಬೆಂಗಳೂರಿನ ಮೂಲೆ ಮೂಲೆಯಲ್ಲೂ ತಲಾಶ್ ನಡೆಸಲು ಕಮಿಷನರ್ ಸೂಚನೆ ಕೊಟ್ಟಿದ್ದಾರೆ. ಅದರಂತೆ ಡ್ರಗ್ಸ್​ ಪೆಡ್ಲಿಂಗ್ ಸೇರಿ ಅಕ್ರಮ ತಡೆಯಲು ಪೊಲೀಸರು ಮುಂದಾಗಿದ್ದಾರೆ.

ವರದಿ: ವಿಕಾಸ್ ಟಿವಿ9, ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!