ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ ಅಲ್ಲ, ವಕ್ಫ್ ಬೋರ್ಡ್ ಆಸ್ತಿ ಎಂದ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ; ಬಿಬಿಎಂಪಿ ದಾಖಲೆಯಲ್ಲೇ ಪತ್ತೆಯಾಯ್ತು ಲೋಪ?
ಈದ್ಗಾ ಮೈದಾನ ಎಂಬ ಪದವನ್ನ, ಈದ್ಗಾ ಎಂಬ ಪದಕ್ಕೆ ಗೀಚು ಹಾಕಿರುವ ದಾಖಲೆ ಪತ್ತೆಯಾಗಿದೆ. ಈದ್ಗಾ ಮೈದಾನ ಪದದಲ್ಲಿ ಈದ್ಗಾಗೆ ಗೀಚು ಹಾಕಿ ಕೇವಲ ಮೈದಾನ ಎಂದು ಪುಸ್ತಕದಲ್ಲಿ ನಮೂದಿಸಲಾಗಿದ್ದು ಆಟದ ಮೈದಾನ ಎಂದು ಹೊಸದಾಗಿ ಬರೆದಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರೋ ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರವಾಗಿ ಈಗ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಹಿಂದೂ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ನವರಾತ್ರಿ ಉತ್ಸವ ಆಚರಿಸಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಇಂದು ಬೊಮ್ಮಾಯಿಯನ್ನ ಭೇಟಿಯಾಗಬೇಕಿತ್ತು. ಆದ್ರೆ ಅಷ್ಟರಲ್ಲೇ, ಈದ್ಗಾ ಯುದ್ಧಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಈದ್ಗಾ ಮೈದಾನ ಬಿಬಿಎಂಪಿ ಪಾಲಿಕೆಗೆ ಸೇರಿದ ಸ್ವತ್ತು ಎಂದು ನಿನ್ನೆ ಬಿಬಿಎಂಪಿ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದ್ದರು. ಇದು ಆಟದ ಮೈದಾನ ಇಲ್ಲಿ ಮುಸ್ಲಿಮರು ವರ್ಷಕ್ಕೆರಡು ಬಾರಿ ಹೇಗೆ ನಮಾಜ್ ಮಾಡ್ತಾರೋ. ಅದೇ ರೀತಿ, ಹಿಂದೂಗಳು ಬೇಡಿಕೆ ಇಟ್ರೆ ಅವರಿಗೂ ಅವರ ಹಬ್ಬ ಆಚರಣೆ ಮಾಡೋಕೆ ಅವಕಾಶ ಕೊಡೋ ಕುರಿತು ಪರಿಶೀಲನೆ ನಡೆಸ್ತೀವಿ ಅಂತಾ ಹೇಳಿದ್ರು. ಇದ್ರ ಬೆನ್ನಲ್ಲೇ, ಹಿಂದೂ ಸಂಘಟನೆಗಳು ಹಬ್ಬ ಮಾಡೋಕೆ ಅನುಮತಿ ಕೇಳೋಕೆ ಸಜ್ಜಾಗಿದ್ದಾರೆ. ಆಗಸ್ಟ್ 15ಕ್ಕೆ ಧ್ವಜಹಾರಿಸೋಕೆ, ನವರಾತ್ರಿ ಆಚರಣೆಗೆ ಮನವಿ ಮಾಡೋಕೆ ಮುಂದಾಗಿವೆ. ಈಗಾಗಲೇ ಮನವಿಗಳು ಬರ್ತಿವೆ. ಅದಕ್ಕೂ ಮುನ್ನ ಮೋದಿ ಬರೋ ಹೊತ್ತಲ್ಲೇ, ಯೋಗ ಡೇ ಮಾಡೋಕೆ ಪರ್ಮಿಷನ್ ಕೊಡಿ ಅಂತಾ ಕೇಳ್ತಿವೆ. ಆದ್ರೀಗ, ಇದಕ್ಕೆ ದೊಡ್ಡ ತಿರುವು ಸಿಕ್ಕಿದೆ. ದೊಡ್ಡ ಸಂಘರ್ಷ ಹೊತ್ತಿಕೊಳ್ಳೋ ಲಕ್ಷಣಗಳು ಕಾಣ್ತಿವೆ ಯಾಕಂದ್ರೆ, ಬಿಬಿಎಂಪಿ ಚಿಂತನೆ ಕುರಿತು ವಕ್ಫ್ ಬೋರ್ಡ್ ತಿರುಗಿ ಬಿದ್ದಿದೆ. ಇದನ್ನೂ ಓದಿ: Breaking: ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಹೊರಕ್ಕೆ
ಮೈದಾನ ಬಿಬಿಎಂಪಿ ಆಸ್ತಿ ಅಲ್ಲ, ವಕ್ಫ್ ಬೋರ್ಡ್ ಆಸ್ತಿ ಮೈದಾನ ಬಿಬಿಎಂಪಿ ಆಸ್ತಿ ಅಲ್ಲ, ಅದು ವಕ್ಫ್ ಬೋರ್ಡ್ ಆಸ್ತಿ. ಹಬ್ಬ ಆಚರಣೆಗೆ ಬೇರೆಯವರಿಗೆ ಹೇಗೆ ಅವಕಾಶ ನೀಡುತ್ತಾರೆ ಎಂದು ಟಿವಿ9ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿಕೆ ನೀಡಿದ್ದಾರೆ. ವಕ್ಫ್ ಬೋರ್ಡ್ ಆಸ್ತಿಯಲ್ಲಿ ಬೇರೆಯವರಿಗೆ ಅವಕಾಶ ಕೊಡಲ್ಲ. ‘ಸುಪ್ರೀಂ’ ಆದೇಶದ ಪ್ರಕಾರ ಮೈದಾನ ವಕ್ಫ್ ಬೋರ್ಡ್ ಆಸ್ತಿ. ಬಿಬಿಎಂಪಿ ಅನುಮತಿ ನೀಡುವ ಮೊದಲು ಯೋಚನೆ ಮಾಡಲಿ. ಇಲ್ಲದಿದ್ದರೆ ಕೋಮು ಗಲಭೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ರಾಜಧಾನಿ ಬೆಂಗಳೂರಿಗೆ ಕೆಟ್ಟ ಹೆಸರು ಬರುವ ಕೆಲಸವಾಗುತ್ತದೆ. ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ವಕ್ಫ್ನವರು ಮಾಡುತ್ತಾರೆ. ಸ್ಥಳೀಯ ಶಾಸಕರು ಸ್ವಾತಂತ್ರ್ಯ ದಿನಾಚರಣೆ ಮಾಡ್ತಾರೆ. ನಮ್ಮ ಮನೆಗೆ ಬಂದು ಬೇರೆಯವರು ಅದು ಹೇಗೆ ಆಚರಿಸುತ್ತಾರೆ? ಬಿಬಿಎಂಪಿ ಅಧಿಕಾರಿಗಳು ಈದ್ಗಾ ಮೈದಾನದ ಸರ್ವೆ ಮಾಡಿಸಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬಿಬಿಎಂಪಿ ದಾಖಲೆಯಲ್ಲೇ ಲೋಪ? ಇನ್ನು ಮತ್ತೊಂದು ಕಡೆ ಈದ್ಗಾ ಮೈದಾನ ವಿವಾದದಲ್ಲಿ ಅಕ್ರಮ ನಡೆದಿದೆ ಎಂಬ ಸುಳಿವು ಸಿಕ್ಕಿದೆ. ಈದ್ಗಾ ಮೈದಾನ ಎಂಬ ಪದವನ್ನ, ಈದ್ಗಾ ಎಂಬ ಪದಕ್ಕೆ ಗೀಚು ಹಾಕಿರುವ ದಾಖಲೆ ಪತ್ತೆಯಾಗಿದೆ. ಈದ್ಗಾ ಮೈದಾನ ಪದದಲ್ಲಿ ಈದ್ಗಾಗೆ ಗೀಚು ಹಾಕಿ ಕೇವಲ ಮೈದಾನ ಎಂದು ಪುಸ್ತಕದಲ್ಲಿ ನಮೂದಿಸಲಾಗಿದ್ದು ಆಟದ ಮೈದಾನ ಎಂದು ಹೊಸದಾಗಿ ಬರೆದಿರುವ ಶಂಕೆ ವ್ಯಕ್ತವಾಗಿದೆ.
ಪಾಲಿಕೆ ಕಟ್ಟಡ ಕಟ್ಟಲು ಸರ್ವೆ ನಂಬರ್ 40 ರ ಜಮೀನು ಅಗೆಯುವಾಗ ವಿವಾದ ಶುರುವಾಗಿ ಪಾಲಿಕೆಯ ಕ್ರಮ ಪ್ರಶ್ನಿಸಿ ಮುಸ್ಲಿಂ ಪ್ರತಿನಿಧಿಗಳು ದಾವೆ ಹೂಡಿದ್ದರು. ಮುಸ್ಲಿಮರ ಪರವಾಗಿ ಎಸ್. ಅಬ್ದುಲ್ ವಾಜಿದ್ ಪಾಲಿಕೆ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ವಿಧಿಸುವಂತೆ ದಾವೆ ಹೂಡಿದ್ದರು. ಸದ್ಯ 2 ಎಕರೆ 10 ಗುಂಟೆ ಜಮೀನು ಈಗ ವಿವಾದದ ಕೇಂದ್ರವಾಗಿದೆ. ಚಾಮರಾಜಪೇಟೆಯ ಸರ್ವೆ ನಂಬರ್40 ಕ್ಕೆ ಸಂಬಂಧಿಸಿದಂತೆ ಪಾಲಿಕೆ ವಿರುದ್ಧ ಮುಸ್ಲಿಂ ನಿರ್ಬಂಧಕಾಜ್ಞೆ ಕೋರಿದ್ದರು. ಇದನ್ನೂ ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ; ಎಲ್ಲ ಧರ್ಮಗಳ ಬಗ್ಗೆ ಗೌರವ, ಸಹಿಷ್ಣುತೆಯನ್ನು ಪ್ರೋತ್ಸಾಹಿಸಿ: ವಿಶ್ವಸಂಸ್ಥೆ
ಮುಸ್ಲಿಮರು ಈ ಜಾಗವನ್ನು ಪ್ರಾರ್ಥನೆಗೆ ಬಳಸುತ್ತಿರುವುದರಿಂದ ಸ್ವಾಧೀನದಲ್ಲಿ ಪಾಲಿಕೆ ಹಸ್ತಕ್ಷೇಪ ಮಾಡದಂತೆ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ನೀಡಿತ್ತು. ಪಾಲಿಕೆ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಸಿವಿಲ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಬೆಂಗಳೂರು ಸಿವಿಲ್ ಕೋರ್ಟ್ನಲ್ಲಿ 1959 ರಲ್ಲಿ ಸಿವಿಲ್ ದಾವೆ ಹೂಡಲಾಗಿತ್ತು. ಸುಪ್ರೀಂ ಕೋರ್ಟ್ಗೆ ಮೇಲ್ ಮನವಿ ತಿರಸ್ಕರಿಸಿ 1964 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪಾಲಿಕೆ ಮುಸ್ಲಿಮರ ಸ್ವಾಧೀನದಲ್ಲಿನ ಈ ಪ್ರದೇಶದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲವೆಂದು ನಿರ್ಬಂಧಕಾಜ್ಞೆ ನೀಡಿದೆ.
ಮುಸ್ಲಿಮರ ವಾದ ಏನಾಗಿತ್ತು 1871ರ ಪಹಣಿಯ ಪ್ರಕಾರ 10 ಎಕರೆ 5ಗುಂಟೆ ಜಾಗವಿತ್ತು. ಬೆಂಗಳೂರಿನ ಖಾಜಿ ಸಾಹೆಬ್ ಸ್ಮಶಾನಕ್ಕೆಂದು ಖರಾಬ್ ಜಾಗ ನೀಡಿದ್ದಾರೆ. ಉಳಿದ ಭೂಮಿಯಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ ಎಂದು ಉಲ್ಲೇಖವಿದೆ. 1877ರ ಫೈಸಲ್ ಪತ್ರಿಕಾದಲ್ಲಿ ಸರ್ಕಾರಿ ಖಾಸಿ ಸಾಬ್ ಜಾಗವೆಂದು ಉಲ್ಲೇಖ. 1901ರ ಖೇತ್ವರ್ ಪತ್ರಿಕಾದಲ್ಲಿ 10-05 ಎಕರೆ ಸರ್ಕಾರಿ ಎಂದು ಉಲ್ಲೇಖಿಸಲಾಗಿದೆ. ಖಾಜಿ ಸಾಹೇಬರ ಸ್ಮಶಾನ ಭೂಮಿ ಎಂದೂ ಉಲ್ಲೇಖಿಸಲಾಗಿದೆ. ಬೆಂಗಳೂರು ಮುನಿಸಿಪಲ್ ಕಮಿಟಿ 1938 -1941 ರವರೆಗೆ ಲೈಸೆನ್ಸ್ ನೀಡಿದೆ. ಈ ಲೈಸೆನ್ಸ್ ಗಳಲ್ಲಿ ಈದ್ಗಾ ಭೂಮಿ ಎಂದು ಉಲ್ಲೇಖಿಸಲಾಗಿದೆ. ಪ್ರತಿ ವರ್ಷ ಎರಡು ಬಾರಿ ಪ್ರಾರ್ಥನೆಗಾಗಿ ಬಳಸಲಾಗ್ತಿದೆ ಎಂದು ಉಲ್ಲೇಖವಿದೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬೆಂಗಳೂರು ಸಿಟಿ ಕಾರ್ಪೊರೇಷನ್ ವಾದ ಏನಾಗಿತ್ತು? ಜಮೀನಿನಲ್ಲಿರುವ ವೇದಿಕೆ ಮಾತ್ರ ಮುಸ್ಲಿಮರ ಪ್ರಾರ್ಥನೆಗೆ ಬಳಕೆ. ಉಳಿದ ಜಾಗ ಬಯಲು ಪ್ರದೇಶವಾಗಿ ಬಳಕೆಯಾಗ್ತಿದೆ. ಸ್ಮಶಾನಗಳೂ ಪಾಲಿಕೆಗೆ ಸೇರಿದ್ದೆಂದು ಬೆಂಗಳೂರು ಸಿಟಿ ಕಾರ್ಪೊರೇಷನ್ ವಾದ ಮಾಡಿದೆ. ಖಾಸಗಿಯವರ ಮಾಲಿಕತ್ವದಲ್ಲಿ ಇಲ್ಲದ ಜಾಗ ಪಾಲಿಕೆಗೆ ಸೇರಿದ್ದೆಂದು ವಾದ. ಸ್ಮಶಾನದ ಭೂಮಿ ಕೂಡಾ ಪಾಲಿಕೆಯ ಮಾಲಿಕತ್ವದ್ದೆಂದು ವಾದ ಮಾಡಿದೆ. 1933ರ ಮೈಸೂರು ಸಿಟಿ ಮುನಿಸಿಪಾಲಿಟಿ ಕಾಯ್ದೆ ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ ಉಲ್ಲೇಖಿಸಿ ವಾದ ಮಂಡಿಸಿದೆ.
ವಿವಾದಿತ ಜಾಗದಲ್ಲಿ ಸಾರ್ವಜನಿಕ ಮುನಿಸಿಪಲ್ ಟ್ಯಾಂಕ್ ಇದೆ. ಎಲ್ಲಾ ಧರ್ಮದ ಮಕ್ಕಳೂ ಅಲ್ಲಿ ಆಟವಾಡುತ್ತಾರೆ. ಜನರು ದಾರಿಯಾಗಿ ಆ ಜಾಗವನ್ನು ಉಪಯೋಗಿಸುತ್ತಿದ್ದಾರೆ. ಜಮೀನಿನಲ್ಲಿರುವ ಎರಡು ಫುಟ್ಪಾತ್ಗಳನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ಪಾಲಿಕೆಯ ಪೌರಕಾರ್ಮಿಕರು ವಾರಕ್ಕೊಮ್ಮೆ ಅಲ್ಲಿ ಸೇರುತ್ತಾರೆ. ಹೀಗಾಗಿ ಇದು ಪಾಲಿಕೆಗೆ ಸೇರಿದ ಜಾಗವೆಂದು ವಾದ ಮಾಡಿದೆ. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ ವಿವಾದ; ಈದ್ಗಾ ಮೈದಾನದಲ್ಲಿ ಹಿಂದೂಗಳ ಆಚರಣೆ, ತ್ರಿವರ್ಣ ಧ್ವಜ ಹಾರಿಸೋಕೆ ಹಿಂದೂ ಸಂಘಟನೆಗಳ ಪಟ್ಟು
ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ? ಈ ಜಾಗಕ್ಕೆ ಮಾಲೀಕರಿಲ್ಲದಿದ್ದರೆ ಸರ್ಕಾರದ್ದೆಂದು ಒಪ್ಪಬಹುದಿತ್ತು. ಆದರೆ ಬಯಲು ಜಾಗವಾದ್ದರಿಂದ ಸರ್ಕಾರದ್ದೆಂದು ಹೇಳಲಾಗದು. ಒಂದು ಸಮುದಾಯ ತನ್ನ ಧಾರ್ಮಿಕ ನಂಬಿಕೆಯಂತೆ ಸ್ಮಶಾನವಾಗಿ ಬಳಸುತ್ತಿದೆ. ಸ್ಮಶಾನದ ಪ್ರದೇಶವನ್ನು ಪಾಲಿಕೆ ನಿಯಂತ್ರಣ ಮಾಡಬಹುದು. ಆದರೆ ಇದರಿಂದ ಪಾಲಿಕೆಗೆ ಮಾಲಿಕತ್ವ ದೊರಕುವುದಿಲ್ಲ. ನಲ್ಲಿ, ಟ್ಯಾಂಕ್ ನಿಂದಲೇ ಸಂಪೂರ್ಣ ಜಾಗದ ಮಾಲೀಕತ್ವ ಪಾಲಿಕೆಗೆ ಸಿಗುವುದಿಲ್ಲ. ಮಕ್ಕಳು ಆಟವಾಡುವುದು, ಜನ ದಾರಿಯಾಗಿ ಬಳಸುವುದು, ಪೌರಕಾರ್ಮಿಕರು ಸೇರುವುದು ಮಾಲಿಕತ್ವಕ್ಕೆ ಪುರಾವೆಯಲ್ಲ. ಈದ್ಗಾ, ಸ್ಮಶಾನ ಬಹುಕಾಲದಿಂದ ಅಸ್ತಿತ್ವದಲ್ಲಿದೆ. 1938ರ ದಾಖಲೆಗಳಲ್ಲೂ ಈದ್ಗಾ ಎಂದು ಉಲ್ಲೇಖಿಸಲಾಗಿದೆ. 1871ರ ದಾಖಲೆಗಳಲ್ಲಿ ಸ್ಮಶಾನ ಎಂದು ಉಲ್ಲೇಖಿಸಲಾಗಿದೆ. ಮೊದಲಿಗೆ ಹೆಚ್ಚಿದ್ದ ಜಾಗ ಕಾಲಕ್ರಮೇಣ ಚಿಕ್ಕದಾಗಿದೆ. ಹೀಗಾಗಿ ಸ್ಮಶಾನಕ್ಕಾಗಿ ಜಾಗವನ್ನು ದೂರದಲ್ಲಿ ನೀಡಲಾಗಿದೆ. ಸ್ಮಶಾನಕ್ಕೆ ಜಾಗ ನೀಡಿದ ಮಾತ್ರಕ್ಕೆ ಈ ಜಾಗ ವಿನಿಮಯವಾಗಿಲ್ಲ. ಹೀಗಾಗಿ ಪಾಲಿಕೆ ಮೇಲ್ಮನವಿ ವಜಾಗೊಳಿಸಿದ ಆದೇಶ ಸರಿಯಿದೆ. ಮೈಸೂರಿನ ಹೈಕೋರ್ಟ್ ಆದೇಶ ಸೂಕ್ತವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.