
ಬೆಂಗಳೂರು, ಫೆಬ್ರವರಿ 16: ಕೊರೊನಾ ಬಳಿಕ ಮಕ್ಕಳ ಕಲಿಕೆಯ ಜೊತೆಗೆ ವರ್ತನೆಗಳಲ್ಲಿ ಬದಲಾಗಿ ಹೋಗಿವೆ. ಮನೆಯವರನ್ನು ಮರಿಬಹುದು, ಆದರೆ ಮೊಬೈಲ್ (Mobile) ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ ಸದ್ಯದ ಮಕ್ಕಳ ಪರಿಸ್ಥಿತಿ. ಅದರಲ್ಲೂ ಕೋವಿಡ್ (covide) ಸಮಯದಲ್ಲಿ ಮಕ್ಕಳು ಮೊಬೈಲ್ನಲ್ಲೇ ಕಳೆದುಹೋಗುತ್ತಿದ್ದರು. ಅತಿಯಾದ ಮೊಬೈಲ್ ಬಳಕೆ ಮಕ್ಕಳನ್ನ ಕೆಟ್ಟ ಚಟಕ್ಕೆ ದುಡುತ್ತಿದೆ. ಹೀಗಾಗಿ ಪೋಷಕರು ನಿಮ್ಹಾನ್ಸ್ ಮೊರೆ ಹೋಗುತ್ತಾರೆ.
ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಅಂತ ದಿನದ 10ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ದು. ನಿತ್ಯ ಮೊಬೈಲ್, ಇಂಟರ್ನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಇದೀಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಕೆಲಸನೇ ಇಲ್ಲ. ಓದು ಮೊದಲೇ ಇಲ್ಲ ಅಂತಿದ್ದಾರೆ. ಮೊಬೈಲ್ ಅಡಿಕ್ಷನ್ಗೆ ಬಲಿ ಆಗುತ್ತಿದ್ದಾರೆ. ಇದರಿಂದ ನೊಂದ 8000 ಸಾವಿರಕ್ಕೂ ಹೆಚ್ಚು ಪೋಷಕರು ಮೊಬೈಲ್ ಅಡಿಕ್ಷನ್ ಕಡಿಮೆ ಮಾಡುವಂತೆ ನಿಮ್ಹಾನ್ಸ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ
ಮಕ್ಕಳಲ್ಲಿ ಗೇಮಿಂಗ್ ಚಟ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಮೊಬೈಲ್ ಅಡಿಕ್ಷನ್ನಿಂದ ಮೂರು ಮಕ್ಕಳು ಬಲಿಯಾಗಿದ್ದಾರೆ. ಪಬ್ಜಿ ಗೀಳಿನಿಂದ 23 ವರ್ಷದ ಯುವಕನಿಗೆ ಬ್ರೇನ್ ಅಟ್ಯಾಕ್ ಆಗಿದೆ. ಈ ಬೆನ್ನಲ್ಲೇ ನಿಮ್ಹಾನ್ಸ್ ಕದ ತಟ್ಟುತ್ತಿರುವರ ಪೋಷಕರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೀಗಾಗಿ ಮೊಬೈಲ್ ಅಡಿಕ್ಷನ್ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಚಟವನ್ನು ನಿಯಂತ್ರಿಸಲು ನಿಮ್ಹಾನ್ಸ್ ‘ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ SHUT – ಶಟ್’ ಕ್ಲಿನಿಕ್ ಶುರುವಾಗಿದ್ದು, ಪೋಷಕರಿಗಾಗಿಯೇ ವಿಶೇಷ ಆನ್‌ಲೈನ್ ತರಬೇತಿಯನ್ನು ಆಯೋಜನೆ ಮಾಡಲಾಗುತ್ತಿದೆ.
ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸುವುದು ಹೇಗೆ ಅಂತ ಆನ್ಲೈನ್ ಸೆಷನ್ ಮೂಲಕ ವೈದ್ಯರು ಪೋಷಕರಿಗೆ ತರಬೇತಿ ನೀಡುತ್ತಿದ್ದಾರೆ. ಗೇಮಿಂಗ್ ಮತ್ತು ಅಶ್ಲೀಲತೆಯ ವ್ಯಸನ ಮುಕ್ತರಾಗುವ ಬಗ್ಗೆಯೂ ವಿಶೇಷ ತರಬೇತಿ ಶುರು ಮಾಡಿದ್ದಾರೆ. ಈಗಾಗಲೇ 8 ಸಾವಿರ ಕರೆಗಳು ರಿಜಿಸ್ಟರ್ ಆಗಿದ್ದು, ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್ಗಳಲ್ಲಿ ಆರಂಭ ಮಾಡಲು ನಿಮ್ಹನ್ಸ್ ಮುಂದಾಗಿದೆ.
ತಂತ್ರಜ್ಞಾನದ ವ್ಯಸನ ನಿರ್ವಹಣೆಗಾಗಿ ಪೋಷಕರ ಗುಂಪು PGMTA ಎಂಬ ಹೆಸರಿನಲ್ಲಿ ಪ್ರತಿ ಶನಿವಾರ ಆನ್‌ಲೈನ್ ಮೂಲಕ ಪೋಷಕರಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೂ ಸುಮಾರು 8000ಕ್ಕೂ ಹೆಚ್ಚು ಪೋಷಕರು ಇದರ ಲಾಭ ಪಡೆದಿದ್ದಾರೆ.
ಇತ್ತೀಚೆಗೆ ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು, ಸುಳ್ಳು ಹೇಳುವುದು ಅಥವಾ ಆಕ್ರಮಣಕಾರಿಯಾಗಿ ವರ್ತಿಸುವುದು ಮಕ್ಕಳಲ್ಲಿ ಕಂಡುಬರುತ್ತಿದೆ. ಈ ಭಯದಿಂದಲೇ ಪೋಷಕರು ಅಸಹಾಯಕರಾಗಿದ್ದಾರೆ. ಇಂತಹ ಘಟನೆಗಳು ಅನೇಕ ಕುಟುಂಬಗಳಲ್ಲಿ ಗಂಭೀರ ಜಗಳಗಳಿಗೆ ಕಾರಣವಾಗಿದ್ದು, ಕೌನ್ಸಿಲಿಂಗ್‌ಗಾಗಿ ಮನಶಾಸ್ತ್ರಜ್ಞರನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಆರಂಭದಲ್ಲೇ ಎಚ್ಚರವಹಿಸುವಂತೆ ಮನೋವೈದ್ಯೆ ಡಾ. ಮಾಲಾ ಮುರಳೀಧರ್ ಸಲಹೆ ನೀಡಿದ್ದಾರೆ.
ಇನ್ನು ಕೊರೊನಾದಿಂದ ವಿದ್ಯಾರ್ಥಿಗಳಲ್ಲಿ ಮೊಬೈಲ್ ಅಡಿಕ್ಷನ್ಗೆ ತುತ್ತಾಗಿರುವ ಪ್ರಮಾಣ ಏರಿಕೆ ಕಂಡಿದೆ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ನಾನಾ ಅವಾಂತರಗಳಿಗೆ ಬಲಿ ಆಗತ್ತಿದ್ದಾರೆ. ಕೋವಿಡ್ ಹಾವಳಿ ತಗ್ಗಿ ಆನ್ಲೈನ್ ಕ್ಲಾಸ್ನಿಂದ ಶಿಕ್ಷಣ ಇಲಾಖೆ ಹೊರ ಬಂದು ಆಫ್ ಲೈನ್ ಕ್ಲಾಸ್ ಶುರುವಾದರೂ ಮಕ್ಕಳು ಮಾತ್ರ ಮೊಬೈಲ್ ಗೀಳಿನಿಂದ ಹೊರ ಬಂದಿಲ್ಲ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸದ್ಯ ಮಕ್ಕಳಲ್ಲಿ ಹೆಚ್ಚಾದ ಮೊಬೈಲ್ ಗೀಳು ನಾನಾ ಮಾನಸಿಕ, ದೈಹಿಕ ಸಮಸ್ಯೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಸಮಸ್ಯೆಯಿಂದ ಪೋಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ: ಶಿಶುವಿಗೆ ಹಸುವಿನ ಹಾಲು ನೀಡುವುದಕ್ಕೆ ಸರಿಯಾದ ಸಮಯವಿದೆಯೇ? ಯಾವಾಗ ಆರಂಭ ಮಾಡಬೇಕು ತಿಳಿದುಕೊಳ್ಳಿ
ಒಟ್ಟಿನಲ್ಲಿ ಮಕ್ಕಳು ಮೊಬೈಲ್ಗೆ ದಾಸರಾಗಿರುವುದು ಸುಳ್ಳಲ್ಲ. ಮೀತಿಮಿರಿದ ಮೊಬೈಲ್ ಬಳಕೆ ಮಕ್ಕಳ ಮಾನಸಿಕ, ದೈಹಿಕ ಸಮಸ್ಯೆಗೂ ಕಾರಣವಾಗಿದ್ದು, ಪೊಷಕರ ವರ್ಗ ಎಚ್ಚರವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.