Chitra Santhe: ರಾಜಧಾನಿಯಲ್ಲಿ ಮತ್ತೊಮ್ಮೆ ಚಿತ್ರಸಂತೆ! ಕಲಾ ರಸಿಕರೆ ಈ ಡೇಟ್ ಸೇವ್ ಮಾಡಿಕೊಳ್ಳಿ
ಚಿತ್ರಕಲಾ ಪರಿಷತ್ನಿಂದ ಪ್ರತಿವರ್ಷ ಚಿತ್ರಸಂತೆಯನ್ನ ಆಯೋಜನೆ ಮಾಡಲಾಗುತ್ತೆ. ಈ ವರ್ಷ ಚಿತ್ರ ಸಂತೆಗೆ ಡೇಟ್ ಫಿಕ್ಸ್ ಆಗಿದ್ದು, ಅಂತರಿಕ್ಷ ಪರಿಕಲ್ಪನೆಯಲ್ಲಿ ಈ ಬಾರಿ ಚಿತ್ರಸಂತೆಯನ್ನ ಆಯೋಜಿಸಲಾಗುತ್ತೆ. ಚಂದ್ರಯಾನ 3 ಸಕ್ಸಸ್ ಆಗಿರುವ ಹಿನ್ನೆಲೆ ಈ ಬಾರಿಯ ಚಿತ್ರಸಂತೆ ಅಂತರಿಕ್ಷ ಪರಿಕಲ್ಪನೆಯಲ್ಲಿ ಚಿತ್ರಸಂತೆಯನ್ನ ಆಯೋಜನೆ ಮಾಡಿದ್ದು, ಸಧ್ಯ ಚಿತ್ರಕಲಾ ಸಂತೆಗೆ 3 ಸಾವಿರಕ್ಕು ಹೆಚ್ಚು ಅರ್ಜಿಗಳು ಬಂದಿವೆ.

ಬೆಂಗಳೂರು, ಡಿ.21: ಚಿತ್ರಕಲಾ ಪರಿಷತ್ (Chitrakala Parishath) ಪ್ರತಿ ವರ್ಷ ಜನವರಿ ತಿಂಗಳಲ್ಲಿ ಚಿತ್ರಸಂತೆಯನ್ನ(Chitra Santhe 2023) ಆಯೋಜನೆ ಮಾಡುತ್ತೆ. ಈ ವರ್ಷವು ಚಿತ್ರಸಂತೆಗೆ ಡೇಟ್ ಫಿಕ್ಸ್ ಆಗಿದ್ದು, ಚಿತ್ರಕಲಾಪ್ರಿಯರು ಚಿತ್ರಸಂತೆಗೆ ಬರುವುದಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಚಿತ್ರಕಲಾ ಪ್ರಿಯರು ಚಿತ್ರಸಂತೆಗೆ ಬರಲು ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಈ ಬಾರಿಯ ಚಿತ್ರಸಂತೆ ಜನವರಿ 7ರಂದು ನಡೆಯಲಿದೆ. ಬೆಳ್ಳಗ್ಗೆ 8 ಗಂಟೆಗೆ ಆರಂಭವಾಗಿ, ಸಂಜೆ 8 ಗಂಟೆಯವರೆಗೂ ನಡೆಯಲಿದೆ.
ಚಿತ್ರಸಂತೆಯನ್ನ ಸಿಎಂ ಸಿದ್ದಾರಾಮಾಯ್ಯ ಉದ್ಘಾಟನೆ ಮಾಡಲಿದ್ದು, ಚಿತ್ರಸಂತೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಈಗಾಗಲೇ ಚಿತ್ರಕಲಾ ಪರಿಷತ್ ಮಾಡಿಕೊಳ್ಳುತ್ತಿದೆ. ಇನ್ನು, ಚಂದ್ರಯಾನ 3 ಸಕ್ಸಸ್ ಆಗಿರುವ ಹಿನ್ನೆಲೆ ಈ ಬಾರಿಯ ಚಿತ್ರಸಂತೆ ಅಂತರಿಕ್ಷ ಪರಿಕಲ್ಪನೆಯಲ್ಲಿ ಚಿತ್ರಸಂತೆಯನ್ನ ಆಯೋಜನೆ ಮಾಡಿದ್ದು, ಸಧ್ಯ ಚಿತ್ರಕಲಾ ಸಂತೆಗೆ 3 ಸಾವಿರಕ್ಕು ಹೆಚ್ಚು ಅರ್ಜಿಗಳು ಬಂದಿವೆ. ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಬಾಹ್ಯಕಾಶ ಕುರಿತಂತೆ ಚಿತ್ರಕಲೆ, ಶಿಲ್ಪಕಲೆ, ರಾಕೆಟ್‌ನಾ ಹೆಸರಿನಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಇನ್ನು ಚಿತ್ರಸಂತೆಯಲ್ಲಿ 100 ರುಪಾಯಿಯಿಂದ ಆರಂಭವಾಗಿ ಲಕ್ಷದವರೆಗೂ ಚಿತ್ರಕಲೆಗಳು ಸಿಗಲಿದ್ದು, ಈ ಬಾರಿ ಮೈಸೂರು ಶೈಲಿಯ ಕಲೆ, ತಂಜಾವೂರಿನ ಶೈಲಿ, ರಾಜಾಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ಚಿತ್ರಗಳನ್ನ ರಚಿಸಲಾಗುತ್ತಿದೆ. ಅಲ್ಲದೇ ಆಕ್ರಿಕಲ್, ಕೊಲಾಜ್, ಲಿಯೋಗ್ರಾಫ್, ಡೂಡಲ್ ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಇನ್ ಸ್ಟಲೇಶನ್, ಫಾರ್ಮಾಮೆನ್ಸ್ ಸೇರಿದಂತೆ ಹಲವು ಪ್ರತಿಷ್ಟಾಪನ ಕಲೆಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನರು ಚಿತ್ರಸಂತೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ವರ್ಚ್ಯುವಲ್ ಚಿತ್ರಸಂತೆ 2021: ಆನ್ಲೈನ್ನಲ್ಲಿ ಕಲಾವಿದನ ಕುಂಚ ಮಾತಾಡಿದಾಗ..
ಚಿತ್ರಕಲಾ ಸಂತೆಗೆ ಹೆಚ್ಚಿನ ಜನರು ಬರುವ ಹಿನ್ನೆಲೆ ಚಿತ್ರಕಲಾ ಪರಿಷತ್ ರಸ್ತೆ ಸಂಪರ್ಕಿಸುವ ರಸ್ತೆ ಜನವರಿ 7 ರಂದು ಕ್ಲೋಸ್ ಆಗಲಿದ್ದು, ಯಾವುದೇ ಸಮಸ್ಯೆಗಳಾಗದಂತೆ ಪೋಲಿಸರು, ಚಿತ್ರಕಲಾ ಪರಿಷತ್ ನಾ ಸಿಬ್ಬಂದಿಗಳು ಹಾಗೂ ಟ್ರಾಫಿಕ್ ಗೆ ಕಡಿವಾಣ ಹಾಕಲು ಟ್ರಾಫಿಕ್ ಪೋಲಿಸರನ್ನ ನಿಯೋಜಿಸಲಾಗಿದೆ. ಒಟ್ನಲ್ಲಿ, ಚಿತ್ರಸಂತೆ ಅಂದ್ರೆನೇ ಅದೊಂದು ರೀತಿಯಾ ಹಬ್ಬ. ಸಧ್ಯ ಹಬ್ಬವನ್ನ ಕಣ್ತುಂಬಿಕೊಳ್ಳಲು ನಮ್ಮರಾಜ್ಯದ ಜನರಷ್ಟೇ ಅಲ್ಲದೇ ವಿವಿಧ ರಾಜ್ಯಗಳಿಂದಲೂ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ