ಜಪಾನ್​​ ಮಾದರಿಯಲ್ಲಿ ಕರ್ನಾಟಕದ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್​​

ಜಪಾನ್ ಪ್ರವಾಸದ ಬಳಿಕ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಜಪಾನ್ ಮಾದರಿಯ ಕಸ ನಿರ್ವಹಣೆ ಮತ್ತು ಮೆಟ್ರೋ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಕನಸು ಬಿಚ್ಚಿಟ್ಟಿದ್ದಾರೆ. ಬಿಯಾಂಡ್ ಬೆಂಗಳೂರಿಗೆ ಹೆಚ್ಚು ಫೋಕಸ್ ಮಾಡ್ಬೇಕು ಎಂದಿದ್ದೇನೆ. ನಾವು ಹಿಂದೆ ಇದ್ದೇವೆ, ಅದನ್ನು ಒಪ್ಪಿಕೊಳ್ಳಬೇಕು ಎಂದವರು ತಿಳಿಸಿದ್ದಾರೆ. ಜೊತೆಗೆ ಬರ ಪರಿಹಾರ ವಿಚಾರವಾಗಿ ಕೇಂದ್ರಕ್ಕೆ ಇದೇ ವೇಳೆ ಅವರು ಡೆಡ್‌ಲೈನ್ ಕೂಡ ನೀಡಿದ್ದಾರೆ.

ಜಪಾನ್​​ ಮಾದರಿಯಲ್ಲಿ ಕರ್ನಾಟಕದ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್​​
ಡಿಕೆ ಶಿವಕುಮಾರ್​​
Edited By:

Updated on: Nov 28, 2026 | 12:26 PM

ಬೆಂಗಳೂರು, ನವೆಂಬರ್​​ 28: ಜಪಾನ್ ಪ್ರವಾಸ ವೇಳೆ ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ ನೀಡಲಾಗಿದ್ದು, ಭಾರತದಲ್ಲಿ ಪ್ರಥಮ ಆದ್ಯತೆ ಕರ್ನಾಟಕ ಅಂತಾ ಅವರು ತಿಳಿಸಿರುವುದಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಂದಿನ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಜಪಾನ್ ಪ್ರವಾಸ ವೇಳೆ ಹೂಡಿಕೆದಾರರಿಗೆ ಆಹ್ವಾನ ಮಾಡಿದ್ದೇವೆ. ಇಡೀ ಪ್ರಪಂಚ ಬದಲಾವಣೆ ಆಗಿದೆ. ಜಪಾನ್, ಯುರೋಪ್, ಸೌದಿ, ಅಮೆರಿಕ ಸಾಕಷ್ಟು ಅಭಿವೃದ್ಧಿ ಆಗಿದೆ. ಏಷ್ಯಾ ಭಾಗದಲ್ಲಿ ನಮ್ಮ ಕರ್ನಾಟಕ ಬೆಳೆವಣಿಗೆ ಕಾಣುತ್ತಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದವರು ತಿಳಿಸಿದ್ದಾರೆ.

‘ಜಪಾನಿಗರಿಂದ ಸಮಯಕ್ಕೆ ಬಹಳ ಮಹತ್ವ’

ಜಪಾನ್​ನಲ್ಲಿ ಬುಲೆಟ್ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಸಮಯಕ್ಕೆ ಸರಿಯಾಗಿ ರೈಲು ಬರುತ್ತೆ. ವಿಳಂಬದ ಪ್ರಶ್ನೆಯೇ ಇಲ್ಲ. ಯಾಕೆಂದರೆ ಅಲ್ಲಿ ಸಮಯಕ್ಕೆ ಬಹಳ ಮಹತ್ವ ನೀಡುತ್ತಾರೆ. ಪ್ಲಾನ್ ಆಗಿ ಜಪಾನ್ ಕಟ್ಟಿದ್ದಾರೆ, ನಮ್ಮಲ್ಲೂ ಆ ಕೆಲಸ ಆಗಬೇಕು. ಜಪಾನ್​ನಲ್ಲಿ ಮೆಟ್ರೋ ಸಹ ಹಾಗೆಯೇ ಅಭಿವೃದ್ಧಿ ಕಂಡಿದೆ. ಕಸ ನಿರ್ವಹಣೆಯೂ ಅಲ್ಲಿ ಚೆನ್ನಾಗಿದ್ದು, 25 ವರ್ಷಗಳ ಹಿಂದೆಯೇ 5 ಎಕರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಅವರು ಕಸವನ್ನು ಬರ್ನ್ ಮಾಡ್ತಾರೆ, ಆದರೂ ಅದು ವಾಸನೆ ಸಹ ಬರುವುದಿಲ್ಲ. ಆ ಮಾಡೆಲ್ ಬಗ್ಗೆ ಕೂಡ ಚರ್ಚೆ ಮಾಡಿದ್ದೇನೆ. ಬೆಂಗಳೂರು, ಹುಬ್ಬಳ್ಳಿ ನಗರದಲ್ಲಿ ಇದನ್ನು ಇಂಪ್ಲಿಮೆಂಟ್ ಮಾಡಬೇಕು. ಜಪಾನ್ ಟೀಮ್ ಬಂದ್ಮೇಲೆ ನಾವು ಎಲ್ಲಾ ಪ್ಲ್ಯಾನ್​ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

Loading...

ಇದನ್ನೂ ಓದಿ: ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ ಡಿಕೆ ಶಿವಕುಮಾರ್, ಖರ್ಗೆ-ರಾಹುಲ್ ಭೇಟಿ ಸಾಧ್ಯತೆ

‘ನಾವು ಹಿಂದೆ ಇದ್ದೇವೆ, ಅದನ್ನು ಒಪ್ಪಿಕೊಳ್ಳಬೇಕು’

3 ದಿನ ಕಡಿಮೆ ಆಯ್ತು, ಆದರೂ ಎಲ್ಲವನ್ನೂ ನೋಡಿದ್ದೇನೆ. ನಾವು ಹೋದ ಬಳಿಕ ಬೇರೆ ರಾಜ್ಯದವರು ಜಪಾನ್​ಗೆ ಹೋಗ್ತಿದ್ದಾರೆ. ಬಿಯಾಂಡ್ ಬೆಂಗಳೂರಿಗೆ ಹೆಚ್ಚು ಫೋಕಸ್ ಮಾಡ್ಬೇಕು ಎಂದಿದ್ದೇನೆ. ನಾವು ಹಿಂದೆ ಇದ್ದೇವೆ, ಅದನ್ನು ಒಪ್ಪಿಕೊಳ್ಳಬೇಕು. ನಾವು ಮೆಟ್ರೋದಲ್ಲಿ ಪ್ಲ್ಯಾನ್​ ಮಾಡಿಲ್ಲ, ಆದ್ರೆ ಜಪಾನ್​ನಲ್ಲಿ ಚೆನ್ನಾಗಿದೆ. ಇಡೀ ಜಪಾನ್ ದೇಶದಲ್ಲಿ ತಂತ್ರಜ್ಞಾನ ಇದೆ. ಜಪಾನ್​ ಸಾಕಷ್ಟು ಅಭಿವೃದ್ಧಿ ಆಗಿದೆ, ಒಳ್ಳೆಯ ಅನುಭವ ಸಿಕ್ಕಿದೆ. ನಮ್ಮ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಹ ಭೇಟಿ ಕೊಟ್ಟಿದ್ದಾರೆ. ಕರ್ನಾಟಕ ಇಡೀ ಭಾರತದಲ್ಲಿ FDIನಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಉದ್ದೇಶ ಕನ್ನಡಿಗರಿಗೆ ಹೆಚ್ಚು ಆದ್ಯತೆ ಸಿಗಬೇಕು. ಪ್ರವಾಸದ ವೇಳೆ ಟೊಯೋಟಾ ಕಂಪನಿಗೂ ಭೇಟಿ ನೀಡಿದ್ದು, ಜಪಾನಿಗರ ಆಲೋಚನೆ ಹಾಗೂ ಹೊಸ ತಂತ್ರಜ್ಞಾನ ಗಮನಿಸಿದ್ದೇನೆ. ಅಷ್ಟೇ ಅಭಿವೃದ್ಧಿ ನಮ್ಮಲ್ಲೂ ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.

ಬರ ಪರಿಹಾರ ವಿಚಾರದಲ್ಲಿ ಕೇಂದ್ರಕ್ಕೆ ಡೆಡ್​ಲೈನ್

ಇದೇ ವೇಳೆ ಬರ ಪರಿಹಾರ ವಿಚಾರದಲ್ಲಿ ಕೇಂದ್ರಕ್ಕೆ ಸಿಎಂ ಡಿಕೆಶಿ ಡೆಡ್​ಲೈನ್ ಕೂಡ ನೀಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ರೂ ಕೇಂದ್ರ ನಯಾಪೈಸೆ ಕೊಟ್ಟಿಲ್ಲ. ಚಳಿಗಾಲ ಅಧಿವೇಶನದೊಳಗೆ ಕೇಂದ್ರ ಬರ ಪರಿಹಾರ ಕೊಡಬೇಕು. ಇಲ್ಲದಿದ್ರೆ ಕೇಂದ್ರದ ವಿರುದ್ಧ ದೆಹಲಿ ಚಲೋ ಹಮ್ಮಿಕೊಳ್ಳಬೇಕಾಗುತ್ತೆ. ಸುಪ್ರೀಂಕೋರ್ಟ್​ಗೂ ನಾವು ಹೋಗಬೇಕಾಗುತ್ತದೆ ಎಂದವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ತುಮಕೂರಿಗೆ ಮೆಟ್ರೋ ವಿಚಾರವಾಗಿ ಡಿಸಿಎಂ ಪರಮೇಶ್ವರ್​​ ಅವರ ಜೊತೆಗೆ ತಾನು ಮಾತನಾಡಿದ್ದೇನೆ. ಆ ವಿಚಾರ ಚರ್ಚೆಯಲ್ಲಿದ್ದು, ಪಿಪಿಪಿ ಮಾಡೆಲ್ನಲ್ಲಿ ಯೋಜನೆ ಮಾಡಬೇಕು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us