
ಬೆಂಗಳೂರು, (ಅಕ್ಟೋಬರ್ 16): ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 7.5 ಕಿಮೀ ಎಲಿವೇಟೆಡ್ ಪಿಂಕ್ ಲೈನ್ ನಮ್ಮ ಮೆಟ್ರೋ ಮಾರ್ಗ ಆರಂಭಕ್ಕೆ ಸಿದ್ಧವಾಗಿದೆ. ರೈಲ್ವೆ ಸೇಫ್ಟಿ ಕಮೀಷನರ್ ಕೂಡ ತಪಾಸಣೆ ಮುಗಿಸಿ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ ಅವರು ಮೆಟ್ರೋ ಉದ್ಘಾಟನೆಗೆ ಡೇಟ್ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನವೆಂಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಪಿಂಕ್ ಲೈನ್ ಉದ್ಘಾಟನೆಯಾಗಬಹುದು. ಈ ಮಾರ್ಗ ಆರಂಭವಾದರೆ ಬೆಂಗಳೂರು ಮೆಟ್ರೋ 103.6 ಕಿ.ಮೀ. ವಿಸ್ತರಣೆಯೊಂದಿಗೆ ದೇಶದಲ್ಲೇ 2ನೇ ಅತಿ ಉದ್ದದ ಜಾಲವಾಗಲಿದೆ.
ಇನ್ನು ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆ ಯವರೆಗೆ ಸಂಪರ್ಕ ಕಲ್ಪಿಸುವ ಈ 7.5 ಕಿ.ಮೀ. ಮಾರ್ಗವು ಕಾರ್ಯಾರಂಭ ಮಾಡಿದರೆ, ಬೆಂಗಳೂರಿನ ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ.ಮೀ.ಗೆ ತಲುಪಲಿದ್ದು, ಇದು ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಲಿದೆ. ಈ ಮಾರ್ಗದಲ್ಲಿ ಜಯದೇವ ಆಸ್ಪತ್ರೆ ನಿಲ್ದಾಣವೂ ಸೇರಿದಂತೆ ಒಟ್ಟು ಆರು ನಿಲ್ದಾಣಗಳಿದ್ದು, ಇದು ನಗರದ ಮೂರನೇ ಪ್ರಮುಖ ಇಂಟರ್ ಚೇಂಜ್ ನಿಲ್ದಾಣವಾಗಲಿದೆ.
ಕಾಳೇನ ಅಗ್ರಹಾರ,ಹುಳಿಮಾವು,ಐಐಎಂಬಿ,ಜೆ.ಪಿ. ನಗರ 4ನೇ ಹಂತ ಜಯದೇವ ಆಸ್ಪತ್ರೆ (ಹಳದಿ ಮಾರ್ಗದೊಂದಿಗೆ ಇಂಟರ್ಚೇಂಜ್)ತಾವರೆಕೆರೆ ಮೆಟ್ರೋ ಸ್ಟೇಷನ್ ಗಳು ಓಪನ್ ಆಗಲಿದೆ. ಬನ್ನೇರುಘಟ್ಟ ರೋಡ್ ನಲ್ಲಿ ಸಾಕಷ್ಟು ಐಟಿ ಕಂಪನಿಗಳು ಮತ್ತು ಸ್ಕೂಲ್ ಕಾಲೇಜುಗಳಿವೆ. ಪಿಂಕ್ ಓಪನ್ ಆದ್ರೆ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ ಇಲ್ಲಿನ ನಿವಾಸಿಗಳು ಬಹಳ ಸಹಾಯ ಆಗಲಿದೆ ಅಂತಾರೇ.
ಒಟ್ನಲ್ಲಿ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಮಾಡಲು ಆಗಮಿಸುವಂತೆ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಲೋಕಾರ್ಪಣೆಗೆ ಮೋದಿ ಆಗಮಿಸುತ್ತಾರಾ ಎಂದು ಕಾದು ನೋಡಬೇಕಿದೆ.