ಬೆಂಗಳೂರು, ಜ.15: ರಾಜ್ಯ ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ (Bengaluru Traffic) ಕಡಿವಾಣ ಹಾಕಲು ಈ ಹಿಂದೆ ಬಿಜೆಪಿ ಸರ್ಕಾರ (BJP Government) ಚಾಲನೆ ನೀಡಿದ್ದ ಸುರಕ್ಷಾ 75 ಯೋಜನೆಯ ಕೂಗು ಮತ್ತೆ ಕೇಳಿಬರ್ತಿದೆ. ಬಸವರಾಜ ಬೊಮ್ಮಾಯಿ (Basavaraj Bommai) ಅವಧಿಯಲ್ಲಿ 150 ಕೋಟಿ ವೆಚ್ಚದಲ್ಲಿ ಆರಂಭಿಸಿದ್ದ ಈ ಯೋಜನೆ, ಚುನಾವಣೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಹೊಸ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಮರುಜೀವ ನೀಡೋ ಕೆಲಸಕ್ಕೆ ಪಾಲಿಕೆ ಚಿಂತನೆ ನಡೆಸಿದೆ. ಏನಿದು ಸುರಕ್ಷಾ 75, ಇದರ ಪ್ರಯೋಜನ ಏನು ಎಂಬ ಮಾಹಿತಿ ಇಲ್ಲಿದೆ.
ಸಿಲಿಕಾನ್ ಸಿಟಿಯ ಟ್ರಾಫಿಕ್ ಕಂಟ್ರೋಲ್ ಗೆ ಪೊಲೀಸ್ ಇಲಾಖೆ ಜೊತೆ ಪಾಲಿಕೆ ಕೂಡ ಕೈಜೋಡಿಸೋಕೆ ಸಜ್ಜಾಗಿದೆ. 2023ರಲ್ಲಿ ಟ್ರಾಫಿಕ್ ಕಂಟ್ರೋಲ್ ಗೆ ಅಂತಾ ಸುಮಾರು 150 ಕೋಟಿ ವೆಚ್ಚದಲ್ಲಿ ಜಾರಿಗೆ ತಂದಿದ್ದ ಸುರಕ್ಷಾ 75 ಮಿಷನ್, ಕೆಲ ಕಾರಣಗಳಿಂದ ನಿಂತುಹೋಗಿತ್ತು, ಇದೀಗ ಆ ಯೋಜನೆಗೆ ಮರುಜೀವ ನೀಡಲು ಪಾಲಿಕೆ ಸಜ್ಜಾಗಿದೆ. ಬೆಂಗಳೂರಿನ 75 ಜಂಕ್ಷನ್ ಗಳನ್ನ ಜನಸ್ನೇಹಿ ಮಾಡಲು ಆರಂಭಿಸಿದ್ದ ಈ ಯೋಜನೆಯನ್ನ ಇದೀಗ ಮತ್ತೆ ಶುರುಮಾಡೋಕೆ ಪಾಲಿಕೆ ಚಿಂತನೆ ನಡೆಸಿದೆ.
ಇನ್ನು ಈಗಾಗಲೇ ಪೊಲೀಸ್ ಇಲಾಖೆ ಜೊತೆ ಸೇರಿ ನಗರದಲ್ಲಿ ನಿರಂತರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ 75 ಜಂಕ್ಷನ್ ಗುರ್ತಿಸಿರೋ ಪಾಲಿಕೆ, ಆಯಾ ಜಂಕ್ಷನ್ ಗಳಲ್ಲಿ ಜನಸ್ನೇಹಿ ಕ್ರಮಗಳ ಅಳವಡಿಕೆಗೆ ಪ್ಲಾನ್ ಮಾಡಿದೆ. ಪಾದಚಾರಿ ಮಾರ್ಗ, ಸಿಗ್ನಲ್ ಲೈಟ್ ಗಳ ದುರಸ್ಥಿ, ವಾಹನಗಳ ವೇಗ ತಗ್ಗಿಸುವ ವ್ಯವಸ್ಥೆಗಳನ್ನ ಅಳವಡಿಸೋ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಯಾರಿ ನಡೆದಿದೆ.
ಇದನ್ನೂ ಓದಿ: ಇಂಟರ್ನೆಟ್ ಪ್ರಪಂಚ; ಶಾಲೆಗಳಲ್ಲಿ ಶುರುವಾದ ಗೂಗಲ್ ಹೋಮ್ ವರ್ಕ್, ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಆಕ್ರೋಶ
ಸದ್ಯ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬಜೆಟ್ ನಲ್ಲಿ ಈ ಯೋಜನೆಗೆ 150 ಕೋಟಿ ಮೀಸಲಿಡಲಾಗಿದ್ದು, ಆ ಹಣವನ್ನ ಬಳಸಿಕೊಂಡು ಕಾಮಗಾರಿ ಶುರುಮಾಡೋಕೆ ಪಾಲಿಕೆ ಒಲವು ತೋರಿದೆ. ಎಂಟು ಪ್ಯಾಕೇಜ್ ಗಳಲ್ಲಿ ಯೋಜನೆ ಜಾರಿಗೊಳಿಸಲು ಪ್ಲಾನ್ ಸಿದ್ಧವಾಗಿದ್ದು, ವೇಗವಾಗಿ ಬೆಳೆಯುತ್ತಿರೋ ವಾಹನಗಳ ಸಂಖ್ಯೆಯ ಜೊತೆಗೆ ಪಾದಚಾರಿಗಳಿಗೆ ಆಗ್ತಿರೋ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕೋಕೆ ಸಹಾಯವಾಗಲಿರೋ ಈ ಯೋಜನೆ ಜಾರಿಗೆ ಶೀಘ್ರದಲ್ಲೇ ಕೆಲಸ ಆರಂಭಕ್ಕೆ ಸೂಚಿಸಲು ಪಾಲಿಕೆ ತಯಾರಿ ನಡೆಸಿದೆ.
ಒಟ್ಟಿನಲ್ಲಿ ಟ್ರಾಫಿಕ್, ವಾಹನ ದಟ್ಟಣೆಯಿಂದ ಕಂಗಾಲಾಗಿರೋ ಸಿಲಿಕಾನ್ ಸಿಟಿ ಜನರಿಗೆ, ಸುರಕ್ಷಾ 75 ಯೋಜನೆ ವರದಾನವಾಗಲಿದೆ ಅಂತಾ ಪಾಲಿಕೆ ವಿಶ್ವಾಸ ವ್ಯಕ್ತಪಡಿಸಿದೆ. 2023ರಲ್ಲೇ ಆರಂಭವಾಗಬೇಕಿದ್ದ ಈ ಯೋಜನೆ ತಡವಾಗಿದ್ರೂ ಇದೀಗ ಮತ್ತೆ ಆರಂಭವಾಗೋ ಲಕ್ಷಣ ಕಾಣ್ತಿದೆ. 2025ರೊಳಗೆ ಈ ಯೋಜನೆ ಕಂಪ್ಲೀಟ್ ಮಾಡೋಕೆ ಪಾಲಿಕೆ ಚಿಂತನೆ ನಡೆಸಿದ್ದು, ಈ ಪ್ಲಾನ್ ನಿಂದ ರಾಜಧಾನಿಯ 75 ಜಂಕ್ಷನ್ ಗಳ ಟ್ರಾಫಿಕ್ ಎಷ್ಟರ ಮಟ್ಟಿಗೆ ಕಂಟ್ರೋಲ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:51 pm, Mon, 15 January 24