Covid 19 Karnataka Update: 28 ಸಾವಿರ ದಾಟಿತು ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ಪ್ರಮಾಣ ಶೇ 13
ಕರ್ನಾಟಕದ ಪಾಸಿಟಿವಿಟಿ ಪ್ರಮಾಣ ಶೇ 12.98 ಇದ್ದು, ಅಪಾಯದ ಹಂತ ಮುಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1,41,337 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಟ್ಟು 28,723 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ. 3105 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 12.98 ಇದ್ದು, ಅಪಾಯದ ಹಂತ ಮುಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1,41,337 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ 31,53,247 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,73,470 ಜನರು ಚೇತರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 20,121 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1695 ಜನರು ಚೇತರಿಸಿಕೊಂಡಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,09,312 ಸಕ್ರಿಯ ಪ್ರಕರಣಗಳಿವೆ. ಈವರೆಗೆ ನಗರದಲ್ಲಿ ಒಟ್ಟು 13,73,452 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,47,696 ಜನರು ಚೇತರಿಸಿಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬಾಗಲಕೋಟೆ 49, ಬಳ್ಳಾರಿ 400, ಬೆಳಗಾವಿ 227, ಬೆಂಗಳೂರು ಗ್ರಾಮಾಂತರ 418, ಬೀದರ್ 131, ಚಾಮರಾಜನಗರ 106, ಚಿಕ್ಕಬಳ್ಳಾಪುರ 246, ಚಿಕ್ಕಮಗಳೂರು 174, ಚಿತ್ರದುರ್ಗ 104, ದಕ್ಷಿಣ ಕನ್ನಡ 639, ದಾವಣಗೆರೆ 187, ಧಾರವಾಡ 338, ಗದಗ 110, ಹಾಸನ 654, ಹಾವೇರಿ 25, ಕಲಬುರಗಿ 338, ಕೊಡಗು 104, ಕೋಲಾರ 502, ಕೊಪ್ಪಳ 49, ಮಂಡ್ಯ 554, ಮೈಸೂರು 803, ರಾಯಚೂರು 172, ರಾಮನಗರ 239, ಶಿವಮೊಗ್ಗ 315, ತುಮಕೂರು 796, ಉಡುಪಿ 497, ಉತ್ತರ ಕನ್ನಡ 301, ವಿಜಯಪುರ 106, ಯಾದಗಿರಿ 18.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? ಬೆಂಗಳೂರು ನಗರ 7, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ ಮತ್ತು ಮಂಡ್ಯ ತಲಾ 1, ಮೈಸೂರು 2.
ವಿಜಯಪುರ: ಕೊರೊನಾ ಸೋಂಕಿನಿಂದ ಬಾಣಂತಿ ಸಾವು ಕೊರೊನಾ ಸೋಂಕಿನ ಮೂರನೇ ಅಲೆಗೆ ವಿಜಯಪುರ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ. ಗಂಡು ಮಗುವಿಗೆ ಜನ್ಮ ನೀಡಿದ 7ನೇ ದಿನ ಬಾಣಂತಿ ಸೋಂಕಿಗೆ ಬಲಿಯಾಗಿದ್ದಾರೆ. 21 ವರ್ಷದ ಮಹಿಳೆ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜನವರಿ 8ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿಯೇ ಮೃತಪಟ್ಟರು. ಕೊರೊನಾ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ 8 ದಿನದ ಮಗು ಅನಾಥವಾಗಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಬಾಗಲಕೋಟೆ: 20 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಾಗಲಕೋಟೆ ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಸಮೃದ್ಧಿ ಗುರುಕುಲದ 12 ವಿದ್ಯಾರ್ಥಿಗಳು, ಅಮೀನಗಡದ ಇಬ್ಬರು ಪಿಯು ವಿದ್ಯಾರ್ಥಿಗಳು ಸೇರಿದ್ದಾರೆ. ಸಮೃದ್ಧಿ ಗುರುಕುಲವನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ಕೊವಿಡ್ ಕಾಣಿಸಿಕೊಂಡಿರುವ ಶಾಲೆಗಳಿಗೆ ರಜೆ ನೀಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
Highest testing since the beginning of pandemic with 2.21 lakh tests today. ◾New cases in State:28,723 ◾New cases in B’lore: 20,121 ◾Positivity rate in State: 12.98% ◾Discharges: 3,105 ◾Active cases State: 1,41,337 (B’lore- 101k) ◾Deaths:14 (B’lore- 07) ◾Tests: 2,21,205
— Dr Sudhakar K (@mla_sudhakar) January 14, 2022
ಇದನ್ನೂ ಓದಿ: Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು ಇದನ್ನೂ ಓದಿ: ‘ಕೊರೊನಾ ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದರೆ ಇವರೆಲ್ಲ ಇರೋಕಾಗ್ತಾ ಇತ್ತಾ?’; ಅಗ್ನಿ ಶ್ರೀಧರ್ ಪ್ರಶ್ನೆ
Published On - 6:36 pm, Fri, 14 January 22