Cubbon Park: ವೀಕೆಂಡ್ ಕಬ್ಬನ್ ಪಾರ್ಕ್​ಗೆ ಹೋಗುವವರಿಗೆ ಟ್ರಾಫಿಕ್ ಪೊಲೀಸರಿಂದ ಗುಡ್ ನ್ಯೂಸ್

ಕಬ್ಬನ್ ಪಾರ್ಕ್ ಪಾರ್ಕಿಂಗ್ ಜಾಗ: ವಾರಾಂತ್ಯಗಳಲ್ಲಿ ಕಬ್ಬನ್ ಪಾರ್ಕ್‌ಗೆ ತೆರಳುವ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ವೀಕೆಂಡ್ ಉದ್ಯಾನವನಕ್ಕೆ ತೆರಳುವವರಿಗೆ ವಾಹನ ಪಾರ್ಕಿಂಗ್‌ಗೆ ನಿರ್ದಿಷ್ಟ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಆ ಸಂಬಂಧ ಪ್ರಕಟಣೆ ಹೊರಡಿಸಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

Cubbon Park: ವೀಕೆಂಡ್ ಕಬ್ಬನ್ ಪಾರ್ಕ್​ಗೆ ಹೋಗುವವರಿಗೆ ಟ್ರಾಫಿಕ್ ಪೊಲೀಸರಿಂದ ಗುಡ್ ನ್ಯೂಸ್
ಕೆಜಿಐಡಿ ಕಟ್ಟಡದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದ ನಕ್ಷೆ (ಕೃಪೆ: ಬೆಂಗಳೂರು ಟ್ರಾಫಿಕ್ ಪೊಲೀಸ್)
Image Credit source: Twitter

Updated on: Apr 18, 2025 | 7:40 AM

ಬೆಂಗಳೂರು, ಏಪ್ರಿಲ್ 18: ವೀಕೆಂಡ್ ಕಬ್ಬನ್ ಪಾರ್ಕ್‌ಗೆ (Cubbon Park) ಹೋಗುವವರು ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಪಾರ್ಕ್ ಮಾಡಿ ತೆರಳುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಇದನ್ನು ಮನಗಂಡು ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police), ಉದ್ಯಾನವನಕ್ಕೆ ತೆರಳುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಇನ್ನು ಮುಂದೆ ವಾರಾಂತ್ಯದಲ್ಲಿ ಕಬ್ಬನ್ ಪಾರ್ಕ್‌ಗೆ ತೆರಳುವರು ನಿರ್ದಿಷ್ಟ ಪ್ರದೇಶದಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕಬ್ಬನ್‌ ಪಾರ್ಕ್‌ಗೆ ಭೇಟಿ ನೀಡುವ ಸಾರ್ವಜನಿಕರು ಪ್ರತಿ ಭಾನುವಾರದಂದು ಹಾಗೂ ಹೈಕೋರ್ಟ್ ಕಾರ್ಯನಿರ್ವಹಿಸದೇ ಇರುವ ಶನಿವಾರಗಳಂದು ಹಳೆಯ ಕೆಜಿಐಡಿ ಕಟ್ಟಡದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಬ್ಬನ್ ಪಾರ್ಕ್‌ ಇತರ ಪಾರ್ಕಿಂಗ್ ಪ್ರದೇಶಗಳಿಗೆ ಅಸ್ತಿತ್ವದಲ್ಲಿರುವ ದರಗಳ ಪ್ರಕಾರ ಪಾವತಿ ಆಧಾರದ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದ್ದು, ಈ ಪಾರ್ಕಿಂಗ್ ಪ್ರದೇಶವು ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಮುಕ್ತವಾಗಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಕೋಲಾಹಲ: ಇಲ್ಲಿದೆ ಇನ್​ಸೈಡ್ ಡಿಟೇಲ್ಸ್
ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿಯಲ್ಲಿ ಒಳಪಂಗಡ ಗೊಂದಲ
ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್​
ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಯಪ್ರಕಾಶ್ ಹೆಗ್ಡೆ

ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವವರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇವೆ. ಕಬ್ಬನ್ ಉದ್ಯಾನವನಕ್ಕೆ ಹೋಗುವ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರಲ್ಲಿ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಮಡಿವಾಳದಲ್ಲಿಂದು ಸಂಚಾರ ನಿರ್ಬಂಧ

ಮಡಿವಾಳ ಪೊಲೀಸ್ ಠಾಣಾ ಸರಹದ್ದಿನ ಹೊಂಗಸಂದ್ರದಲ್ಲಿ ಊರ ಹಬ್ಬವಿರುವುದರಿಂದ ದೇವರ ಬ್ರಹ್ಮರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯುವ ಪ್ರಯುಕ್ತ ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ತಾತ್ಕಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದು, ಆ ಕುರಿತ ವಿವರವನ್ನು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ


ಇದನ್ನೂ ಓದಿ: ಶನಿವಾರ, ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಮತ್ತೊಂದೆಡೆ, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಬೆಂಗಳೂರು ಟ್ರಾಫಿಕ್ ಪೊಲೀಸರು ಚುರುಕುಗೊಳಿಸಿದ್ದಾರೆ. ಮಹದೇವಪುರ ವ್ಯಾಪ್ತಿಯ ಕನ್ನಮಂಗಲ ಜಂಕ್ಷನ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗುರುವಾರ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ