ಸೈಬರ್ ವಂಚನೆ: ಸುದೀಪ್ ಅಭಿಮಾನಿಗೆ ನಕಲಿ ATS ಬೆದರಿಕೆ, ಲಕ್ಷಾಂತರ ರೂ. ದೋಚಿದ ಸೈಬರ್ ಕಳ್ಳರು
ದಿನೇ ದಿನೇ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ವಂಚನೆಗೆ ಬಲಿಯಾಗುತ್ತಿದ್ದಾರೆ. ನಕಲಿ ATS/NIA ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಬೆದರಿಕೆ ಹಾಕಿ, 'ಸೈಬರ್ ಬಂಧನ' ನೆಪದಲ್ಲಿ ಹಣ ದೋಚಲಾಗುತ್ತಿದೆ. ಇತ್ತೀಚೆಗೆ ಉಪೇಂದ್ರ ದಂಪತಿ ಹಾಗೂ ಸುದೀಪ್ ಅಭಿಮಾನಿ ಲಕ್ಷಾಂತರ ರೂ ಕಳೆದುಕೊಂಡಿದ್ದಾರೆ. ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರವಾಗಿರಲು ಪೊಲೀಸರು ಜನರಿಗೆ ಸೂಚಿಸಿದ್ದಾರೆ.

ಬೆಂಗಳೂರು, ಡಿ.22: ದಿನೇ ದಿನೇ ಸೈಬರ್ (Cybercrime) ಚೋರರ ಕಾಟ ಹೆಚ್ಚಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇವರ ವಂಚನೆಗೆ ಬಲಿಯಾಗುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ದೋಚುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇವರ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಂತಹ ಮೋಸಕ್ಕೆ ಉಪೇಂದ್ರ ದಂಪತಿಗಳು ಕೂಡ ಒಳಗಾಗಿದ್ದರು. ಪೊಲೀಸ್, ಎನ್ಐಎ ಹೀಗೆ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ಅರೆಸ್ಟ್ ಮಾಡಿ ಲಕ್ಷ ಲಕ್ಷ ಹಣ ದೋಚಿರುವ ಅದೆಷ್ಟೊ ಘಟನೆಗಳು ವರದಿಯಾಗಿದೆ. ಇದರ ಬಗ್ಗೆ ದಿನನಿತ್ಯ ಒಂದಲ್ಲ ಒಂದು ಸುದ್ದಿಯಾಗುತ್ತಿದ್ದರೂ ಜನ ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯೂ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡುತ್ತ ಬಂದಿದೆ. ಇದೀಗ ಈ ವಂಚಕರು ಸುದೀಪ್ ಅಭಿಮಾನಿಯೊಬ್ಬರಿಗೆ ‘ATS'(ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಕೂಡ ಬಳಕೆಯಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ಆರೋಪದಿಂದ ನಿಮಗೆ ಮುಕ್ತಿ ಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ನಾವು ಹೇಳಿದಂತೆ ಕೇಳಿದ್ರೆ ಮಾತ್ರ ನಿಮಗೆ ಸರ್ಟಿಫಿಕೇಟ್ ಆಫ್ ಇನ್ವಸೇನಟ್ (Certificate of Innocence) ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬೆದರಿಕೆಗೆ ಭಯಗೊಂಡ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಣ ಕಳೆದುಕೊಂಡಿದ್ದಾರೆ.
ಈ ವಂಚನೆ ಬಗ್ಗೆ ವಿಸ್ತಾರವಾಗಿ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಂಚಿಕೊಂಡಿದ್ದಾರೆ. “ನನಗೆ ಒಬ್ಬ ವ್ಯಕ್ತಿ ಕಾಲ್ ಮಾಡಿ, ನಾವು ಎಟಿಎಸ್ ನಿಂದ ಕರೆ ಮಾಡುತ್ತಿದ್ದೇವೆ. ದೆಹಲಿ ರೆಡ್ ಫೋರ್ಟ್ ಬ್ಲಾಸ್ಟ್ ನಲ್ಲಿ ನಿಮ್ಮ ಕೈವಾಡವಿದೆ ಎಂದು ಹೇಳಿದ್ರು, ನನಗೂ ಸ್ವಲ್ಪ ಹೆದರಿಕೆ ಆಯಿತು. ಇಲ್ಲ ಸರ್ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಆದರೆ ಅವರು ನಿಮ್ಮ ಕೈವಾಡ ಇದೆ ಎಂಬ ಸಾಕ್ಷಿ ಸಿಕ್ಕಿದೆ. ನಮ್ಮ ಎನ್ ಐ ಎ ಟೀಂ ಸದ್ಯದಲ್ಲೆ ಕಾಲ್ ಮಾಡುತ್ತದೆ ಎಂದು +91 9620122894, +91 6262656645 ನಿಂದ ವೀಡಿಯೋ ಕರೆ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ, ನಾನು ಗೌರವ್ ಎನ್ ಐ ಎ ಆಫೀಸರ್, ನಿಮ್ಮ ವಿಡಿಯೋ ಹೇಳಿಕೆಬೇಕು ಎಂದು ನನ್ನ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾರೆ. ಜತೆಗೆ ನನ್ನ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೂಡ ಕೇಳಿದ್ದರೆ, ನಾವು ಹೇಳುವರೆಗೆ ಕಾಲ್ ಕಟ್ ಮಾಡಬೇಡಿ ಎಂದು ಹೇಳಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ತುಂಬಾ ಮೃದುವಾಗಿ ಮಾತನಾಡಲು ಶುರು ಮಾಡಿದ್ದಾರೆ, ನಿಮ್ಮ ಮೇಲಿನ ಆರೋಪ ಹೋಗಬೇಕೆಂದರೆ, ನಿಮಗೆ ಸರ್ಟಿಫಿಕೇಟ್ ಆಫ್ ಇನ್ವಸೇನಟ್ ಬೇಕೆಂದರೆ ಸ್ವಲ್ಪ ಹಣ ಪೇ ಮಾಡಬೇಕು. ಅದು ಗವರ್ನಮೆಂಟ್ ಫೀಸ್ ಎಂದು ಹೇಳಿದ್ದಾರೆ. ಈ ತನಿಖೆ ಮುಗಿದ ನಂತರ ವಾಪಾಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಶರಣ್ ಆರ್ ಮುಕುಂದ್ ಅವರು ವಂಚಕರಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೀಗೆ 5.53 ಲಕ್ಷ ರೂ.ವರೆಗೆ ಹಣವನ್ನು ವಂಚಕರಿಗೆ ಕಳುಹಿಸಿದ್ದಾರೆ. ಕೊನೆಗೆ ಶರಣ್ ಆರ್ ಮುಕುಂದ್ ಅವರಿಗೆ ಈ ಬಗ್ಗೆ ಅನುಮಾನ ಬಂದು 1930ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ..; ಸುದೀಪ್ ಹೇಳಿಕೆಯ ಅಸಲಿ ಅರ್ಥ ಹೇಳಿದ ಚಕ್ರವರ್ತಿ
ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಜಯಭಾರತ ಮಾತೆ ನಗರ ಹಾಗೂ ಗ್ರಾಮೀಣ ಸೇವಾಸಂಸ್ಥೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಯಲ್ಲಿ ವೃದ್ದಾಶ್ರಮ ಹಾಗೂ ನಿರ್ಗತಿಕ ಕೇಂದ್ರಗಳನ್ನು ಈ ಸಂಸ್ಥೆ ನಡೆಸುತ್ತದೆ. ಇದಕ್ಕಾಗಿ ವಿವಿಧ ದಾನಿಗಳಿಂದ ಸಹಾಯ ನಿರೀಕ್ಷಿಸಿದ್ದರು. ಕಂಪನಿಗಳಿಂದ ಸಿಎಸ್ಆರ್ ಫಂಡ್ನಿಂದ ಹಣ ನೆರವು ಕೋರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮನವಿ ಮಾಡಿದ್ದರು.ಇದನ್ನು ಗಮನಿಸಿದ ಅಸ್ಸಾಂನ ಸುರ್ಜಿತ್ ಮತ್ತು ಸಿದ್ದಾರ್ಥ ಹಾಗೂ ಪಶ್ಚಿಮ ಬಂಗಾಳದ ಮಾನಷ್ ಗೋಷ್ ಜಯ ಭಾರತ ಮಾತೆ NGO ಕಾರ್ಯದರ್ಶಿ ಶಶಾಂಕ್ ಒಳವಾಡೆಯವರನ್ನು ಸಂಪರ್ಕಿಸಿದ್ದಾರೆ. ನಾವು ಫಂಡ್ ಕೊಡುತ್ತೇವೆ. ವಿವಿಧ ಕಂಪನಿಗಳಿಂದಲೂ ಫಂಡ್ ಕೊಡಿಸುತ್ತೇವೆ ಅಂತ ನಂಬಿಸಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Mon, 22 December 25




