ಟ್ರಾಫಿಕ್ ಕಿರಿಕಿರಿ: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರಿನ ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ನಿರ್ಬಂಧ ಹೇರಿದ್ದಾರೆ. ಸಕ್ರಾ ಆಸ್ಪತ್ರೆ ಕಡೆಯಿಂದ ದೇವರಬಿಸನಹಳ್ಳಿಗೆ ನೇರ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದು, ಕಾಡಬಿಸನಹಳ್ಳಿ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ವ್ಯವಸ್ಥಿತ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ವಿನಂತಿಸಲಾಗಿದೆ.

ಬೆಂಗಳೂರು, ಜುಲೈ 14: ಬೆಂಗಳೂರಿನ (Bengaluru) ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಬದಲಿ ಮಾರ್ಗವನ್ನು ಸೂಚಿಸಿದ್ದಾರೆ.
ಸಂಚಾರ ನಿರ್ಬಂಧ:
ಸಕ್ರಾ ಆಸ್ಪತ್ರೆ ಕಡೆಯಿಂದ ದೇವರಬಿಸನಹಳ್ಳಿ ಇಕೋವರ್ಲ್ಸ್-ಇಂಟೆಲ್-ಇಕೋಸ್ಪೇಸ್ ಕಡೆಗೆ ನೇರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ:
ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಡ್ಡಾಯ ಎಡ ತಿರುವು ಪಡೆದು ಕಾಡಬಿಸನಹಳ್ಳಿ, ಕಡೆಯ ಸರ್ವೀಸ್ ರಸ್ತೆಯ ಮೂಲಕ ಸಾಗಿ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು, ದೇವರಬಿಸನಹಳ್ಳಿ, ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮುಖಾಂತರ ಸಂಚರಿಸಬಹುದಾಗಿದೆ.
ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ಮಾರತ್ಹಳ್ಳಿ ಕಡೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಕಾಡಬಿಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತ್ಹಳ್ಳಿ ಕಡೆಗೆ ಸಂಚರಿಸಬಹುದು.
ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ದೇವರಬಿಸನಹಳ್ಳಿ ರಸ್ತೆ ಕಡೆ ಸಂಚರಿಸುವ ವಾಹನಗಳು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಮಾರ್ಗದ ಮೂಲಕ ಮಧ್ಯ ಭಾಗದ ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಾಡಬಿಸನಹಳ್ಳಿ, ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ, ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು ದೇವರಬಿಸನಹಳ್ಳಿ, ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ ದೇವರಬಿಸನಹಳ್ಳಿ, ಜಂಕ್ಷನ್ ಮುಖಾಂತರ ಸಂಚರಿಸಬಹುದು.
ಟ್ರಾಫಿಕ್ ಪೊಲೀಸರ ಟ್ವೀಟ್
ಸಂಚಾರ ಸಲಹೆ / Traffic advisory” pic.twitter.com/lwP80zIbBq
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 14, 2025
ಇಕೋವರ್ಲ್ಡ್ (ಆರ್.ಎಂ.ಜಡ್) ಕಡೆಯಿಂದ ಮಾರತ್ಹಳ್ಳಿಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ, ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಾಡಬಿಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತಹಳ್ಳಿ, ಕಡೆಗೆ ಸಂಚರಿಸಬಹುದು.
ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ ಎಂದ ವ್ಯಕ್ತಿ
ಇಕೋವರ್ಲ್ಡ್ (ಆರ್.ಎಂ.ಜಡ್) ಕಡೆಯಿಂದ ದೇವರಬೀಸನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ, ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ, ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರ ಬೀಸನಹಳ್ಳಿ, ಜಂಕ್ಷನ್ ಬಲ ಮಾರ್ಗದ ಮೂಲಕ ಮಧ್ಯಭಾಗದ ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಾಡಬಿಸನಹಳ್ಳಿ, ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮೂಲಕ ಸಂಚರಿಸಬಹುದು.








