ಜನರ ತೆರಿಗೆ ಹಣದಲ್ಲಿ ಡಿಕೆ ಶಿವಕುಮಾರ್ ಶೋಕಿ; ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ
ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್(DK shivakumar) ಅವರು ನಡೆಸುತ್ತಿರುವ ಅಂಧ ದರ್ಬಾರ್ ಸಾಕ್ಷಿಯಾಗಿದೆ ಎಂದು ಬಿಜೆಪಿ(BJP) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಜೊತೆಗೆ ಡಿಕೆಶಿ ಅವರು ಹಾಕಿಕೊಂಡಿರುವ ಶಾಲಿನ ಬೆಲೆ ಕುರಿತು ವ್ಯಂಗ್ಯವಾಡಿದೆ.
ಬೆಂಗಳೂರು, ಜೂ.23: ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್(DK shivakumar) ಅವರು ನಡೆಸುತ್ತಿರುವ ಅಂಧ ದರ್ಬಾರ್ ಸಾಕ್ಷಿಯಾಗಿದೆ ಎಂದು ಬಿಜೆಪಿ(BJP) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ‘ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ 59,500 ಆಗಿದೆ. ಬೆಲೆ ಏರಿಕೆಯಿಂದ ಜನ ಒಂದು ಹೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಮಾತ್ರ ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಕಿಡಿಕಾರಿದ್ದಾರೆ.
ಕಾಸ್ಟ್ಲಿ ಕುಮಾರ್ ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ 59 ಸಾವಿರ ರೂ. ಎಂದು ಬಿಜೆಪಿ ಟ್ವೀಟ್
ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಡಿಸಿಎಂ @DKShivakumar ಅವರು ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿ.
ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ ₹59,500!!!
ಬೆಲೆಯೇರಿಕೆಯಿಂದ ಜನ ಒಂದ್ಹೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ, ಆದರೆ ಜನಪ್ರತಿನಿಧಿಗಳು ಮಾತ್ರ ಜನರ ತೆರಿಗೆ ದುಡ್ಡಿನಲ್ಲಿ… pic.twitter.com/JjqyO3iB8I
— BJP Karnataka (@BJP4Karnataka) June 23, 2024
ಇನ್ನು ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್, ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿತ್ತು. ಈ ಹಿನ್ನಲೆ ಸರ್ಕಾರದ ನಡೆಗೆ ಸಾರ್ವಜನಿಕರು ಸೇರಿದಂತೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ವಿಜಯಪುರದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ , ‘ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್-ಡೀಸೆಲ್ ದರ ಕಡಿಮೆ ಇದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲೂ ನಮ್ಮಲ್ಲಿ ಡೀಸೆಲ್ ದರ ಕಡಿಮೆಯಿದೆ ಎನ್ನುವ ಮೂಲಕ ಸಿಎಂ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Sun, 23 June 24