ಸಿಎಂ ಆಗಿ ನಾಳೆ ಡಿಕೆಶಿ ಪ್ರಮಾಣ: ಪದಗ್ರಹಣಕ್ಕೆ ಅಂತಿಮ ಹಂತದ ತಯಾರಿ, ಅತಿಥಿಗಳಿಗೆ 3 ರೀತಿಯ ಪಾಸ್​​ ವಿತರಣೆ

ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ನಾಳೆ ಸಂಜೆ 4:05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸರಳವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ನೀಡಲು ಸಿದ್ಧತೆ ನಡೆದಿದೆ. ಮಧ್ಯಾಹ್ನ 2 ಗಂಟೆ ಒಳಗಾಗಿ ಲೋಕಭವನಕ್ಕೆ ಬರುವಂತೆ ಅತಿಥಿಗಳಿಗೆ ಸೂಚನೆ ನೀಡಲಾಗಿದ್ದು, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಸಿಎಂ ಆಗಿ ನಾಳೆ ಡಿಕೆಶಿ ಪ್ರಮಾಣ: ಪದಗ್ರಹಣಕ್ಕೆ ಅಂತಿಮ ಹಂತದ ತಯಾರಿ, ಅತಿಥಿಗಳಿಗೆ  3 ರೀತಿಯ ಪಾಸ್​​ ವಿತರಣೆ
ಸಿಎಂ ಆಗಿ ನಾಳೆ ಡಿಕೆಶಿ ಪದಗ್ರಹಣಕ್ಕೆ ಅಂತಿಮ ಹಂತದ ತಯಾರಿ
Image Credit source: Tv9 Kannada
Edited By:

Updated on: Jun 02, 2026 | 12:23 PM

ಬೆಂಗಳೂರು, ಜೂನ್​​ 02: ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ (DK Shivakumar)​​ ನಾಳೆ (ಜೂನ್​​ 03) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದ ಗಾಜಿನಮನೆಯಲ್ಲಿ ಪದಗ್ರಹಣ ಸಮಾರಂಭ ಸಂಜೆ 4.05ಕ್ಕೆ ನೆರವೇರಲಿದ್ದು, ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ನಾಳೆಯ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಸಿನಿಮಾ ತಾರೆಯರು, ಶಾಸಕರು, ಮಾಜಿ ಸಚಿವರು ಸೇರಿ ಗಣ್ಯರು ಭಾಗಿಯಾಗಲಿದ್ದು, ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಸಿಎಂ ಆಗಿ ನಾಳೆ ಡಿ.ಕೆ. ಶಿವಕುಮಾರ್​​ ಪ್ರಮಾಣವಚನ
  • ಲೋಕಭವನದ ಗಾಜಿನಮನೆಯಲ್ಲಿ ನಡೆಯಲಿದೆ ಪದಗ್ರಹಣ
  • ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ವಿತರಣೆ

ಪ್ರಮುಖರಿಗೆ ಪ್ರತ್ಯೇಕ ವ್ಯವಸ್ಥೆ

ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಮುಖ ನಾಯಕರ ಕುಟುಂಬಗಳು, ಬೆಂಬಲಿಗರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ. ಅತಿ ಗಣ್ಯರು, ಗಣ್ಯರು ಹಾಗೂ ಸಾಮಾನ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ 2 ಗಂಟೆ ಒಳಗಾಗಿ ಲೋಕಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಯಾವುದೇ ಆಡಂಭರವಿಲ್ಲದೆ ಸರಳವಾಗಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇನ್ನು ನಾಳೆ ನಡೆಯಲಿರುವ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯನ್ನು ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್ ಕೂಡ​​ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು; ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!

ಪೊಲೀಸ್ ಅಧಿಕಾರಿಗಳ ಸಭೆ

ನಾಳೆ ಸಿಎಂ ಪ್ರಮಾಣವಚನ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್  ಅಧಿಕಾರಿಗಳ ಸಭೆ ಕರೆದಿದ್ದಾರೆ. ಎಲ್ಲಾ ವಿಭಾಗದ ಜಂಟಿ ಪೊಲೀಸ್ ಅಯುಕ್ತರು, ಡಿಸಿಪಿಗಳು, ಸಂಚಾರ ವಿಭಾಗದ ಡಿಸಿಪಿಗಳ ಜೊತೆ ಪೊಲೀಸ್‌ ಕಮಿಷನರ್​ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದು, ಬಂದೋಬಸ್ತ್ ಬಗ್ಗೆ ಸಲಹೆ, ಸೂಚನೆ ನೀಡಲಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಈ ಸಭೆ ಆಯೋಜನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:20 pm, Tue, 2 June 26

Sunil MH
Follow Us