ಹೆಬ್ಬಾಳ ರೈಲ್ವೆ ಹಳಿಯಲ್ಲಿ ಕಂತೆ ಕಂತೆ ಡಾಲರ್ ಪತ್ತೆ ಕೇಸ್; ಇಬ್ಬರು ಆರೋಪಿಗಳ ಬಂಧನ, ಡಾಲರ್ ಹಿಂದಿದೆ ರೋಚಕ ಕಥೆ
ಹೆಬ್ಬಾಳ ರೈಲ್ವೆ ನಿಲ್ದಾಣ ಬಳಿಯ ಹಳಿಯಲ್ಲಿ ಕಂತೆ ಕಂತೆ ಡಾಲರ್(Doller) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಲ್ಲಿ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು(Amruthahalli Police) ಬಂಧಿಸಿದ್ದಾರೆ. ಶರವಣ, ಬಿದನ್ನನ್ನು ಆರೋಪಿಗಳು.
ಬೆಂಗಳೂರು, ನ.16: ಹೆಬ್ಬಾಳ ರೈಲ್ವೆ ನಿಲ್ದಾಣ ಬಳಿಯ ಹಳಿಯಲ್ಲಿ ಕಂತೆ ಕಂತೆ ಡಾಲರ್(Doller) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಲ್ಲಿ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು(Amruthahalli Police) ಬಂಧಿಸಿದ್ದಾರೆ. ಶರವಣ, ಬಿದನ್ನನ್ನು ಆರೋಪಿಗಳು. ಹಳಿಯಲ್ಲಿ ಸಿಕ್ಕ ಡಾಲರ್ಸ್ನ್ನು ಪೊಲೀಸರಿಗೆ ಒಪ್ಪಿಸಿದ್ದ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಗೆ ಬಂಧಿತರು ಅಪಹರಿಸಿದ್ದರು. ಈ ಕೇಸ್ಗೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಘಟನೆ ವಿವರ
ನವೆಂಬರ್ 1 ರಂದು ಚಿಂದಿ ಆಯುವ ವ್ಯಕ್ತಿಗೆ ಡಾಲರ್ಸ್ ನೋಟು ಸಿಕ್ಕಿತ್ತು. 100ರ ಮುಖಬೆಲೆಯ 23 ಕಂತೆಗಳಲ್ಲಿ 30 ಮಿಲಿಯನ್ ಡಾಲರ್ನ್ನು ಗುತ್ತಿಗೆದಾರ ತೊಹಿಬುಲ್ ಇಸ್ಲಾಂಗೆ ಆತ ನೀಡಿದ್ದ. ಇದನ್ನು ನೋಡಿದ ಗುತ್ತಿಗೆದಾರ ಕೂಡಲೇ ಕರೆ ಮಾಡಿ ವಿಷಯ ತಿಳಿಸಿ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಗೆ ಕೊಟ್ಟಿದ್ದ, ಆತ ಡಾಲರ್ಗಳ ಕಂತೆಯನ್ನು ಪೊಲೀಸ್ ಕಮಿಷನರ್ಗೆ ಒಪ್ಪಿಸಿದ್ದ. ಇದಾದ ಬಳಿಕ ಖದೀಮರು ಇವರಿಬ್ಬರು ಅಪಹರಣ ಮಾಡಿದ್ದರು.
ಇದನ್ನೂ ಓದಿ:ಗೆಳೆಯನನ್ನೇ ಕೊಲೆಗೈದ ಯುವಕ; ದೂರದ ಊರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು
ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲ
ಬಪ್ಪಾ ಎಂಬುವವರಿಗೆ ಡಾಲರ್ಸ್ ಸಿಕ್ಕಿರುವ ವಿಷಯ ತಿಳಿದಿದ್ದ ಆರೋಪಿಗಳು, ನವೆಂಬರ್ 7ರಂದು ಆತನನ್ನು ಐವರು ಸೇರಿ ಅಪಹರಿಸಿದ್ದರು. ಆದರೆ, ಅದು ಆತನ ಬಳಿ ಇಲ್ಲವೆಂದು ತಿಳಿದ ಮೇಲೆ ನವೆಂಬರ್ 8ರ ಮಧ್ಯರಾತ್ರಿ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲನನ್ನು ಅಪಹರಿಸಿ ಡಾಲರ್ಸ್ ಕೊಡುವಂತೆ ಕೇಳಿ ಬೆದರಿಕೆ ಹಾಕಿದ್ದರು. ಅದನ್ನು ತೆಗೆದುಕೊಂಡು ಫಾರಿನ್ ಎಕ್ಸ್ಚೇಂಜ್ನಲ್ಲಿ ರೂಪಾಯಿಗೆ ಕನ್ವರ್ಟ್ ಮಾಡಿಸಿ ಹಂಚಿಕೊಳ್ಳಲು ಪ್ಲಾನ್ ಮಾಡಿದ್ದರು. ಆದ್ರೆ, ಸಿಕ್ಕ ಡಾಲರ್ಸ್ನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ವಿಷಯ ತಿಳಿದು ನಿರಾಸೆಗೊಂಡಿದ್ದರು. ಈ ಬಗ್ಗೆ ಕಲೀಮುಲ್ಲ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಇದೀಗ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ