ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ವಿದೇಶಿಯರು ಸೇರಿ 14 ಮಂದಿ ಅರೆಸ್ಟ್
ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಏಳು ಪ್ರತ್ಯೇಕ ಪ್ರಕರಣ ದಾಖಲು ಮಾಡಿ 14 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ 7.83 ಕೋಟಿ ಮೌಲ್ಯದ ಒಟ್ಟು ಎಂಟು ಮಾದರಿಯ ವಿವಿಧ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು, ಸೆ.16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಸಿಸಿಬಿ ಪೊಲೀಸರು(CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ(Drugs). ಹಾಗೂ ಮೂವರು ವಿದೇಶಿಯರು ಸೇರಿ 14 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7.83 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ತಿಳಿಸಿದರು. ಪೊಲೀಸರು ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಆರೋಪಿಗಳು ಮುಂಬೈ ಸೇರಿ ವಿದೇಶಗಳಿಂದ ಡ್ರಗ್ಸ್ ತಂದು ಮಾರುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು, ಮಾದಕವಸ್ತುಗಳ ವಿರುದ್ಧ ಸಮರ ಸಾರಿದ್ದು ಅಪಾರ ಪ್ರಮಾಣದಲ್ಲಿ ಡ್ರಗ್ ವಶ ಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ನಡೆದಿದೆ. ಡ್ರಗ್ಸ್ ಕಳವಳಕಾರಿ ಅಂಶ ಆಗಿದ್ದು, ಜನರಿಗೆ ಸೇರಲಿರು ಡ್ರಗ್ ನ್ನ ವಶಕ್ಕೆ ಪಡೆದು ನಾಶಪಡಿಸಲಾಗುವುದು. ವಿದ್ಯಾರಣ್ಯ ಪುರ, ಬನಶಂಕರಿ, ಕಾಟನ್ ಪೇಟೆ ಸೇರಿ 7 ಕೇಸ್ಗಳನ್ನ ದಾಖಲಿಸಲಾಗಿದೆ. ಒಟ್ಟು 7.83 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಡ್ರಗ್ಸ್ ಕೇಸ್ನಲ್ಲಿ ಒಟ್ಟು 14 ಜನರು ಅರೆಸ್ಟ್
ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಏಳು ಪ್ರತ್ಯೇಕ ಪ್ರಕರಣ ದಾಖಲು ಮಾಡಿ 14 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ ಒಟ್ಟು ಎಂಟು ಮಾದರಿಯ ವಿವಿಧ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಫೆಡ್ರೌನ್ (Mephedrone) ಎಂಬ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಒಟ್ಟು 1ಕೆಜಿ 800 ಗ್ರಾಂ ಮೆಫೆಡ್ರೌನ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೆಫೆಡ್ರೌನ್ ಡ್ರಗ್ಸ್ನು ಒಂದು ಗ್ರಾಂಗೆ 15,000ಕ್ಕೆ ಮಾರಾಟ ಮಾಡ್ತಿದ್ದರು. ಇನ್ನು ಈ ಕೇಸ್ನಲ್ಲಿ ಅರೆಸ್ಟ್ ಆದ ನೈಜೀರಿಯಾ ಮೂಲದ ಫ್ರಾನ್ಸಿಸ್ ಎಂಬ ಆರೋಪಿ 2012ರಲ್ಲಿ ಭಾರತಕ್ಕೆ ಬಂದಿದ್ದ. ಈತನ ಬಳಿ ಮೆಫ್ರೆಡ್ರೌನ್ ಜೊತೆಗೆ ಕೊಕೇನ್ ಮತ್ತು ಎಂಡಿಎಂಎ ಎಕ್ಸೆಟಸಿ ಪೌಡರ್ ಪತ್ತೆಯಾಗಿದೆ. ಈ ಒಬ್ಬ ಆರೋಪಿ ಬಳಿಯೇ ಮೂರು ಕೋಟಿ ಎಂಬತ್ತು ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಅಪರಾಧ ಸುದ್ದಿಗಳನ್ನ ಓದಲು ಇದರ ಮೇಲೆ ಕ್ಲಿಕ್ ಮಾಡಿ