ಒಂದೇ ಬೈಕ್ ಮೇಲೆ 81 ಕೇಸ್, 44 ಸಾವಿರ ದಂಡ ಬಾಕಿ; ಪೊಲೀಸರ ಜೊತೆ ವಾಗ್ವಾದ ಮಾಡಿ ಎಸ್ಕೇಪ್ ಆದ ಬೈಕ್ ಸವಾರ!
ಹೆಲ್ಮೆಟ್ ಹಾಕದೇ ಓಡಾಟ ಮಾಡುತ್ತಿದ್ದ ಬೈಕ್ ಸವಾರನನ್ನು ಡಿ.ಜೆ. ಹಳ್ಳಿ ಸಂಚಾರಿ ಪೊಲೀಸರು ನಿಲ್ಲಿಸಿ ದಂಡ ಕಟ್ಟುವಂತೆ ಹೇಳಿದ್ದಾರೆ. ಆದ್ರೆ ಬೈಕ್ ಸವಾರ ದಂಡ ಪಾವತಿಸದೆ ಪೊಲೀಸರಿಗೆ ನಿಂದಿಸಿದ್ದಾನೆ. ನೀವು ಸಾಚಾನಾ ಎಂದು ಬೈದಿದ್ದಾನೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಬೈಕ್ ಸವಾರ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ. ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದ ಬೈಕ್ ಸವಾರನನ್ನು ಡಿ.ಜೆ. ಹಳ್ಳಿ ಸಂಚಾರಿ ಪೊಲೀಸರು ನಿಲ್ಲಿಸಿ ಪ್ರಶ್ನಿಸಿದ್ದು ಸವಾರ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಬೈಕ್ ಸವಾರನ ಮೇಲೆ ಸುಮಾರು 81 ಕೇಸ್ಗಳಿದ್ದು 44 ಸಾವಿರ ದಂಡ ಬಾಕಿ ಇದೆ. ಹೀಗಾಗಿ ಸಾವಿರಾರು ದಂಡ ಬಾಕಿ ಉಳಿಸಿಕೊಂಡು ಹಾಯಾಗಿ ತಿರುಗಾಡುತ್ತಿರುವ ಬೈಕ್ ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಇದರಿಂದ ಸವಾರ ಪೊಲೀಸರ ವಿರುದ್ಧವೇ ಕೂಗಾಡಿದ್ದಾನೆ.
ಹೆಲ್ಮೆಟ್ ಹಾಕದೇ ಓಡಾಟ ಮಾಡುತ್ತಿದ್ದ ಬೈಕ್ ಸವಾರನನ್ನು ಡಿ.ಜೆ. ಹಳ್ಳಿ ಸಂಚಾರಿ ಪೊಲೀಸರು ನಿಲ್ಲಿಸಿ ದಂಡ ಕಟ್ಟುವಂತೆ ಹೇಳಿದ್ದಾರೆ. ಆದ್ರೆ ಬೈಕ್ ಸವಾರ ದಂಡ ಪಾವತಿಸದೆ ಪೊಲೀಸರಿಗೆ ನಿಂದಿಸಿದ್ದಾನೆ. ನೀವು ಸಾಚಾನಾ ಎಂದು ಬೈದಿದ್ದಾನೆ. ಮನೆ ಬಳಿಯೇ ಓಡಾಡುತ್ತಿರುವುದರಿಂದ ನಾನು ಹೆಲ್ಮೆಟ್ ಹಾಕಲ್ಲ ಎಂದು ವಾಗ್ವಾದ ನಡೆಸಿದ್ದಾನೆ. ಬೈಕ್ ಸವಾರ ಬರೋಬ್ಬರಿ 44 ಸಾವಿರ ದಂಡ ಬಾಕಿ ಉಳಿಸಿಕೊಂಡಿದ್ದು ದಂಡ ಕಟ್ಟದೇ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಹೆಲ್ಮೆಟ್ ಹಾಕದೇ, ನಂಬರ್ ಪ್ಲೇಟ್ ಹಾಕದೇ ಸಂಚರಿಸುತ್ತಿದ್ದಾನೆ. ಸದ್ಯ ಬೈಕ್ ಸವಾರನ ಪತ್ತೆಗೆ ಡಿ.ಜೆ.ಹಳ್ಳಿ ಸಂಚಾರಿ ಪೊಲೀಸರು ಬಲೆ ಬೀಸಿದ್ದಾರೆ.
ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು ಬೆಂಗಳೂರು: 2021ರ ಸೆಪ್ಟೆಂಬರ್ 18ರಂದು ಕಾರಿನ ಗಾಜು ಒಡೆದು ಎರಡೂವರೆ ಲಕ್ಷ ಹಣ, 2 ಫಾಸಿಲ್ ವಾಚ್ ಕದ್ದೊಯ್ದಿದ್ದ ಸತೀಶ್ ಅಲಿಯಾಸ್ ಸತ್ಯನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 8 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಫಾರ್ಚ್ಯೂನರ್ ಕಾರಿನ ಗಾಜು ಒಡೆದು ಎರಡೂವರೆ ಲಕ್ಷ ಹಣ, 2 ಫಾಸಿಲ್ ವಾಚ್ ಕಳ್ಳತನ ಮಾಡಲಾಗಿತ್ತು.
ಚಿತ್ತೂರಿನ ಶಾಂತಿಪುರ ನಿವಾಸಿಯಾಗಿರುವ ಆರೋಪಿ ಸತೀಶ್ ತಿರುಪತಿಯ ಲಾಡ್ಜ್ ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಶೋಕಿಗಾಗಿ ಕಳ್ಳತನ ಮಾಡ್ತಿದ್ದ. ಕೈಗೆ ಸ್ವಲ್ಪ ಹಣ ಸಿಕ್ಕರೆ ಸಿಟಿಗೆ ಬಂದು ಕಳ್ಳತನ ಮಾಡ್ತಿದ್ದ. ಆರೋಪಿ ಬಂಧನದಿಂದ ಒಟ್ಟು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಜ್ಙಾನಭಾರತಿ ಠಾಣೆ, ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯ ಎರಡು ಮನೆಗಳ ಪ್ರಕರಣ ಬೆಳಕಿಗೆ ಬಂದಿದೆ.
ಅಂಗಡಿಯಲ್ಲಿ ಗಾಂಜಾ ಮಾರಾಟ, ಆರೋಪಿ ಬಂಧನ ಕಲಬುರಗಿ: ಬಾಪು ನಗರದ ಕಿರಾಣಿ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರಮೇಶ್ ಕಾಳೆನನ್ನು ಪೊಲೀಸರು ಬಂಧಿಸಿದ್ದು 5 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್ಗೆ ಎಂಥ ಘಾತ!
ಮಂಗಳೂರು: ಕಳ್ಳತನ ಕೇಸ್ ಆರೋಪಿ ಕಸ್ಟಡಿಯಲ್ಲೇ ಸಾವು, ಪ್ರಕರಣ ತನಿಖೆ ಕೈಗೆತ್ತಿಕೊಂಡ CID