ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಪಟ್ಟಿಯಿಂದ ಕೈಬಿಡಲಾದ 84 ಲಕ್ಷ ಜನರಲ್ಲಿ ಶೇ 2 ರಷ್ಟು ಮಾತ್ರ ಮರುಸೇರ್ಪಡೆಗೆ ಅರ್ಜಿ!

ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 84 ಲಕ್ಷ ಅರ್ಹ ಮತದಾರರ ಪೈಕಿ ಕೇವಲ ಶೇಕಡಾ 2 ರಷ್ಟು ಜನರು ಮಾತ್ರ ಮರುಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 23 ರೊಳಗೆ ನಮೂನೆ 6 ಸಲ್ಲಿಸುವವರಿಗೆ ಅಕ್ಟೋಬರ್ 27 ರಂದು ಪ್ರಕಟವಾಗುವ ಅಂತಿಮ ಪಟ್ಟಿಯಲ್ಲಿ ಅವಕಾಶ ಸಿಗಲಿದೆ.

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಪಟ್ಟಿಯಿಂದ ಕೈಬಿಡಲಾದ 84 ಲಕ್ಷ ಜನರಲ್ಲಿ ಶೇ 2 ರಷ್ಟು ಮಾತ್ರ ಮರುಸೇರ್ಪಡೆಗೆ ಅರ್ಜಿ!
ಸಾಂದರ್ಭಿಕ ಚಿತ್ರ
Image Credit source: PTI

Updated on: Sep 19, 2026 | 9:02 AM

ಮುಖ್ಯಾಂಶಗಳು

  • ಮತದಾರರ ಪಟ್ಟಿಯಿಂದ ಹೊರಬಿದ್ದ 84 ಲಕ್ಷ ಜನರಲ್ಲಿ ಶೇ. 2 ರಷ್ಟಷ್ಟೇ ಅರ್ಜಿ.
  • ಹೆಸರು ಮರುಸೇರ್ಪಡೆಗೊಳಿಸಲು ಸೆಪ್ಟೆಂಬರ್ 23 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.
  • ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ನಡೆಯುತ್ತಿದ್ದು, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ಲಕ್ಷಾಂತರ ನಾಗರಿಕರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಜನರು ಮಾತ್ರ ಮತ್ತೆ ಹೆಸರನ್ನು ಸೇರಿಸಲು ಮುಂದೆ ಬಂದಿದ್ದಾರೆ. ಪಟ್ಟಿಯಿಂದ ಹೊರಗುಳಿದಿರುವ 84 ಲಕ್ಷ ಅರ್ಹ ಮತದಾರರ ಪೈಕಿ ಕೇವಲ 1.69 ಲಕ್ಷ ಜನರು ತಮ್ಮ ಹೆಸರನ್ನು ಮರುಸೇರ್ಪಡೆಗೊಳಿಸಲು ನಮೂನೆ 6 ಮತ್ತು ನಮೂನೆ 6A ಮೂಲಕ ಅರ್ಜಿ ಸಲ್ಲಿಸಿದ್ದಾರೆ.

1.08 ಕೋಟಿ ಹೆಸರುಗಳು ಪಟ್ಟಿಯಿಂದ ರದ್ದು!

ಮತದಾರರ ಪಟ್ಟಿಯ ಕರಡು ಪರಿಶೀಲನೆ ವೇಳೆ ವಾಸವಿಲ್ಲದವರು, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ನೋಂದಣಿ ಅಥವಾ ನಮೂನೆಗೆ ಸಹಿ ಮಾಡಲು ನಿರಾಕರಿಸಿದವರನ್ನು ಗುರುತಿಸಿ ಒಟ್ಟು 1.08 ಕೋಟಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಮೃತಪಟ್ಟವರು ಮತ್ತು ನಕಲಿ ಹೆಸರನ್ನು ಹೊರತುಪಡಿಸಿದರೆ, ಸುಮಾರು 84 ಲಕ್ಷ ಜನರು ‘ಗೈರುಹಾಜರಿ’ ಅಥವಾ ‘ಸ್ಥಳಾಂತರ’ ವರ್ಗದಲ್ಲಿದ್ದಾರೆ. ಜೂನ್ 16 ರಿಂದ ಸೆಪ್ಟೆಂಬರ್ 18 ರವರೆಗೆ ಒಟ್ಟು 6.4 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಬಹುತೇಕ ಅರ್ಜಿಗಳು ನೋಟಿಸ್ ನೀಡುವ ಮುನ್ನವೇ ಸಲ್ಲಿಕೆಯಾಗಿದ್ದವು.

ಸೆಪ್ಟೆಂಬರ್ 23 ಕೊನೆಯ ದಿನಾಂಕ

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರ ಪ್ರಕಾರ, ನಮೂನೆ 6 ಸಲ್ಲಿಸಲು ಯಾವುದೇ ನಿಗದಿತ ಅಂತಿಮ ಗಡುವಿಲ್ಲದಿದ್ದರೂ, ಸೆಪ್ಟೆಂಬರ್ 23 ರೊಳಗೆ ಅರ್ಜಿ ಸಲ್ಲಿಸುವವರ ಹೆಸರನ್ನು ಪರಿಶೀಲಿಸಿ ಅಕ್ಟೋಬರ್ 27 ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. 18 ವರ್ಷ ತುಂಬಿದ, ಭಾರತೀಯ ಪ್ರಜೆಯಾಗಿರುವ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ. ಬಿಬಿಎಂಪಿ ದಕ್ಷಿಣ, ಸೆಂಟ್ರಲ್ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೋಟಿಸ್ ತಲುಪಿರುವುದು ಕಂಡುಬಂದಿದೆ. ಅಧಿಕಾರಿಗಳು ಈ ವಾರಾಂತ್ಯದಲ್ಲಿ ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us